Get Updates
Get notified of breaking news, exclusive insights, and must-see stories!

Thalapathy Vijay: ರಾಜಕಾರಣಕ್ಕೆ ಇಳಿಯುತ್ತಿರುವ ನಟ ವಿಜಯ್ ಒಂದು ಕೋಟಿ ದೇಣಿಗೆ ಕೊಟ್ಟಿದು ಯಾರಿಗೆ?

ಚೆನ್ನೈ, ಮಾರ್ಚ್ 13: ನಟ ಕಮ್ ರಾಜಕಾರಣಿ ವಿಜಯ್ ಸಕತ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಾಜಕೀಯ ಪಕ್ಷ ಘೋಷಿಸಿ ಸಂಚಲನ ಮೂಡಿಸಿರುವ ಅವರು ಸಿನಿಮಾ ರಂಗದಿಂದಲೇ ದೂರವಾಗುತ್ತಾರೆ ಎಂಬ ವದಂತಿಯಿತ್ತು. ಆದರೆ, ತಾನು ಸಿನಿಮಾ ಬಿಟ್ಟು ಎಲ್ಲಿಯೂ ಹೋಗಿಲ್ಲ ಎನ್ನುವುದಕ್ಕೆ ಮತ್ತೊಂದು ಸುಳಿವು ನೀಡಿದ್ದಾರೆ.

ತಮಿಳು ಚಿತ್ರರಂಗದ ನಟರಿಗಾಗಿ ಚೆನ್ನೈನಲ್ಲಿರುವ ದಕ್ಷಿಣ ಭಾರತದ ಕಲಾವಿದರ ಸಂಘ (ನಾಡಿಗರ್ ಸಂಗಮ್) ಅಸೋಸಿಯೇಷನ್ ಸುಮಾರು ಒಂದು ದಶಕದಿಂದ ತನ್ನ ಸದಸ್ಯರಿಗೆ ಕಟ್ಟಡವನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ. ಆದರೆ, ಇನ್ನೂ ಪೂರ್ಣವಾಗಿಲ್ಲ. ಈ ಕಟ್ಟಡದ ನಿರ್ಮಾಣಕ್ಕೆ ಸಹಾಯ ಮಾಡಲು ನಟ ದಳಪತಿ ವಿಜಯ್ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

Thalapathy Vijay donates Rs 1 crore to Nadigar Sangam Vishal thanks him

ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ದಳಪತಿ ವಿಜಯ್. ಈ ಸುದ್ದಿಯನ್ನು ನಾಡಿಗರ್ ಸಂಗಮ್ ಕಾರ್ಯದರ್ಶಿ ನಟ ವಿಶಾಲ್ ಅವರು ಹಂಚಿಕೊಂಡಿದ್ದಾರೆ. ಇಬ್ಬರು ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿರುವ ವಿಶಾಲ್, ಕೊಡುಗೆಗಾಗಿ ಅವರಿಗೆ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.

ಸಂಘದ ಹಾಲಿ ಪದಾಧಿಕಾರಿಗಳು ಕಟ್ಟಡ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. 2017ರಲ್ಲಿ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಆರಂಭಗೊಂಡಿದ್ದರೂ ಹಲವು ಆರ್ಥಿಕ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ತಮಿಳು ಚಿತ್ರರಂಗದ ಟಾಪ್ ಸ್ಟಾರ್ ಗಳು ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ.

ಈ ಹಿಂದೆ ಕಮಲ್ ಹಾಸನ್ ಕಟ್ಟಡಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಆನ್‌ಲೈನ್‌ನಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಈಗ, ವಿಜಯ್ ಕೆಲಸಕ್ಕೂ ಇದೇ ರೀತಿಯ ಮೆಚ್ಚುಗೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನಾಡಿಗರ್ ಸಂಗಮ್ ಕಾರ್ಯದರ್ಶಿಯಾಗಿರುವ ನಟ ವಿಶಾಲ್ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. "ವಿಜಯ್, ಥ್ಯಾಂಕ್ ಯು ಎಂದರೆ ಕೇವಲ ಎರಡು ಪದಗಳು. ಆದರೆ ಒಬ್ಬ ವ್ಯಕ್ತಿಯು ತನ್ನ ಹೃದಯದಿಂದ ಸಹಾಯ ಮಾಡಿದ ವ್ಯಕ್ತಿಗೆ ಇದು ಅರ್ಥವಾಗುತ್ತದೆ. ಸರಿ, ನಾನು ಮಾತನಾಡುತ್ತಿರುವುದು ಎಸ್​ಐಎಎ (ನಾಡಿಗರ್ ಸಂಗಮ್) ಕಟ್ಟಡದ ಕೆಲಸಕ್ಕೆ ಒಂದು ಕೋಟಿ ದೇಣಿಗೆ ನೀಡಿದ ನನ್ನ ನೆಚ್ಚಿನ ನಟ ನಮ್ಮ ದಳಪತಿ ವಿಜಯ್ ಸಹೋದರನ ಬಗ್ಗೆ. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದಿದ್ದಾರೆ.

ಮುಂದುವರಿದು "ಹೌದು ನಿಮ್ಮ ಬೆಂಬಲ ಮತ್ತು ಸಹಾಯ ಇಲ್ಲದೆ ಕಟ್ಟಡವು ಅಪೂರ್ಣವಾಗಿರುತ್ತದೆ ಎಂದು ನಾವು ಮೊದಲೇ ಗೊತ್ತಿತ್ತು. ಈಗ ಆದಷ್ಟು ಬೇಗ ಕಟ್ಟದ ನಿರ್ಮಾಣ ಆಗುವಂತೆ ಮಾಡಲು ನೀವು ನಮಗೆ ಉತ್ತೇಜನ ನೀಡಿದ್ದೀರಿ ಸಹೋದರ. ಧನ್ಯವಾದಗಳು ಸಹೋದರ" ಎಂದು ನಟ ವಿಶಾಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸಿನಿಮಾ ಕೆಲಸದ ವಿಷಯಕ್ಕೆ ಬಂದರೆ, ಲಿಯೋ ಸಿನಿಮಾ ಬಳಿಕ ದಳಪತಿ ವಿಜಯ್ ಪ್ರಸ್ತುತ ತಮ್ಮ 68 ನೇ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳಲಿದ್ದಾರೆ. ಅರ್ಚನಾ ಕಲ್ಪಾತಿ ನಿರ್ಮಿಸಲಿದ್ದಾರೆ. ಆದರೆ, ವಿಜಯ್ ಅವರ ಕೊನೆಯ ಚಿತ್ರ ಎಂದು ವದಂತಿಗಳಿವೆ, ಏಕೆಂದರೆ ಅವರು ರಾಜಕೀಯದತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+