Tharun Sudhir-Sonal Wedding: ಸ್ಯಾಂಡಲ್‌ವುಡ್ ದಿಗ್ಗಜರಿಗೆ ತರುಣ್ ಆಮಂತ್ರಣ: ಫೋಟೋ
ಬೆಂಗಳೂರು, ಆಗಸ್ಟ್ 08: ಸ್ಯಾಂಡಲ್‌ವುಡ್ ನಿರ್ದೇಶಕ ದಿವಂಗತ ನಟ ಸುಧೀರ್ ಪುತ್ರ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಅವರು ಮದುವೆ ಸಂಭ್ರಮ ಕಳೆಗಟ್ಟಿದೆ. ಇದೇ ಆಗಸ್ಟ್ 10 ಮತ್ತು 11ರಂದು ಬೆಂಗಳೂರಿನ ಕೆಂಗೇರಿ ಸಮೀಪದ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ವಿವಾಹಕ್ಕೆ ರಾಜಕೀಯ ಗಣ್ಯಮಾನ್ಯರಿಂದ ಹಿಡಿದಯು ಸ್ಯಾಂಡಲ್‌ವುಡ್ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.
ಮದುವೆ ಸಂಬಂಧ ಚಪ್ಪರದ ಪೂಜೆ ನಡೆದಿದ್ದು, ವುಧವಾಗಿ ನಟಿ ಸೋನಲ್ ಕಂಗೊಳಿಸಿದ್ದಾರೆ. ಇತ್ತ ತರುಣ್ ಸುಧೀರ್ ಚಿತ್ರರಂಗದ ದಿಗ್ಗಜ ನಟರಿಗೆ, ಮುಖ್ಯಮಂತ್ರಿಗಳು ಸೇರಿದಂತೆ ರಾಜಕೀಯ ಗಣ್ಯರಿಗೆ, ನಟಿಮಣಿಯರಿಗೆ ಮದುವೆ ವಿಶೇಷ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ನಿರ್ದೇಶಕ ತರುಣ್ ಸುಧೀರ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಚಿರಪರಿಚಿತ ನಿರ್ದೇಶಕ. ಅವರು ಸಾಕಷ್ಟು ಸ್ಟಾರ್ ನಟ ನಟಿಯರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಈ ಪೈಕಿ ಒಂದಷ್ಟು ಮಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ಸುಮಾರು ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದುಕೊಂಡು ತಮ್ಮ ನಿರ್ದೇಶನ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಸ್ನೇಹ ಬಳಗ ಆಹ್ವಾನಿಸಿದ ತರುಣ್
ತರುಣ್ ಸುಧೀರ್ ನಿರ್ದೇಶನಕ್ಕೆ ಅಭಿಮಾನಿಗಳು, ಸ್ನೇಹ ಬಳಗ ಇದ್ದಂತೆ, ನಟಿ ಸೋನಲ್ ಅವರು ಸಹ ಒಂದಷ್ಟು ಸಿನಿಮಾಗಳ ಮೂಲಕ ಸಾಕಷ್ಟ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಒಂದಷ್ಟು ಸ್ನೇಹ ಬಳಗವಿದೆ.

ಇದೀಗ ಅವರೆಲ್ಲರಿಗೂ ನಟ ತರುಣ್ ಸುಧೀರ್ ಆಮಂತ್ರಣ ನೀಡಿದ್ದಾರೆ. ನಟರಾದ ಶಿವರಾಜ್ ಕುಮಾರ್ ದಂಪತಿಗೆ, ಸುದೀಪ್, ಶ್ರೀಮುರಳಿ, ನಟ ಪ್ರೇಮ್, ಉಪೇಂದ್ರ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಟಿ ರಚಿತಾರಾಮ್, ನಟಿ ಮಾಲಾಶ್ರೀ ಕುಟುಂಬ ಸೇರಿದಂತೆ ಅನೇಕ ಕಲಾವಿದರೆ ವಿವಾಹಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.
ತರುಣ್‌ಗೆ ಆಪ್ತರಿಂದ ಶುಭ ಹಾರೈಕೆ
ಇದರೊಂದಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಒಂದಷ್ಟು ರಾಜಕಾರಣಿಗಳಿಗೂ ಅವರು ವಿವಾಹ ಆಮಂತ್ರಣ ನೀಡಿದ್ದಾರೆ. ನಟರಿಗೆ ಕರೆಯಲು ಮನೆಗೆ ತೆರಳಿದ ತರುಣ್ ಸುಧೀರ್ ನಟ ನಟಿಯರೊಂದಿಗೆ ವಿವಾಹ ಸಿದ್ಧತೆ, ಹೊಸ ಜೀವನ, ಸಿನಿಮಾ ಕುರಿತು ಒಂದಷ್ಟು ಮಾತುಕತೆಗಳು ನಡೆಸಿದ್ದಾರೆ. ತುರುಣ್ ಹೊಸ ಜೀವನಕ್ಕೆ ಆಪ್ತರೆಲ್ಲ ಶುಭ ಕೋರಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಅವರು ಪ್ರೀತಿ ಮದುವೆ ಆಗುತ್ತಿರುವ ಸ್ಯಾಂಡಲ್‌ವುಡ್ ಮತ್ತೊಂದು ತಾರಾ ಜೋಡಿ. ಈಗಾಗಲೇ ಅನೇಕ ಸ್ಟಾರ್ ಜೋಡಿಗಳನ್ನು ಇಂಡಸ್ಟ್ರಿಯಲ್ಲಿ ನೋಡಬಹುದು. ಇದೀಗ ಈ ಸಾಲಿಗೆ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಅವರು ಸೇರಿದ್ದಾರೆ. ವಿವಾಹಕ್ಕೆ ಇನ್ನೂ ಎರಡು ದಿನ ಮಾತ್ರವೇ ಬಾಕಿ ಇದೆ.












Click it and Unblock the Notifications