Bigg Boss: ಬಿಗ್ ಬಾಸ್ ಸೀಸನ್ 12 ಕ್ಕಾಗಿ ಕೊನೆಯಾಗಲಿವೆ ಈ ಎರಡು ಧಾರಾವಾಹಿಗಳು!
ಕೊನೆಗೂ ಅಭಿಮಾನಿಗಳ ನಿರೀಕ್ಷೆಯಂತೆ ಬಿಗ್‌ಬಾಸ್ ಕನ್ನಡದ ನಿರೂಪಕರಾಗಿ ನಟ ಕಿಚ್ಚ ಸುದೀಪ್ ಅವರು ಮುಂದುವರಿಯಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿರುವ ನಟ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಕನ್ನಡ ಸೀಸನ್ 12 ರಿಂದ ಮುಂದಿನ ಒಟ್ಟು ನಾಲ್ಕು ಸೀಸನ್‌ಗಳಿಗೆ ನಿರೂಪಣೆ ಮಾಡಲಿದ್ದಾರೆ. ಇದೀಗ ಶೀಘ್ರದಲ್ಲೇ ಬಿಗ್‌ಬಾಸ್ ಸೀಸನ್ 12 ಶುರುವಾಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸೀಸನ್ ಅಪಾರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟು ಹಾಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಸೀಸನ್‌ನಲ್ಲಿ ಭಾರೀ ಬದಲಾವಣೆ ಕಾಣಲಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನರು ಸಹ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡಬಹುದಾಗಿದೆ. ಸೆಪ್ಟೆಂಬರ್ 28ರಿಂದ ನಿಮಗೆ ಟಿವಿಯಲ್ಲಿ ಸಿಗುತ್ತೇನೆ. ನಿಮ್ಮ ಪ್ರೀತಿಗೆ ಥ್ಯಾಂಕ್ಯೂ, ಲವ್ ಯೂ ಆಲ್ ಎಂದು ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಾರಂಭ ದಿನಾಂಕವನ್ನ ರಿವೀಲ್ ಮಾಡಿದ್ದಾರೆ. ಇನ್ನೂ ಬಿಗ್ ಬಾಸ್ ಶುರುವಾಗುತ್ತಿದ್ದಂತೆ ಜನಪ್ರಿಯ ಎರಡು ಧಾರಾವಾಹಿಗಳು ಕೊನೆಯಾಗಲಿವೆ.

ಹೌದು, ಕಿಚ್ಚ ಸುದೀಪ್ ಅವರು ಹೇಳಿದಂತೆ ಮುಂದಿನ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ನು ಮುಂದೆ ಮನರಂಜನೆಯ ಹೊಸ ಗಾಳಿ ಬೀಸಲಿದೆ. ಶೀಘ್ರದಲ್ಲೇ ಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ಅವರ ನಿರೂಪಣಿಯ ಬಿಗ್ ಬಾಸ್ ಸೀಸನ್ 12 ಶುರುವಾಗಲಿದೆ. ಮತ್ತೆ ನಟ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಶುರುವಾಗಲಿರುವ ಬಿಗ್ ಬಾಸ್ ನೋಡುವುದಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಒಂದು ಕಡೆ ಮತ್ತೆ ಮತ್ತೆ ನಟ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ ನಡೆಯಲಿದೆ ಎನ್ನುವ ಖುಷಿಯಲ್ಲಿ ವೀಕ್ಷಕರಿದ್ದಾರೆ. ಆದರೆ ಬಿಗ್ ಬಾಸ್ ಆರಂಭಕ್ಕೂ ಮುನ್ನ ಎಂದಿನಂತೆ ಎರಡು ಧಾರಾವಾಹಿಗಳು ತಮ್ಮ ಕಥೆಯನ್ನು ಮುಗಿಸಲೇ ಬೇಕು. ಈ ಬಾರಿ ಜನಪ್ರಿಯ ಎರಡು ಸೀರಿಯಲ್ ಗಳು ಕೊನೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಿದೆ. ಆದರೆ ಯಾವ ಧಾರಾವಾಹಿ ಎನ್ನುವ ಮಾಹಿತಿ ಮಾತ್ರ ಇನ್ನೂ ಸಿಕ್ಕಿಲ್ಲ. ಕೊನೆಗೂ ಬಿಗ್ ಬಾಸ್ ಗಾಗಿ ಎರಡು ಜನಪ್ರಿಯ ಧಾರಾವಾಹಿಗಳು ಕೊನೆಗೊಳ್ಳಲಿವೆ ಎಂಬುದು ಮಾತ್ರ ಸತ್ಯ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ದೃಷ್ಟಿ ಬೊಟ್ಟು, ಯಜಮಾನ, ರಾಮಾಚಾರಿ, ನಿನಗಾಗಿ, ಭಾಗ್ಯಲಕ್ಷ್ಮೀ, ನಂದ ಗೋಕುಲ, ಭಾರ್ಗವಿ LLB, ಪ್ರೇಮ ಕಾವ್ಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇನ್ನೂ ಕಲರ್ಸ್ ಕನ್ನಡದಲ್ಲಿ ಪ್ರೇಮಕಾವ್ಯ ಧಾರಾವಾಹಿ ಈಗಷ್ಟೆ ಆರಂಭವಾಗಿರೋದರಿಂದ ಆ ಧಾರಾವಾಹಿ ಮುಗಿಸೋದು ಅನುಮಾನ. ಇನ್ನು ನಂದ ಗೋಕುಲ ಮತ್ತು ಭಾರ್ಗವಿ LLB ಕೂಡ ಸದ್ಯದಲ್ಲಿ ಮುಗಿಸುವ ಸಾಧ್ಯತೆ ಇಲ್ಲ. ಯಾಕಂದ್ರೆ ಈ ಸೀರಿಯಲ್ ನಲ್ಲಿ ಇನ್ನು ತುಂಬಾ ಕಥೆ ಬಾಕಿ ಇದೆ. ಜೊಗೆಗೆ ಈ ಸೀರಿಯಲ್‌ಗಳಿಗೆ ಒಳ್ಳೆಯ ಟಿಆರ್‌ಪಿ ಇದೆ. ಅಲ್ಲದೇ ಈ ಧಾರಾವಾಹಿಯ ಪಾತ್ರಧಾರಿಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ.
ಇನ್ನೂ ಭಾಗ್ಯಲಕ್ಷ್ಮಿ ಧಾರಾವಾಹಿ ಶುರುವಾಗಿ ಈಗಾಗಲೇ ಮೂರು ವರ್ಷಗಳು ಕಳೆದಿದೆ. ಒಂದಕ್ಕೊಂದು ಕಥೆ ಸೇರಿಸಿ, ಸೇರಿಸಿ, ಇವತ್ತು ಹೊಸ ಕಥೆ ಪ್ರಸಾರವಾಗುತ್ತಿದೆ. ಇನ್ನು, ದೃಷ್ಟಿ ಬೊಟ್ಟು, ಯಜಮಾನ, ರಾಮಾಚಾರಿ, ನಿನಗಾಗಿ ಧಾರಾವಾಹಿಗಳಲ್ಲಿ ಕೂಡ ಹೇಳಿಕೊಳ್ಳುವಂತಹ ತಿರುವುಗಳು ಏನು ಇಲ್ಲ. ಕಥೆ ಸುಮ್ಮನೆ ಸಾಗುತ್ತಿದೆ ಅಷ್ಟೇ. ಈಗಾಗಲೇ ಎಲ್ಲಾ ರೀತಿಯ ಟ್ವಿಸ್ಟ್ ಮತ್ತು ಟರ್ನ್ ಗಳು ಮುಗಿದು ಹೋಗಿವೆ. ಹಾಗಾಗಿ ಈ ನಾಲ್ಕು ಧಾರಾವಾಹಿಗಳಲ್ಲಿ ಯಾವುದು ಬೇಕಾದರೂ ಮುಕ್ತಾಯವಾಗಬಹುದು. ವೀಕ್ಷಕರ ಪ್ರಕಾರ ಯಜಮಾನ ಮತ್ತು ರಾಮಾಚಾರಿ ಧಾರಾವಾಹಿಗಳು ಶೀಘ್ರದಲ್ಲೇ ಮುಕ್ತಾಯ ಕಾಣಲಿದೆ. ಏಕೆಂದರೆ, ರಾಮಾಚಾರಿ ಧಾರಾವಾಹಿಯಲ್ಲಿ ಕಥೆ ಏನು ಉಳಿದಿಲ್ಲ, ಇನ್ನು, ಯಜಮಾನ ಧಾರಾವಾಹಿಯಲ್ಲೂ ಮೆಚ್ಚಿಕೊಳ್ಳುವಂತ ಕಥೆ ಇಲ್ಲ. ಹೀಗಾಗಿ ಈ ಎರಡು ಧಾರಾವಾಹಿGಳು ಮುಕ್ತಾಯವಾಗಲಿವೆ ಎನ್ನಲಾಗಿದೆ.












Click it and Unblock the Notifications