ನಟ ಯಶ್ ಕೆಳಗೆ ಬೀಳಲಿ ಎಂದೇ ಅವರು ಕಾಯ್ತಿದ್ದಾರೆ: ಶಾಕಿಂಗ್ ವಿಚಾರ ಬಿಚ್ಚಿಟ್ಟ 'ಟಗರು' ನಟಿ
ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯುವುದು ಕಷ್ಟ. ಇಲ್ಲಿ ಅವಕಾಶ ಸಿಗೋದು ಅಷ್ಟು ಸುಲಭವಲ್ಲ ಎಂಬ ಮಾತುಗಳಿವೆ. ಆದರೆ, ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಬಗ್ಗೆ ಇಡೀ ಜಗತ್ತಿಗೆ ತೋರಿಸಿದರು. ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡಿರುವ ನಟ ಯಶ್ ಅವರು ಇದೀಗ ಟಾಕ್ಸಿಕ್ ಸಿನಿಮಾ ಮೂಲಕ ಹೊಸ ಹೊಸ ಪ್ರಯತ್ನದಲ್ಲಿದ್ದಾರೆ. ಆದರೆ ಸ್ಯಾಂಡಲ್‌ವುಡ್‌ನಲ್ಲೇ ಯಶ್ ಅವರ ಏಳಿಗೆ ಸಹಿಸದ ಜನರಿದ್ದಾರಂತೆ. ಈ ಬಗ್ಗೆ ಖುದ್ದಾಗಿ ಟಗರು ಪುಟ್ಟಿ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಅಚ್ಚರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ನಟ ಶಿವರಾಜ್ ಕುಮಾರ್ ನಟನೆಯ "ಟಗರು" ಸಿನಿಮಾದಲ್ಲಿ ನಟಿಸುವ ಮೂಲಕ ಟಗರು ಪುಟ್ಟಿ ಎಂದೇ ಮನೆಮಾತಾಗಿರುವ ನಟಿ ಮಾನ್ವಿತಾ ಕಾಮತ್ ಅವರು ಸಂದರ್ಶನವೊಂದರಲ್ಲಿ ಈ ಶಾಕಿಂಗ್ ವಿಚಾರ ಹೇಳಿದ್ದಾರೆ. ಎಲ್ಲರೂ ಯಶ್ ಅವರನ್ನು ಸ್ಯಾಂಡಲ್‌ವುಡ್‌ನ ಹೆಮ್ಮೆ ಎಂದು ಕರೆಯುತ್ತಿರುವಾಗಲೇ ಅವರ ಬೆಳವಣಿಗೆಗೆ ಸಹಿಸದವರು ಇಲ್ಲೇ ಇದ್ದಾರೆ ಎಂಬ ವಿಚಾರವಾಗಿ ಮಾನ್ವಿತಾ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂದರ್ಶನದಲ್ಲಿ ಮಾತನಾಡಿರುವ ಮಾನ್ವಿತಾ, 'ಇಲ್ಲಿ ಒಳ್ಳೆಯದಾಗಬೇಕು ಎಂಬ ಉದ್ದೇಶ ಹಲವರಿಗೆ ಇಲ್ಲ. ಉದಾಹರಣೆಗೆ ರಾಕಿಂಗ್ ಸ್ಟಾರ್ ಯಶ್ ಅವರ ವಿಚಾರವನ್ನೇ ತೆಗೆದುಕೊಳ್ಳುವುದಾದ್ರೆ, ಒಂದು ಮೀಟಿಂಗ್‌ನಲ್ಲಿ ನಾವೆಲ್ಲ ಕುಳಿತಿದ್ವಿ. ನನಗೂ ಸ್ನೇಹಿತರು ಹಾಗೂ ಒಂದೇ ಸಿನಿಮಾ ಮಾಡಿರೋ ಒಬ್ಬ ನಿರ್ಮಾಪಕರೊಬ್ಬರು ಯಶ್ ಅವರ ವಿಚಾರ ಬಂದ ಕೂಡಲೇ, ಏ ಅವ್ರು ನಂಗೆ ಆವಾಗಿನಿಂದಲೂ ಗೊತ್ತು ಅನ್ನೋ ರೀತಿ ಮಾತನಾಡಿದ್ರು. ಗೊತ್ತಿದ್ರೆ ಒಳ್ಳೆಯದೇ ಅಂದುಕೊಂಡೆ. ಆದ್ರೆ ಅವರು ಹೇಗೆ ಮಾತನಾಡಿಕೊಳ್ತಿದ್ರು ಅಂದ್ರೆ, ಅವರೆಲ್ಲರೂ ಯಶ್ ಅವರು ಕೆಳಗೆ ಬೀಳುವುದನ್ನ ನೋಡಲು ಕಾಯುತ್ತಿರುವಂತೆ ಇತ್ತು' ಎಂದು ಮಾನ್ವಿತಾ ಹೇಳಿದ್ದಾರೆ.
'ಅಂದ್ರೆ, ಯಶ್ ಅವರ ಟಾಕ್ಸಿಕ್ ಸಿನಿಮಾ ಹಿಟ್ ಆಗಬೇಕು, ಅದರಿಂದ ಮತ್ತಷ್ಟು ಕೆಲಸಗಳು ನಡೆಯುತ್ತವೆ. ಯಶ್ ಅವರು ಏನೋ ವಿಶನ್ ಇಟ್ಕೊಂಡು ಹೋಗ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾದ್ರೆ ಅದರಿಂದ ಕನ್ನಡ ಇಂಡಸ್ಟ್ರಿಗೂ ಒಳ್ಳೆಯದಾಗುತ್ತೆ ಅನ್ನೋ ಮನಸ್ಥಿತಿಯೇ ಅವರಲ್ಲಿ ಇರಲಿಲ್ಲ. ಈ ಬಗ್ಗೆ ಎಷ್ಟು ಮಾತನಾಡ್ತಿದ್ರು ಅಂದ್ರೆ ನನಗೆ ಸಹಿಸಿಕೊಳ್ಳೋಕೆ ಆಗಲೇ ಇಲ್ಲ' ಎಂದು ವಿವರಿಸಿದ್ದಾರೆ.

'ನನಗೆ ಮೊದಲೇ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡ್ತಿದ್ದಾರೆ ಅಂದ್ರೆ ಸುಮ್ಮನೆ ಇರುವ ಜಾಯಮಾನದವಳಲ್ಲ. ಅಂತಹ ಜಾಗದಲ್ಲಿ ನಾನು ಇರುವವಳೂ ಅಲ್ಲ, ನಾನು ಸರಿಯಾಗಿ ಉತ್ತರ ಕೊಟ್ಟೇ ಅಲ್ಲಿಂದ ಹೊರಡುತ್ತೇನೆ. ಆ ದಿನ ಕೂಡ ನಾನು ಅದನ್ನೇ ಅವರಿಗೆ ಹೇಳಿ ಹೊರಟೆ. ನೀವೆಲ್ಲ ಯಾಕೆ ಉದ್ಧಾರ ಆಗಲ್ಲ ಅಂದ್ರೆ, ನೀವು ಎಲ್ರೂ ಬೀಳಲಿ ಅಂತಾ ಕಾಯುತ್ತಿರ್ತೀರಿ, ಒಬ್ಬರ ಏಳಿಗೆ ಸಹಿಸಲ್ಲ ನೀವುಗಳು, ಒಬ್ಬ ನಟ ಬೆಳೆಯುತ್ತಿದ್ದಾನೆ ಅಂದ್ರೆ, ಒಂದು ಪ್ರೊಡಕ್ಷನ್ ಹೌಸ್ ಬೆಳೀತಿದೆ ಅಂದ್ರೆ ಅವರ ಜೊತೆ ನಿಲ್ಲಬೇಕು ಅನ್ನೋ ಮೆಂಟಾಲಿಟಿನೇ ಇಲ್ಲ' ಎಂದು ಮಾನ್ವಿತಾ ಗರಂ ಆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.











Click it and Unblock the Notifications