ಪುನೀತ್ ರಾಜ್‌ಕುಮಾರ್ ಜೊತೆಗೆ ಆ 2 ದಿನ ಶೂಟಿಂಗ್ ಬಳಿಕ ಏನಾಯ್ತು ಗೊತ್ತಾ? ಬೇಸರಗೊಂಡ ನಟಿ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಸಿನಿಮಾ ಮಾಡಬೇಕು ಎಂದು ತುಂಬಾ ಜನ ನಟಿಯರು ಆಸೆ ಪಡುತ್ತಾರೆ. ಆದರೆ ಆ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದಕ್ಕೂ ಪುಣ್ಯ ಮಾಡಿರಬೇಕು. ಯಾಕೆಂದರೆ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರು ಜೀವಂತವಾಗಿ ಇರುವಷ್ಟು ದಿನ ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಅವರ ಸಿನಿಮಾ, ಹಾಡು, ಅವರ ಮಾತು, ಮಾಡಿದ ಒಳ್ಳೆಯ ಕೆಲಸಗಳಿಂದ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರೊಂದಿಗೆ ಅಭಿನಯಿಸಿದ ಪ್ರತಿಯೊಬ್ಬ ನಟಿಯರು ಕೂಡ ಒಂದೊಳ್ಳೆ ಸ್ಥಾನದಲ್ಲಿದ್ದಾರೆ. ಇಂತಹ ಅವಕಾಶ ನನಗೂ ಬಂದಿತ್ತು ಎಂದು ನಟಿಯೊಬ್ಬರು ಹೇಳಿಕೊಂಡಿದ್ದಾರೆ.
ಹೌದು ತೆಲುಗು ನಟಿ ಪ್ರಿಯಾಂಕಾ ಜಾವಾಲ್ಕರ್ ಸಂದರ್ಶನವೊಂದರಲ್ಲಿ ತಮಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಅವಕಾಶ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಅದ್ಯಾವ ಸಿನಿಮಾ? ಪ್ರಿಯಾಂಕಾ ಜಾವಾಲ್ಕರ್ ಅವರು ಪುನೀತ್ ರಾಜಕುಮಾರ್ ಜೊತೆಗೆ ನಟಿಸಲಿಲ್ಲ ಯಾಕೆ? ಏನೇಯ್ತು ಎಲ್ಲವನ್ನೂ ತಿಳಿಯೋಣ.

ಪ್ರಿಯಾಂಕಾ ಜಾವಾಲ್ಕರ್ ತೆಲುಗಿನ 'ತಿಮ್ಮರಸು', 'ಟ್ಯಾಕ್ಸಿವಾಲ', ' ಗಮನಂ' ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ. ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿದ್ದರು. ಕೆಲ ದಿನಗಳ ಕಾಲ ಚಿತ್ರೀಕರಣ ಬಳಿಕ ಆಕೆಯನ್ನು ಚಿತ್ರದಿಂದ ಕೈ ಬಿಡಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ಪ್ರಿಯಾಂಕ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾದಲ್ಲಿ ಪ್ರಿಯಾಂಕಾ ಜಾವಾಲ್ಕರ್ ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಹಿಂದೊಮ್ಮೆ ಹರಿದಾಡಿದ್ದವು. ಸುದ್ದಿಗಳು ಹರಿದಾಡಿದಂತೆ ಪ್ರಿಯಾಂಕಾ ಅವರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಆಯ್ಕೆ ಆಗಿದ್ದರು. ಎರಡು ದಿನ ಶೂಟಿಂಗ್ ಕೂಡ ನಡೆದಿತ್ತು. ಆದರೆ ಮೂರನೇ ದಿನ ಕರೆ ಮಾಡುವುದಾಗಿ ಹೇಳಿ, ನಂತರ ಕರೆ ಮಾಡಲಿಲ್ಲ. ಯಾಕೆ ಎನ್ನುವ ಕಾರಣ ಕೂಡ ಹೇಳಲಿಲ್ಲ ಎಂದು ನಟಿ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ.

ಅಂದಹಾಗೆ ತೆಲುಗು ನಟಿ ಪ್ರಿಯಾಂಕಾ ಜಾವಾಲ್ಕರ್ ಕನ್ನಡದ 'ನಟಸಾರ್ವಭೌಮ' ಸಿನಿಮಾಕ್ಕೆ ಮೊದಲು ಆಯ್ಕೆಯಾದ ನಟಿ. ಅವರನ್ನು ಕರೆಸಿಕೊಂಡು ಎರಡು ದಿನ ಶೂಟಿಂಗ್ ಕೂಡ ಮಾಡಲಾಗಿತ್ತು. ಬಳಿಕ ಅವರನ್ನು ಚಿತ್ರ ತಂಡ ಕೈಬಿಟ್ಟಿತು ಎಂದು ನಟಿ ಹೇಳಿದ್ದಾರೆ. ಪ್ರಿಯಾಂಕಾ ನಂತರ ರಚಿತಾ ರಾಮ್ ಅವರು ಈ ಸಿನಿಮಾದಲ್ಲಿ ನಟಿಸಿದರು.
ಆದರೆ ಸಿನಿಮಾದಲ್ಲಿ ಪ್ರಿಯಾಂಕಾ ಜಾವಾಲ್ಕರ್ ಅವರಿಗೆ ಯಾಕೆ ಅವಕಾಶ ಸಿಗಲಿಲ್ಲ ಅನ್ನೋದು ಮಾತ್ರ ಸ್ಪಷ್ಟತೆ ಇಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ, 'ಸಿನಿಮಾ ಅಂದರೆ ಒಬ್ಬರು ಇಬ್ಬರು ಮಾಡುವಂತದ್ದಲ್ಲ. ನಿರ್ಮಾಪಕರು, ನಿರ್ದೇಶಕರು, ನಟರು, ಹಲವು ಪಾತ್ರಧಾರಿಗಳೂ ಹೀಗೆ ಎಲ್ಲರೂ ಕೂಡ ಇರುತ್ತಾರೆ. ಅವರೆಲ್ಲರೊಂದಿಗೆ ನಮ್ಮ ಪಾತ್ರ ಹೊಂದಿಕೊಳ್ಳಬೇಕು. ಜೊತೆಗೆ ನನಗೆ ಅವಕಾಶ ಸಿಗದೇ ಇರಲು ಇವರೇ ಕಾರಣ ಎಂದು ನಾನು ಹೇಳಲು ಸಾಧ್ಯವೇ ಇಲ್ಲ. ತಂಡದ ನಿರ್ಧಾರ ಕೂಡ ಆಗಿರಬಹುದು. ಆದರೆ ನನಗೆ ಯಾಕೆ ಅವಕಾಶ ಸಿಗಲಿಲ್ಲ ಅನ್ನೋದನ್ನು ಮಾತ್ರ ನನಗೆ ಯಾರೂ ಕೂಡ ಹೇಳಿಲ್ಲ' ಎಂದು ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರಿಯಾಂಕಾ ಜಾವಾಲ್ಕರ್ ಅವರಂತೆ ಅದೆಷ್ಟು ಜನ ಅಪ್ಪು ಜೊತೆಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ರೋ ಏನೋ ಗೊತ್ತಿಲ್ಲ. ಆದರೆ ವಿಧಿಯಾಟಕ್ಕೆ ನಮ್ಮ ಅಪ್ಪು ಇಂದು ನಮ್ಮೊಂದಿಗೆ ಇಲ್ಲ. ವಿಧಿ ಎಷ್ಟೇ ಕ್ರೂರಿ ಆಗಿದ್ದರೂ ಕೂಡ ಅಪ್ಪು ನೆನಪನ್ನು ಮಾತ್ರ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವೇ ಇಲ್ಲ. ಮಣ್ಣಲ್ಲಿ ಮಣ್ಣಾಗುವವರೆಗೂ ಅಪ್ಪು ಮೇಲಿನ ಪ್ರೀತಿ ಕನ್ನಡಿಗರ ಮನದಾಳದಲ್ಲಿ ಆಳವಾಗಿರುತ್ತದೆ.












Click it and Unblock the Notifications