Darshan: ಸಿಂಹ ಎಲ್ಲಿದ್ದರೂ ಸಿಂಹವೇ ಅಂತೆ! ದರ್ಶನ್‌ ಫೋಟೊ ನೋಡಿ ಅಭಿಮಾನಿಗಳು ಖುಷಿ ಪಡ್ತಿರೋದ್ಯಾಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿಕೊಂಡಿರುವ ನಟ ದರ್ಶನ್‌ರ ಮತ್ತೊಂದು ಮುಖ ಅನಾವರಣವಾಗಿದೆ. ಕೊಲೆ ಆರೋಪಿಯಾಗಿರುವ ದರ್ಶನ್ ತನ್ನಿಂದ ಆದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದಾರೆ, ಧ್ಯಾನ ಮಾಡುತ್ತಿದ್ದಾರೆ, ಕೆಟ್ಟವರ ಸ್ನೇಹ ಮಾಡಿದ ತಪ್ಪಿನ ಅರಿವಾಗಿದೆ. ಹೊರಗಡೆ ಬಂದರೆ ಅವರು ಯಾರ ತಂಟೆಗೂ ಹೋಗದೆ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದೇ ಭಾವಿಸಲಾಗಿತ್ತು, ಆದರೆ ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್ ಜೊತೆ ಸಿಗರೇಟ್ ಸೇದುತ್ತಾ, ಕಾಫಿ ಕುಡಿಯತ್ತಾ ಹರಟೆ ಹೊಡೆಯುತ್ತಿರುವುದು ನೋಡಿ ಹೊರಗಡೆ ಅಂದುಕೊಂಡಿದ್ದೆಲ್ಲಾ ಸುಳ್ಳು ಎನ್ನುವ ಅನುಮಾನ ಶುರುವಾಗಿದೆ.

ಒಂದೆಡೆ ದರ್ಶನ್‌ರ ಹೊಸ ಫೋಟೊ ನೋಡಿ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡ್ಡು, ಪ್ರಭಾವ ಇದ್ದರೆ ಪರಪ್ಪನ ಅಗ್ರಹಾರ ಕೂಡ ರೆಸಾರ್ಟ್‌ ರೀತಿ ಇರುತ್ತದೆ ಎಂದು ಜೈಲು ಸಿಬ್ಬಂದಿ ವಿರುದ್ಧ ಸಿಟ್ಟಾಗಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಸಂಭ್ರಮ ಶುರುಮಾಡಿದ್ದಾರೆ.

This is what fans said about Darshan Thoogudeepa latest photo

ಅಭಿಮಾನಿಗಳು ಹೇಳಿದ್ದೇನು?

ದರ್ಶನ್ ಜೈಲಿನಲ್ಲಿ ಜಾಲಿಯಾಗಿರುವುದನ್ನು ನೋಡಿ ದರ್ಶನ್‌ರ ಕೆಲವು ಅಭಿಮಾನಿಗಳು ಮಾತ್ರ ಫುಲ್ ಖುಷಿಯಾಗಿದ್ದಾರೆ. ಕೆಲವು ಅಭಿಮಾನಿಗಳು ಮಾತ್ರ ಸಿಂಹ ಎಲ್ಲಿದ್ರೂ ಸಿಂಹಾನೆ, ಗುಹೆಯಲ್ಲಿದ್ರೂ ಕಾಡಿನಲ್ಲಿದ್ರೂ ಸಿಂಹದ ಗತ್ತು ಕಡಿಮೆಯಾಗಲ್ಲ ಎಂದು ಬಿಲ್ಡಪ್ ಕೊಡುತ್ತಿದ್ದಾರೆ.

ದರ್ಶನ್‌ ಒಳಗಡೆ ಕಷ್ಟಪಡುತ್ತಿದ್ದಾರೆ ಎಂದು ಹೇಳಿದವರಿಗೆ ಈ ಫೋಟೊ ಉತ್ತರವಾಗಿದೆ. ನಮ್ ಬಾಸ್ ಎಲ್ಲಿದ್ದರೂ ರಾಜನಂತೆ ಇರುತ್ತಾರೆ ಎಂದು ಕೆಲವು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

ವ್ಯಾಪಕ ಆಕ್ರೋಶ

ಇನ್ನು ದರ್ಶನ್‌, ರೌಡಿಯೊಬ್ಬನ ಜೊತೆ ಜೈಲಿನೊಳಗೆ ಜಾಲಿಯಾಗಿರುವುದು ನೋಡಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜೈಲಿನ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಅಲ್ಲದ ಫೋಟೊ ತೆಗೆಯಲು ಮೊಬೈಲ್, ಅದನ್ನು ಕಳುಹಿಸಲು ಇಂಟರ್ನೆಟ್ ವ್ಯವಸ್ಥೆ ಬೇರೆ ಕೈದಿಗೆ ಸಿಕ್ಕಿದ್ದೇಗೆ ಎನ್ನುವ ಪ್ರಶ್ನೆ ಮೂಡಿದೆ.

ಮತ್ತೊಂದೆಡೆ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿರುವ ಅನುಮಾನ ಶುರುವಾಗಿದೆ. ಪ್ರಭಾವಿಗಳ ಜೊತೆ ನಂಟು ಹೊಂದಿದ್ದು, ಅದೇ ಈಗ ದರ್ಶನ್‌ಗೆ ಜೈಲಿನಲ್ಲೂ ಸೇವೆ ಸಿಗುವಂತೆ ಮಾಡಿದೆ ಎಂದು ಆರೋಪಿಸಲಾಗಿದೆ.

ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ಜೈಲು ಅಧಿಕಾರಿಗಳು ಕೋರ್ಟ್‌ಗೆ ವರದಿಯನ್ನೇನೋ ಕೊಟ್ಟಿದ್ದಾರೆ. ಆದರೆ ಸಿಗರೇಟ್, ಟೀ, ರೌಡಿಗಳ ಜೊತೆ ಮೀಟಿಂಗ್‌ಗೆ ಅವಕಾಶ ಕೊಟ್ಟಿದ್ಯಾರು ಎಂದು ಪ್ರಶ್ನೆ ಮಾಡಲಾಗುತ್ತಿದೆ. ಇದೀಗ ಗೃಹ ಸಚಿವರನ್ನು ಕೂಡ ಜನ ತರಾಟೆಗೆ ತೆಗೆದುಕೊಂಡಿದ್ದು, ಪರಪ್ಪನ ಅಗ್ರಹಾರ ಕರ್ಮಕಾಂಡ ಇನ್ನೂ ಏನೇನು ಇದೆ ಎನ್ನುವ ಅನುಮಾನ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+