ಬಿಗ್‌ಬಾಸ್‌ ವಿನ್ನರ್‌ ವಿರುದ್ಧ ಕೇಸ್‌ ದಾಖಲು, ಜಿಮ್‌ಗೆ ನುಗ್ಗಿ ₹10,000 ಕಳ್ಳತನ ಆರೋಪ!

ಹಲವರು ಫೇಮಸ್‌ ಆದ ಮೇಲೆ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಅವಕಾಶ ಪಡೆಯುತ್ತಾರೆ. ಕೆಲವರು ಬಿಗ್‌ಬಾಸ್‌ಗೆ ಹೋದ ಬಂದ ಮೇಲೆ ಫೇಮಸ್‌ ಆಗ್ತಾರೆ. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಅವರ ಸ್ಟಾರ್‌ ಚೇಂಜ್‌ ಆಗುತ್ತೆ ಎನ್ನುವ ಮಾತೂ ಇದೆ. ಆದರೆ ಸದ್ಯ ಬಿಗ್‌ಬಾಸ್‌ ಟೈಟಲ್‌ ಗೆದ್ದಿದ್ದ ವಿನ್ನರ್‌ ಮೇಲೆ ಕಳ್ಳತನದ ಆರೋಪ ಕೇಳಿಬಂದಿದೆ. ಜಿಮ್‌ಗೆ ನುಗ್ಗಿ 10,000 ರೂಪಾಯಿ ನಗದು ಹಾಗೂ ಪ್ರಮುಖ ದಾಖಲೆಗಳನ್ನು ಕದ್ದಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಬಿಗ್‌ಬಾಸ್ ಮಲಯಾಳಂ ಸೀಸನ್-6ರ ವಿಜೇತ ಮತ್ತು ಬಾಡಿಬಿಲ್ಡರ್ ಜಿಂಟೋ ವಿರುದ್ಧ ಜಿಮ್ ಮಾಲೀಕರು ಕಳ್ಳತನ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕೇರಳದ ಪಲರಿವತ್ತಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳಾ ಜಿಮ್‌ ಮಾಲೀಕರೊಬ್ಬರು ಗುತ್ತಿಗೆ ಪಡೆದಿದ್ದ ಜಿಮ್‌ಗೆ ಜಿಂಟೋ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸೋಮವಾರ ಬೆಳಗಿನ ಜಾವ ಜಿಂಟೋ ಜಿಮ್‌ಗೆ ನುಗ್ಗಿ, ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾನೆ. ಜೊತೆಗೆ ₹10,000 ನಗದು ಹಾಗೂ ಮಹತ್ವದ ದಾಖಲೆಗಳನ್ನು ಕದ್ದೊಯ್ದಿದ್ದಾನೆ ಎಂದು ಆ ಮಹಿಳೆ ಆರೋಪಿಸಿದ್ದಾರೆ.

Theft Complaint Against Bigg Boss Malayalam Winner Jinto Stealing 10 000 Rupees In Gym

ಆ ದೂರುದಾರ ಮಹಿಳೆ ನೀಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಜಿಂಟೋ ಅಕ್ರಮವಾಗಿ ಜಿಮ್‌ ಆವರಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐಪಿಸಿ ಸೆಕ್ಷನ್ 305ರ ಅಡಿಯಲ್ಲಿ ಪ್ರಕರಣ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಆ ಮಹಿಳೆ ಹಾಗೂ ಜಿಂಟೋ ನಡುವೆ ಈ ಹಿಂದಿನಿಂದಲೂ ವಿವಾದ ಇದೆ. ಇದೇ ಮಹಿಳೆ ಜಿಂಟೋ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಳಿಕ ಅವರು ಬಂಧನಕ್ಕೂ ಒಳಗಾಗಿದ್ದರು. ಇದು ಮಾತ್ರವಲ್ಲ, ಜಿಂಟೊ ಅವರನ್ನು ಈ ಹಿಂದೆ ಹೈಬ್ರಿಡ್ ಗಾಂಜಾ ಕೇಸ್‌ನಲ್ಲೂ ವಿಚಾರಣೆ ನಡೆಸಲಾಗಿತ್ತು. ಈ ಕೇಸ್‌ನಲ್ಲಿ ಜಿಂಟೋ ಮೇಲೆ ಯಾವುದೇ ನೇರ ಆರೋಪ ಇಲ್ಲದಿದ್ದರೂ ಅವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು.

ಈ ಪೊಲೀಸ್‌ ಕೇಸ್‌ಗಳ ಜೊತೆಗೆ ಜಿಂಟೋ ಅವರು ಕೆಲ ನಟಿಯರು ಹಾಗೂ ಮಾಡಲ್‌ಗಳಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹಾಗು ಬಿಗ್‌ಬಾಸ್ ಮನೆಗೆ ಪ್ರವೇಶ ಕಲ್ಪಿಸುವುದಾಗಿ ಭರವಸೆ ನೀಡಿ ವಂಚನೆ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಬಿಗ್‌ಬಾಸ್‌ಗೆ ಸ್ಪರ್ಧಿಯಾಗಿ ಹೋದಾಗಲೂ ಈ ವಿರೋಧ ಮತ್ತು ವಿವಾದಗಳ ನಡುವೆಯೂ ಅವರು ವಿನ್ನರ್‌ ಆಗಿ ಹೊರಹೊಮ್ಮಿದ್ದರು. ಬಿಗ್ ಬಾಸ್ ಮಲಯಾಳಂ ಸೀಸನ್ 6ರಲ್ಲಿ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬರಾಗಿ ಜಿಂಟೋ ಹೆಸರು ಪಡೆದಿದ್ದರು. ಅವರ ಗೆಲುವಿಗೆ ವೀಕ್ಷಕರು ಮತ್ತು ಸಹ ಸ್ಪರ್ಧಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+