Darshan Thoogudeepa: ದರ್ಶನ್ ತೂಗುದೀಪ್‌ಗೆ ಡಿವೋರ್ಸ್ ನೀಡಲಿರುವ ವಿಜಯಲಕ್ಷ್ಮೀ?

ಕನ್ನಡ ಸಿನಿಮಾ ಇಂಡಸ್ಟ್ರಿಯ 'ಡಿ-ಬಾಸ್' ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿ ನರಳಿದ್ದಾರೆ. ದರ್ಶನ್ ತೂಗುದೀಪ್ ಬಾಳಲ್ಲಿ ಎಲ್ಲವೂ ಮುಳುಗಿ ಹೋಗುತ್ತಿದೆ. ಒಂದು ಕಡೆ ಸಿನಿಮಾಗಳು ಕೈತಪ್ಪಿ ಹೋಗುತ್ತಿದ್ದರೆ, ಇನ್ನೊಂದು ಕಡೆ ವೈಯಕ್ತಿಕ ಜೀವನದಲ್ಲಿ ಪವಿತ್ರಾ ಗೌಡ ವಿಚಾರಕ್ಕೆ ತಮ್ಮ ಸ್ವಂತ ಪತ್ನಿ ವಿಜಯಲಕ್ಷ್ಮೀ ದರ್ಶನ್ ಜೊತೆಗೆ ಗಲಾಟೆಗಳು ಆಗಿವೆ. ಹೀಗಿದ್ದಾಗ ಸದ್ಯ ಬಳ್ಳಾರಿ ಜೈಲು ಸೇರಿರುವ 'ದಾಸ' ದರ್ಶನ್ ವಿಲವಿಲ ಒದ್ದಾಡಿ ಹೋಗಿದ್ದಾರೆ. ಇಷ್ಟೆಲ್ಲದರ ನಡುವೆ ಇದೀಗ, ದರ್ಶನ್ ತೂಗುದೀಪ್‌ಗೆ ಡಿವೋರ್ಸ್ ನೀಡಲಿರುವ ವಿಜಯಲಕ್ಷ್ಮೀ?...

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವಿನ ಸಂಬಂಧ ಏನು? ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಅದೆಷ್ಟು ಆತ್ಮೀಯವಾಗಿ ಇದ್ದರು? ಅನ್ನೋದು ಇಡೀ ಜಗತ್ತಿಗೇ ಗೊತ್ತಾಗಿ ಹೋಗಿದೆ. ಅದರಲ್ಲೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ಪವಿತ್ರಾ ಗೌಡ ಮನೆಯ ಪೂರ್ತಿ ಹುಡುಕುತ್ತಿರುವ ಕರ್ನಾಟಕ ಪೊಲೀಸರಿಗೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡಳ ನಡುವೆ ಇದ್ದ ಸಂಬಂಧದ ಬಗ್ಗೆ ಸಾಕ್ಷ್ಯಗಳು ಲಭ್ಯ ಆಗುತ್ತಿವೆ. ದರ್ಶನ್ ತೂಗುದೀಪ್ ತಮ್ಮ ಪ್ರೀತಿ ಕುರುಹು ಎನ್ನುವಂತೆ, ಪವಿತ್ರಾ ಗೌಡಗಾಗಿ ರೇಣುಕಾಸ್ವಾಮಿ ಕೊಲೆಯನ್ನ ಮಾಡಿಸಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಫೋಟೋಸ್ ಪೊಲೀಸರ ಕೈಗೆ ಸಿಕ್ಕಿವೆ ಎನ್ನಲಾಗುತ್ತಿದ್ದು, ಈ ಕಾರಣಕ್ಕೆ ದರ್ಶನ್ ತೂಗುದೀಪ್‌ಗೆ ಡಿವೋರ್ಸ್ ನೀಡಲಿರುವ ವಿಜಯಲಕ್ಷ್ಮೀ?...

This Is What Happening In The Darshan Thoogudeepa Life Now

ದರ್ಶನ್ ತೂಗುದೀಪ್‌ಗೆ ವಿಜಯಲಕ್ಷ್ಮೀ ಡಿವೋರ್ಸ್?

ಪವಿತ್ರಾ ಗೌಡ ಪ್ರೀತಿ ಬಲೆಗೆ ದರ್ಶನ್ ತೂಗುದೀಪ್‌ನ ಸಿಲುಕಿಸಿ ಹೇಗೆಲ್ಲಾ ಆಟವಾಡಿಸುತ್ತಿದ್ದಳು? ಎಂಬುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ ಎಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜನ & ದರ್ಶನ್ ತೂಗುದೀಪ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಅಭಿಮಾನಿಗಳು ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇಂತಹ ಸ್ಥಿತಿಯಲ್ಲಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡಗೆ ಸಂಬಂಧಿಸಿದ ಖಾಸಗಿ ಫೋಟೋಗಳು ಲಭ್ಯವಾಗಿವೆ. ಇದೇ ಕಾರಣಕ್ಕೆ ಈಗ, ದರ್ಶನ್ ತೂಗುದೀಪ್‌ಗೆ ಡಿವೋರ್ಸ್ ನೀಡಲಿರುವ ವಿಜಯಲಕ್ಷ್ಮೀ?...

ಪವಿತ್ರಾ ಗೌಡ ಫೋಟೋ ಕಾರಣಕ್ಕೆ...?

ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ಅವರ ಡಿವೋರ್ಸ್ ಅಂದ್ರೆ ವಿವಾಹ ವಿಚ್ಛೇದನ ಕುರಿತು ಈಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಖಾಸಗಿ ಫೋಟೋಗಳು ಸಿಕ್ಕಿಬಿದ್ದ ಕಾರಣಕ್ಕೆ ಇದೀಗ ವಿಜಯಲಕ್ಷ್ಮೀ ಅವರು ಡಿವೋರ್ಸ್ ಕೊಡಲು ಸಜ್ಜಾಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದು, ಅಭಿಮಾನಿಗಳು ಕೂಡ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ಆದರೆ ಈ ಸುದ್ದಿ ಸುಳ್ಳು, ಯಾಕಂದ್ರೆ ಇತ್ತೀಚೆಗೆ ತಾನೆ ವಿಜಯಲಕ್ಷ್ಮೀ ಅವರು ಬಳ್ಳಾರಿಯ ಜೈಲಿಗೆ ಭೇಟಿ ಕೊಟ್ಟು ದರ್ಶನ್ ತೂಗುದೀಪ್ ಆರೋಗ್ಯ ವಿಚಾರಿಸಿದ್ದಾರೆ. ಇಂತಹ ಪರಿಸ್ಥಿತಿ ಇದ್ದಾಗ ದರ್ಶನ್ ತೂಗುದೀಪ್‌ಗೆ ವಿಜಯಲಕ್ಷ್ಮೀ ಅವರು ಡಿವೋರ್ಸ್ ಕೊಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯ ಕೂಡ ಕೇಳಲಾಗುತ್ತಿದೆ. ಹೀಗಾಗಿ ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ಡಿವೋರ್ಸ್ ಬಗ್ಗೆ ಕಾಲವೇ ಉತ್ತರ ನೀಡಬೇಕಿದೆ!

ಹೆಂಡತಿ ವಿಜಯಲಕ್ಷ್ಮೀ ಜೊತೆಗೆ ಚರ್ಚೆ?

ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರ ಬಳಿ ಕೂಡ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದ್ದಾರಂತೆ. ಅಲ್ಲದೆ ರೇಣುಕಾಸ್ವಾಮಿ ಪತ್ನಿ & ರೇಣುಕಾಸ್ವಾಮಿ ಅಪ್ಪ & ಅಮ್ಮನ ಆರೋಗ್ಯದ ಬಗ್ಗೆ ಕೂಡ ಮಾಹಿತಿ ಪಡೆದಿದ್ದಾರೆ ಅಂತಾ ಹೇಳಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ನೇರವಾಗಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ದರ್ಶನ್ ತೂಗುದೀಪ್ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ. ಹಾಗೇ ಈ ಸಮಯದಲ್ಲಿ ಸಹಾಯ ಕೂಡ ಮಾಡಲಿದ್ದಾರೆ ದರ್ಶನ್ ತೂಗುದೀಪ್ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+