ಬರೀ ಇದನ್ನೇ ಮಾಡಿದ್ರೆ ಕನ್ನಡ ಇಂಡಸ್ಟ್ರಿ ಹೆಂಗೆ ಉದ್ಧಾರ ಆಗುತ್ತೆ? ಕನ್ನಡಿಗರು ಹಿಂಗೆ ಹೇಳಿದ್ದು ಯಾಕೆ?
ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ಇತಿಹಾಸ ಇದ್ದು, ಕನ್ನಡಿಗರು ಸಿನಿಮಾ ವಿಚಾರದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಹೀಗೆ ಐತಿಹಾಸಿಕ ಹಿನ್ನೆಲೆ ಇರುವ, ಪೂಜ್ಯನೀಯ ಸ್ಥಾನವನ್ನ ಪಡೆದಿದ್ದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಹಗರಣ ಆರೋಪಗಳು ಸಂಚಲನಕ್ಕೆ ಕಾರಣವಾಗಿದೆ. ಹಾಗಾದ್ರೆ ನಿಜಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆಗುತ್ತಿರುವುದು ಏನು? ಕನ್ನಡಿಗರು ಇದೀಗ, ಬರೀ ಇದನ್ನೇ ಮಾಡಿದ್ರೆ ಕನ್ನಡ ಇಂಡಸ್ಟ್ರಿ ಹೆಂಗೆ ಉದ್ಧಾರ ಆಗುತ್ತೆ? ಅಂತ ಪ್ರಶ್ನೆ ಮಾಡಿದ್ದು ಯಾಕೆ? ಬನ್ನಿ ತಿಳಿಯೋಣ.
ಕನ್ನಡ ಸಿನಿಮಾಗಳು ಓಡುತ್ತಿಲ್ಲ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ. ಕನ್ನಡ ಚಿತ್ರರಂಗ ಉಳಿಯುವುದು ಹೇಗೆ? ಅಂತೆಲ್ಲಾ ಕನ್ನಡಿಗರು ಚರ್ಚೆ ಮಾಡ್ತಾ ಇದ್ದಾರೆ. ಆದರೆ ಇಲ್ಲಿ ಕೇಳಿ ಕನ್ನಡಿಗರೇ, ಈಗಿನ ಪರಿಸ್ಥಿತಿ ನೋಡಿದರೆ ಕನ್ನಡ ಸಿನಿಮಾಗಳು ಓಡುವುದು ಬಿಡಿ ದೊಡ್ಡ ದೊಡ್ಡವರು ಕಾಪಾಡಿಕೊಂಡು ಬಂದಿದ್ದ ಕನ್ನಡ ಚಿತ್ರರಂಗದ ಆ ವೈಭವ & ಗೌರವ ಉಳಿಸಿಕೊಂಡರೆ ಸಾಕು ಎನ್ನುವಂತೆ ಆಗಿದೆ. ಯಾಕಂದ್ರೆ ಕನ್ನಡ ಸಿನಿಮಾ ರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಗಂಭೀರ ಆರೋಪ ಇದೀಗ ಕೇಳಿಬಂದಿದೆ!

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಏನಾಯ್ತು?
ಸ್ಯಾಂಡಲ್‌ವುಡ್ ಅಂದ್ರೆ ಇಡೀ ಭಾರತ ಮಾತ್ರವಲ್ಲ ಜಾಗತಿಕವಾಗಿ ಕೂಡ ದೊಡ್ಡ ಗೌರವವು ಇದೆ. ಯಾಕಂದ್ರೆ ಕನ್ನಡ ಸಿನಿಮಾ ರಂಗದಲ್ಲಿ ಅಂತಹ ಸಿನಿಮಾಗಳು ಬಂದಿವೆ, ಹಾಗೇ ಈ ನಮ್ಮ ಕನ್ನಡ ನೆಲದಲ್ಲಿ ಡಾಕ್ಟರ್ ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಡಾ. ಪುನೀತ್ ರಾಜ್‌ಕುಮಾರ್ ರೀತಿಯ ದೊಡ್ಡ ದೊಡ್ಡ ನಟರು ಕಲಾ ಸೇವೆ ಮಾಡಿದ್ದಾರೆ. ಅಲ್ಲದೆ ಈಗ ಅವರೆಲ್ಲಾ ಅಭಿಮಾನಿಗಳ ಪಾಲಿಗೆ ದೇವರೇ ಆಗಿದ್ದಾರೆ. ಹೀಗಿದ್ದಾಗ ಕನ್ನಡ ಸಿನಿಮಾ ಇಂಡಸ್ಟ್ರಿ ಒಳಗೆ ಕಾಮುಕರ ಕಾಟ ಜಾಸ್ತಿ ಆಗಿದೆ ಅಂತಾ ನಟಿಯರು ಆರೋಪ ಮಾಡುತ್ತಿರುವುದು ಏಕೆ? ಬನ್ನಿ ತಿಳಿಯೋಣ.
ಕನ್ನಡಿಗರೇ ಈಗಲೇ ಎಚ್ಚೆತ್ತುಕೊಳ್ಳಿ!
ನಮ್ಮ ಕನ್ನಡ ನಾಡು 3 ಸಾವಿರ ವರ್ಷ ಇತಿಹಾಸ ಇರುವ ನಾಡು.. ನಮ್ಮ ನಾಡು ಇಡೀ ದೇಶವನ್ನೇ ಆಳಿದ್ದ ಸಾಮ್ರಾಜ್ಯಗಳನ್ನು ಹೊಂದಿದ್ದ ನಾಡು.. ಆದರೆ ಸುಮಾರು 100 ವರ್ಷ ಇತಿಹಾಸ ಇರುವ ಸಿನಿಮಾ ಇಂಡಸ್ಟ್ರಿ ಇದೀಗ ನಮ್ಮ ಕನ್ನಡ ನಾಡಿನ ಮಾನ & ಮರ್ಯಾದಿ ಹರಾಜು ಹಾಕಬೇಕಾ? ಅಂತಾ ಇದೀಗ ಕನ್ನಡಿಗರು ಸಿನಿಮಾ ಮಂದಿಗೆ ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಕೆಲವು ನಟರ ಅಂದ್ರೆ ಸೋ ಕಾಲ್ಡ್ ಹೀರೋಗಳ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಲಾಗಿದೆ.












Click it and Unblock the Notifications