Duniya Vijay: ದುನಿಯಾ ವಿಜಯ್ ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿರಾತಕರು
ದುನಿಯಾ ವಿಜಯ್ ಈಗ 'ಭೀಮ' ಸಿನಿಮಾ ಸೂಪರ್ ಹಿಟ್ ಆಗಿರುವ ಖುಷಿಯಲ್ಲಿದ್ದಾರೆ. ಹೀಗಿದ್ದಾಗ ದುನಿಯಾ ವಿಜಯ್ ಅವರ ಅಭಿಮಾನಿಗಳು ಕೂಡ ಈ ಗೆಲುವನ್ನ ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಹೊಸ ಸಂಚಲನ ಸೃಷ್ಟಿಸುವ ಸುದ್ದಿ ಒಂದು ಓಡಾಡುತ್ತಿದ್ದು, ದುನಿಯಾ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹಬ್ಬಿದೆ. ಹಾಗಾದ್ರೆ ಕೀರ್ತಿಗೌಡ ಇದೀಗ ದುನಿಯಾ ವಿಜಯ್ ಅವರಿಂದ ಅಂತರ ಕಾಯ್ದುಕೊಂಡಿದ್ದು ಏಕೆ? ದುನಿಯಾ ವಿಜಯ್ ಮತ್ತು ಕೀರ್ತಿಗೌಡ ದೂರ ಆಗಿದ್ದಾರಾ?
ಅಂದಹಾಗೆ ನಟ ದುನಿಯಾ ವಿಜಯ್ ಅವರು ನಾಗರತ್ನ ಅವರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಕೀರ್ತಿಗೌಡ ಅವರನ್ನು ಮದುವೆ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಗಾಳಿ ಸುದ್ದಿಗೆ ಬಲ ನೀಡುವಂತೆ ಒಂದಷ್ಟು ಫೋಟೋಗಳು ಹರಿದಾಡಿ, ಇಬ್ಬರು ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನ ಕೂಡ ಚರ್ಚೆಯನ್ನ ಮಾಡಿದ್ದರು. ಇದನ್ನೆಲ್ಲಾ ಬಿಡಿ ನಟ ದುನಿಯಾ ವಿಜಯ್ ಅವರ 'ಸಲಗ' ಸಿನಿಮಾ ಸೂಪರ್ ಹಿಟ್ ಆಗಿ, ದುನಿಯಾ ವಿಜಯ್ ಅವರಿಗೆ ಮತ್ತೊಂದು ಚಾನ್ಸ್ ಸಿಕ್ಕ ಸಮಯದಲ್ಲೂ ಇದೇ ಕೀರ್ತಿ ಗೌಡ ಅವರು ಸಾಕಷ್ಟು ಹೊಗಳಿದ್ದರು. ಅಲ್ಲದೆ ದುನಿಯಾ ವಿಜಯ್ ಅವರ ಬೆನ್ನಿಗೆ ನಿಂತು ಬೆಂಬಲ ನೀಡಿದ್ದರು.

ಕೀರ್ತಿ ಗೌಡ & ದುನಿಯಾ ವಿಜಯ್...
ದುನಿಯಾ ವಿಜಯ್ ಅವರ 'ಸಲಗ' ಸಿನಿಮಾ ಸಕ್ಷಸ್ ಮೀಟ್ ಸೇರಿದಂತೆ ಹಲವು ಸಮಯ ಕೀರ್ತಿ ಗೌಡ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಇದೀಗ ಆಗಿರುವುದೇ ಬೇರೆ, ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿದ್ದ ದುನಿಯಾ ವಿಜಯ್ ಅವರೇ ಅಭಿನಯಿಸಿ, ನಿರ್ದೇಶನ ಕೂಡ ಮಾಡಿದ್ದ 'ಭೀಮ' ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಹೀಗಿದ್ದರು ಕೂಡ ಕೀರ್ತಿ ಗೌಡ ಅವರು ಹೊರಗೆ ಎಲ್ಲೂ ಮಾತನಾಡಿಲ್ಲ. ಹಾಗೇ ದುನಿಯಾ ವಿಜಯ್ ಅವರ ಸಿನಿಮಾ ನೋಡಿ ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲ. ಹೀಗಾಗಿ ದುನಿಯಾ ವಿಜಯ್ ಮತ್ತು ಕೀರ್ತಿ ಗೌಡ ದೂರವಾಗಿದ್ದಾರೆ ಅಂತಾ ಕೆಲವರು ಸುದ್ದಿ ಹಬ್ಬಿಸುತ್ತಿದ್ದು, ಈ ಬಗ್ಗೆ ಇದೀಗ ದುನಿಯಾ ವಿಜಯ್ ಅವರ ಫ್ಯಾನ್ಸ್ ಗರಂ ಆಗಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು?
ದುನಿಯಾ ವಿಜಯ್ ಅವರ 'ಭೀಮ' ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ ನಂತರ ಸಾಕಷ್ಟು ಅಡ್ಡಿಗಳು ಎದುರಾಗುತ್ತಿವೆ ಎಂಬ ಆರೋಪ ಇದೆ. ಅದರಲ್ಲೂ ಕೆಲವರು ಬೇಕು, ಬೇಕು ಅಂತಲೇ ದುನಿಯಾ ವಿಜಯ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ದುನಿಯಾ ವಿಜಯ್ ಅವರ 'ಭೀಮ' ಸಿನಿಮಾ ಬಗ್ಗೆ ಕೂಡ ಅಪಪ್ರಚಾರ ಮಾಡುತ್ತಿದ್ದಾರೆಂಬ ಆರೋಪ ಇದೆ. ಈ ಆರೋಪಗಳಿಗೆ ಒತ್ತು ನೀಡುವಂತೆ ಇದೀಗ ದುನಿಯಾ ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದುನಿಯಾ ವಿಜಯ್ ಅವರು ಮತ್ತು ಕೀರ್ತಿ ಗೌಡ ಅವರ ಬಗ್ಗೆ ಸುಳ್ಳು ಸುಳ್ಳು ಸುದ್ದಿಗಳನ್ನ ಹರಿದಾಡಿಸುತ್ತಿದ್ದಾರೆ ಎಂಬ ಆಕ್ರೋಶ ಮೊಳಗಿದೆ. ಈ ಸುಳ್ಳು ಸುದ್ದಿಗಳಿಗೆ ಇದೀಗ, ದುನಿಯಾ ವಿಜಯ್ ಅವರ ಫ್ಯಾನ್ಸ್ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. ಮತ್ತೊಂದು ಕಡೆ ಬೇಕು, ಬೇಕು ಅಂತಾ ದುನಿಯಾ ವಿಜಯ್ ಅವರು ನೀಡಿರುವ ಹೇಳಿಕೆಯನ್ನ ಕೂಡ ಟ್ರೋಲ್ ಮಾಡಿ ವೈರಲ್ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications