ದರ್ಶನ್ ಬಾಳು ಹಾಳಾಗಲು ಜಡೆ ಜಗಳ ಕಾರಣ?
ದರ್ಶನ್ ಕೊಲೆ ಆರೋಪ ಎದುರಿಸುತ್ತಾ ಪರದಾಡುತ್ತಿದ್ದಾರೆ, ತಮ್ಮ ಆಪ್ತ ಸ್ನೇಹಿತೆ ಆಗಿರುವ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅಂತಾ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ದರ್ಶನ್ & ಗ್ಯಾಂಗ್ ಕ್ರೂರವಾಗಿ ಕೊಲೆ ಮಾಡಿರುವ ಆರೋಪ ಇದಾಗಿದೆ. ಹೀಗಿದ್ದಾಗಲೇ ಈ ದರ್ಶನ್ ಹಾಳಾಗಲು 'ಜಡೆ ಜಗಳ' ಕಾರಣ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಅರೆ 'ಜಡೆ ಜಗಳ'ದ ನಡುವೆ ಸಿಲುಕಿ ಮಾಜಿ ಡಿ-ಬಾಸ್ ಅಪ್ಪಚ್ಚಿ ಆಗಿದ್ದು ಹೇಗೆ? ಬನ್ನಿ ತಿಳಿಯೋಣ.
ದರ್ಶನ್ & ಪವಿತ್ರ ಗೌಡ ನಡುವೆ ವಿಶೇಷ ಸಂಬಂಧ ಇದೆ, ಆದರೆ ಇದು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರನ್ನ ಕೆರಳುವಂತೆ ಮಾಡಿತ್ತು. ಇಷ್ಟಾದರೂ ತಮ್ಮ ಪತಿಯ ಪರ ನಿಂತಿದ್ದ ವಿಜಯಲಕ್ಷ್ಮೀ ದರ್ಶನ್, ಆಗಾಗ ಪವಿತ್ರ ಗೌಡ ವಿಚಾರದಲ್ಲಿ ರೊಚ್ಚಿಗೆದ್ದು ರಿಯಾಕ್ಷನ್ ಕೊಡುತ್ತಿದ್ದರು. ಹೀಗಿದ್ದಾಗ ವಿಜಯಲಕ್ಷ್ಮೀ ದರ್ಶನ್ ವಿರುದ್ಧ ಹಗೆ ಸಾಧಿಸುತ್ತಿರುವ ಪವಿತ್ರಾ ಗೌಡ, ಏನೆಲ್ಲಾ ಮಾಡಿದ್ದರಂತೆ ಗೊತ್ತಾ? ದರ್ಶನ್ ಬಾಳು ಹಾಳಾಗಿ ಹೋಗಲು ಇದೇ 'ಜಡೆ ಜಗಳ' ಪ್ರಮುಖ ಕಾರಣ ಆಗಿತ್ತಾ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ದರ್ಶನ್ ಬಾಳು ಹಾಳಾಗಿದ್ದು ಹೇಗೆ?
2011ಕ್ಕೂ ಮೊದಲು ದರ್ಶನ್ ಮನುಷ್ಯನಾಗಿ ಚೆನ್ನಾಗಿಯೇ ಇದ್ದ, ಆದರೆ ಅವನು ಯಾವಾಗ ತನ್ನ ಹೆಂಡತಿ ವಿಚಾರದಲ್ಲಿ ಜಗಳ ಮಾಡಿಕೊಂಡನೋ ಆಗಿನಿಂದಲೇ ಆತನ ಜೀವನ ಪೂರ್ತಿ ಹಾಳಾಗಿ ಹೋಗಿತ್ತು ಅಂತಾರೆ ದರ್ಶನ್ ಸ್ನೇಹಿತರು. ಯಾಕಂದ್ರೆ ನಟ ದರ್ಶನ್ ಬಾಳಿನಲ್ಲಿ ಪತ್ನಿ ವಿಜಯಲಕ್ಷ್ಮೀ & ಪವಿತ್ರಾ ಗೌಡ ಪ್ರಭಾವ ದೊಡ್ಡದಾಗಿದೆ.
ಹೀಗಿದ್ದಾಗಲೇ ಪವಿತ್ರಾ ಗೌಡ 10 ವರ್ಷಗಳ ಹಿಂದೆ ದರ್ಶನ್ ಬಾಳಿಗೆ ಎಂಟ್ರಿ ಕೊಟ್ಟ ನಂತರ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿತ್ತು. ಆದರೆ ದರ್ಶನ್ ಹೆಂಡತಿ ವಿಜಯಲಕ್ಷ್ಮೀ ವಿರುದ್ಧ ಹಗೆ ಸಾಧಿಸುತ್ತಿರುವ & ಪದೇ ಪದೇ ಕಿರಿಕ್ ಮಾಡುವ ಪವಿತ್ರಾ ಗೌಡ, ದರ್ಶನ್‌ಗೆ ಹೆಂಗೆಲ್ಲಾ ಟಾರ್ಚರ್ ಕೊಟ್ಟಿದ್ರಂತೆ ಗೊತ್ತಾ? ಬನ್ನಿ ತಿಳಿಯೋಣ.
ಪವಿತ್ರಾ ಗೌಡ ಟಾರ್ಚರ್‌ಗೆ ದರ್ಶನ್ ಸುಸ್ತು!
ಹೌದು, ದರ್ಶನ್‌ಗೆ ಇದೇ ಪವಿತ್ರಾ ಗೌಡ ಸಾಕಷ್ಟು ಟಾರ್ಚರ್ ಕೊಟ್ಟಿದ್ದರಂತೆ. ಅದರಲ್ಲೂ ದರ್ಶನ್ ಹೆಂಡತಿ ವಿಜಯಲಕ್ಷ್ಮೀ ಏನೇ ಮಾಡಿದರೂ ಅದನ್ನು ತಾನೂ ಮಾಡಬೇಕು ಎಂಬ ಹಠ ಪವಿತ್ರಾ ಗೌಡಗೆ ಇತ್ತು. ಇದೇ ಹಠ ಕೊನೆಗೆ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಈ ರೀತಿ, ಹಲವು ವಿಚಾರದಲ್ಲಿ ದರ್ಶನ್ ಬಾಳಲ್ಲಿ ಪವಿತ್ರಾ ಗೌಡ ಒತ್ತಡ ಹಾಕುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ವಿಜಯಲಕ್ಷ್ಮೀ ದರ್ಶನ್ 'ರೇಂಜ್ ರೋವರ್' ಕಾರು ಖರೀದಿ ಮಾಡಿದಾಗ ಪವಿತ್ರಾ ಗೌಡ ತನಗೂ 'ರೇಂಜ್ ರೋವರ್' ಬೇಕು ಅಂತಾ ಹಠ ಹಿಡಿದಿದ್ದರಂತೆ. ಹಾಗೇ, ವಿಜಯಲಕ್ಷ್ಮೀ ದರ್ಶನ್ ಯಾವುದೇ ಆಭರಣ & ಚಿನ್ನ ಖರೀದಿ ಮಾಡಲಿ, ಸೀರೆ ಖರೀದಿ ಮಾಡಲಿ ಅಂತಹ ವಸ್ತುಗಳೇ ನನಗೂ ಬೇಕು ಅಂತಾ ದರ್ಶನ್‌ಗೆ ಪವಿತ್ರಾ ಗೌಡ ಟಾರ್ಚರ್ ಕೊಡ್ತಿದ್ದರು ಅಂತಾ ಆರೋಪ ಮಾಡಲಾಗಿದೆ.
ಒಟ್ನಲ್ಲಿ ಹೀಗೆ ಕೊಲೆ ಆರೋಪ ಹೊತ್ತು ಇದೀಗ ದರ್ಶನ್ ಜೈಲು ಸೇರಿದ್ದು, ಈ ವಿಚಾರಕ್ಕೆ ದರ್ಶನ್ ಅಭಿಮಾನಿಗಳು ಎದೆ ಎದೆ ಬಡಿದುಕೊಂಡು ನೋವು ಹೇಳುತ್ತಿದ್ದಾರೆ. ಆದರೆ ಇದೇ ದರ್ಶನ್ 'ಜಡೆ ಜಗಳ' ಕಾರಣ ಜೀವನ ಹಾಳು ಮಾಡಿಕೊಂಡರು ಎಂಬ ಗಂಭೀರ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆ ದರ್ಶನ್ ಕಂಬಿ ಎಣಿಸುವುದು ಫಿಕ್ಸ್ ಆಗುತ್ತಿದೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.
ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications