Darshan Thoogudeepa: ‘ಡಿ-ಬಾಸ್’ ಗೆಳತಿ ಪವಿತ್ರಾ ಗೌಡ ಮನೆಯ ನಾಯಿಗಳಿಗೆ ಆಗಿದ್ದೇನು?
ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಸೆಂಟ್ರಲ್ ಜೈಲು ಸೇರಿರುವ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಇದೀಗ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗ ಪವಿತ್ರಾ ಗೌಡ ಮನೆ ಅನಾಥವಾಗಿದೆ. ಹಾಗೇ ಪವಿತ್ರಾ ಗೌಡ ಮನೆಯಲ್ಲಿ ಇದ್ದ ನಾಯಿಗಳು ಕೂಡ ಊಟ & ತಿಂಡಿ ಇಲ್ಲದೆ ತೀವ್ರ ಪರದಾಡುತ್ತಿದ್ದವು. ಹೀಗೆ ಮನೆಯಲ್ಲಿ ಮಾಲೀಕರೇ ಇಲ್ಲದೆ ಒದ್ದಾಡುತ್ತಿದ್ದ ಪವಿತ್ರಾ ಗೌಡಳ ಮುದ್ದಿನ ನಾಯಿಗಳನ್ನ ಇದೀಗ ಪೊಲೀಸರು ಏನು ಮಾಡಿದ್ದಾರೆ ಗೊತ್ತಾ? ಬನ್ನಿ ತಿಳಿಯೋಣ.
ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದರು, ಆದರೆ ಯಾವಾಗ ಪವಿತ್ರಾ ಗೌಡ ದರ್ಶನ್‌ರ ಜೀವನಕ್ಕೆ ಎಂಟ್ರಿ ಆದರೂ ಆ ಕ್ಷಣದಿಂದಲೇ ಸಮಸ್ಯೆ ಶುರುವಾಗಿತ್ತು ಎಂಬುದು ದರ್ಶನ್‌ರ ಅಭಿಮಾನಿಗಳ ಆರೋಪ. ಹೀಗಿದ್ದಾಗ ಪವಿತ್ರಾ ಗೌಡ ಬಗ್ಗೆ ಮಾತನಾಡಿದರೆ ಅಭಿಮಾನಿಗಳನ್ನ ಕೂಡ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗ್ತಾರೆ ಹುಷಾರ್ ಅಂತಾ ಇದೀಗ, ದರ್ಶನ್ ತೂಗುದೀಪ್ ಅವರ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಿರಿಕಿರಿ ನಡುವೆ & ಆರೋಪಗಳ ನಡುವೆ ಪವಿತ್ರಾ ಗೌಡ ಮನೆಯಲ್ಲಿ ಅನ್ನ & ನೀರು ಇಲ್ಲದೆ ನಿತ್ಯ ನರಳುತ್ತಿದ್ದ ನಾಯಿಗಳಿಗೆ ದರ್ಶನ್ ಮನೆಯಲ್ಲಿ ಆಶ್ರಯ ನೀಡಲಾಗಿದೆ!

ಪವಿತ್ರಾ ಮನೆಯಲ್ಲಿ ನಾಯಿಗಳ ನರಳಾಟ
ಹೌದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಂಬರ್ 01 ಆರೋಪಿ ಆಗಿ ಜೈಲು ಸೇರಿರುವ ಪವಿತ್ರಾ ಗೌಡಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಅದರಲ್ಲೂ ದರ್ಶನ್ ತೂಗುದೀಪ್ ಇದೀಗ ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆದ್ದು ಮಾತು ಬಿಟ್ಟಿದ್ದಾರೆ ಎಂಬ ಆರೋಪಗಳ ನಡುವೆ, ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರೆ, ದರ್ಶನ್ ತೂಗುದೀಪ್ ಅವರು ಮಾತ್ರ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಹೀಗಿದ್ದಾಗ ಬೆಂಗಳೂರಿನ ಪವಿತ್ರಾ ಗೌಡ ಮನೆಯಲ್ಲಿ ನಾಯಿಗಳು ಊಟ & ನೀರು ಇಲ್ಲದೆ ನರಳುತ್ತಿದ್ದವು. ಬುಲ್ ಡಾಗ್ ಮತ್ತು ಬೆಲ್ಜಿಯನ್ ಮಾಲಿನೋಯಿಸ್ ನಾಯಿ ತಳಿಗಳು ಪವಿತ್ರಾ ಗೌಡ ಮನೆಯಲ್ಲಿ ಇದ್ದವು.
ನಾಯಿಗಳನ್ನ ಕೊಡಿಸಿದ್ದು ನಟ ದರ್ಶನ್?
ಪವಿತ್ರಾ ಗೌಡ ಒಬ್ಬರೇ ಇರುತ್ತಿದ್ದ ಕಾರಣಕ್ಕೆ ಅವರ ರಕ್ಷಣೆಗೆ ಅಂತಾ ಖುದ್ದು ದರ್ಶನ್ ಅವರೇ ಬುಲ್ ಡಾಗ್ ನಾಯಿ ತಳಿಯನ್ನು ಕೊಡಿಸಿದ್ದರು ಎಂಬ ಮಾತು ಓಡಾಡುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಿದ್ದಾಗ ರೇಣುಕಾ ಸ್ವಾಮಿ ಮರ್ಡರ್ ಆಗಲು ಪವಿತ್ರಾ ಕಾರಣ ಎಂಬ ಆರೋಪದ ಹಿನ್ನೆಲೆ ಪೊಲೀಸರು ಅರೆಸ್ಟ್ ಮಾಡಿಕೊಂಡು ಕರ್ಕೊಂಡು ಹೋಗಿ ಜೈಲಿಗೆ ತಳ್ಳಿದ್ದಾರೆ. ಹೀಗೆ ಪವಿತ್ರಾ ಜೈಲಿಗೆ ಹೋದ ನಂತರ ನಾಯಿಗಳು ಅನಾಥವಾಗಿವೆ.
ಹಾಗೇ, ಈ ಕೇಸ್‌ನ ಮತ್ತೊಬ್ಬ ಕೊಲೆ ಆರೋಪಿ ಪವನ್ ನಾಯಿಗಳ ನೋಡಿಕೊಳ್ಳುತ್ತಿದ್ದನಂತೆ. ಆದರೆ ದರ್ಶನ್ ಬಳಿ ಫಿಟಿಂಗ್ ಇಟ್ಟು, ಎಲ್ಲರ ಬಾಳು ಹಾಳು ಮಾಡಿದ್ದೇ ಈ ಪವನ್ ಎಂಬ ಆರೋಪ ಇದೆ. ಹೀಗಿದ್ದಾಗ ಅನಾಥವಾಗಿದ್ದ ನಾಯಿಗಳನ್ನ ರಕ್ಷಣೆ ಮಾಡಿ ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿದೆ. ಇನ್ನೊಂದು ನಾಯಿ ಮರಿಯನ್ನ ಇದೀಗ ಪವಿತ್ರಾ ಗೌಡಳ ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರಂತೆ. ನಾಯಿಗಳು ಈಗ ದರ್ಶನ್ ತೂಗುದೀಪ್ ಮನೆಯಲ್ಲಿ ಸೇಫ್ ಆಗಿವೆ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications