Darshan Thoogudeepa: ದರ್ಶನ್ ತೂಗುದೀಪ್‌ಗೆ ಸಹಾಯ ಮಾಡಿ ಜೀವನವನ್ನೇ ಹಾಳು ಮಾಡಿಕೊಂಡ ಅಧಿಕಾರಿಗಳು?

ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರಾಮವಾಗಿ ಸಿಗರೇಟು ಸೇದುತ್ತಾ, ಬಿರಿಯಾನಿ ತಿನ್ನುತ್ತಾ, ಬಿಯರ್ ಕುಡಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ನಟೋರಿಯಸ್ ರೌಡಿಗಳ ಜೊತೆಗೆ ಕೂತು ಬಿಂದಾಸ್ ಆಗಿ ಟೀ ಕುಡಿಯುತ್ತಾ, ಧಮ್ ಹೊಡೆಯುತ್ತಿದ್ದ ದರ್ಶನ್ ತೂಗುದೀಪ್ ಫೋಟೋ ವೈರಲ್ ಆಗಿದ್ದೇ ತಡ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಮುಖಭಂಗವಾಗಿದೆ. ಹೀಗಿದ್ದಾಗ ದರ್ಶನ್ & ಗ್ಯಾಂಗ್ ಮಾಡಿದ ಕೆಲಸಕ್ಕೆ ಇದೀಗ ಪರಪ್ಪನ ಅಗ್ರಹಾರದ ಪೊಲೀಸ್ ಅಧಿಕಾರಿಗಳು ಜೀವನವನ್ನೇ ಹಾಳು ಮಾಡಿಕೊಂಡಿರುವ ಆರೋಪವೂ ಕೇಳಿಬಂದಿದೆ!

ಹೌದು, ದರ್ಶನ್ ತೂಗುದೀಪ್ & ಸಹಚರರಿಗೆ ಇದೀಗ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಎಲ್ಲಾ ರೀತಿ ವ್ಯವಸ್ಥೆ ಮಾಡಿದ ಆರೋಪದ ಹಿನ್ನೆಲೆ ಇದೀಗ 7 ಅಧಿಕಾರಿಗಳು ಅಮಾನತು ಆಗಿದ್ದಾರೆ. ಈ ಮೂಲಕ ದರ್ಶನ್ ತೂಗುದೀಪ್ & ಜೊತೆಗಾರರು ಮಾಡಿದ ತಪ್ಪಿಗಾಗಿ ಈಗ ಜೈಲಿನ ಅಧಿಕಾರಿಗಳು ಪರದಾಡುವ ಪರಿಸ್ಥಿತಿ ಬಂದಿದೆ. ಮತ್ತೊಂದು ಕಡೆ ಈ ಬಗ್ಗೆ ಇದೀಗ, ತನಿಖೆಗೆ ಕೂಡ ಆಗ್ರಹ ಮಾಡಲಾಗಿದ್ದು ಇದರಿಂದಾಗಿ ಮತ್ತಷ್ಟು ಅಧಿಕಾರಿಗಳಿಗೆ ಈ ಹಿನ್ನೆಲೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು, ಇದರಿಂದ ದರ್ಶನ್ & ಜೊತೆಗಾರರು ಬೇರೆ ಜೈಲಿಗೆ ಶಿಫ್ಟ್ ಆಗ್ತಾರೆ ಎನ್ನಲಾಗುತ್ತಿದೆ.

This Is What Happened To That People Who Helped The Darshan Thoogudeepa

ಗಾರ್ಬೇಜ್ ಬ್ಯಾಗ್ ಮೂಲಕ ಸಪ್ಲೈ?

ದರ್ಶನ್ ತೂಗುದೀಪ್ ಜೈಲಿನ ಒಳಗೆ ಇದ್ದರೂ ಎಲ್ಲಾ ರೀತಿಯ ಸವಲತ್ತು ಸಿಗುತ್ತಾ ಇದೆ. ಅಷ್ಟಕ್ಕೂ ಈಗ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ & ಗ್ಯಾಂಗ್‌ಗೆ ಬಿರಿಯಾನಿಯನ್ನ ಸಪ್ಲೈ ಮಾಡಲು, ಗಾರ್ಬೇಜ್ ಬ್ಯಾಗ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷಿಯಾಗಿ ಪರಪ್ಪನ ಅಗ್ರಹಾರ ಜೈಲಿನ ಸಿಸಿ ಕ್ಯಾಮೆರಾಗಳು ಇದ್ದು, ಅವುಗಳನ್ನು ಈಗ ಪರಿಶೀಲನೆ ಮಾಡಬೇಕು ಎಂದು ಕೋಟಿ ಕೋಟಿ ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಹಾಗೇ ಭ್ರಷ್ಟ ಪರಪ್ಪನ ಅಗ್ರಹಾರದ ಹುಳುಗಳನ್ನ ಕ್ಲೀನ್ ಮಾಡಲು ಸರ್ಕಾರಕ್ಕೆ ಜನರು ಆಗ್ರಹಿಸಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ಟ್ವೀಟ್ & ಪೋಸ್ಟ್ ಮಾಡುತ್ತಿದ್ದಾರೆ.

ಪರಪ್ಪನ ಅಗ್ರಹಾರದ ಮೇಲೆ ರೇಡ್?

ಕೊಲೆ, ದರೋಡೆ, ಕಳ್ಳತನ ಹೀಗೆ ಒಂದಲ್ಲ ಒಂದು ರೀತಿಯ ಸಮಾಜ ವಿರೋಧಿ ಕೃತ್ಯವನ್ನ ಎಸಗಿದವರಿಗೆ ಅಂತಾನೆ ಪರಪ್ಪನ ಅಗ್ರಹಾರ ಜೈಲು ಇದೆ. ಜೈಲಿಗೆ ಒಬ್ಬ ಅಪರಾಧಿ ಅಥವಾ ಆರೋಪಿಯನ್ನು ಹಾಕುವುದು ಯಾಕೆ ಅಂದ್ರೆ ಆತನಿಗೆ ಬುದ್ಧಿ ಬರಲಿ ಅಂತಾ. ಆದರೆ ನಮ್ಮ ಕರ್ನಾಟಕದ ಜೈಲಲ್ಲಿ ಈಗ ಆರೋಪಿಗಳಿಗೆ & ಅಪರಾಧಿಗಳಿಗೂ ಮಜಾ ಮಾಡಲು ಅವಕಾಶ ಸಿಗುತ್ತಿದೆ. ಹಾಗಾದ್ರೆ ಕರ್ನಾಟಕದ ಕಾನೂನು & ಸುವ್ಯವಸ್ಥೆಗೆ ಏನಾಗಿದೆ ಅಂತಾ ಕರ್ನಾಟಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕನ್ನಡ ನಾಡಿನಲ್ಲಿ ಏನಿದು?

ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+