Actor Vijay: ಟೋಪಿ ತೊಟ್ಟು, ನಮಾಜ್‌ ಮಾಡಿದ ತಮಿಳು ನಟ ವಿಜಯ್‌- ನೆಟ್ಟಿಗರು ಕೆಂಡಾಮಂಡಲ

ದಕ್ಷಿಣ ಭಾರತದ ಸೂಪರ್‌ಸ್ಟಾರ್ ವಿಜಯ್ ಶುಕ್ರವಾರ ಚೆನ್ನೈನಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಉಪವಾಸ ಮಾಡುವವರು ಉಪವಾಸ ಮುರಿಯುವ ಇಫ್ತಾರ್ ಕೂಟದಲ್ಲಿ ಎಲ್ಲಾ ಮುಸ್ಲಿಂ ಬಾಂಧವರೊಂದಿಗೆ ತಾವೂ ಕೂಡ ಟೋಪಿ ಧರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ ತಮಿಳು ನಟ ಹಾಗೂ ರಾಜಕಾರಣಿ ವಿಜಯ್. ಈ ಫೋಟೋಗಳು ಮತ್ತು ವೀಡಿಯೊಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ವಿಡಿಯೋಕ್ಕೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

ವಿಜಯ್ ನಮಾಜ್ ವೀಡಿಯೋ ವೈರಲ್

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ಮತ್ತು ಮುಖ್ಯಸ್ಥ ವಿಜಯ್ ಅವರು ಮುಸ್ಲಿಂ ಸಹೋದರರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸುವ ವೇಳೆ ಬಿಳಿ ಬಟ್ಟೆ ಧರಿಸಿ ತಲೆಗೆ ಟೋಪಿ ಹಾಕಿಕೊಂಡಿರುವುದು ಕಂಡುಬಂದಿದೆ. ಅಲ್ಲದೆ ವಿಜಯ್ ಇಡೀ ದಿನ ಉಪವಾಸ ಮಾಡಿ ಇಸ್ಲಾಮಿಕ್ ವಿಧಿವಿಧಾನಗಳ ಪ್ರಕಾರ ನಮಾಜ್ ಮಾಡಿದ್ದಾರೆ. ನಂತರ ಅವರು ಇಫ್ತಾರ್ ಆಚರಣೆಗಳಲ್ಲಿ ಭಾಗವಹಿಸಿ, ಸಾವಿರಾರು ಉಪವಾಸ ಮಾಡುವ ಮುಸ್ಲಿಂ ಬಾಂಧವರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

tamil actor vijay wears a hat and offers prayers with muslims - netizens are outraged

ಇಮಾಮ್‌ಗಳಿಗೂ ಆಹ್ವಾನ

ಚೆನ್ನೈನ ರಾಯಪೆಟ್ಟಾದಲ್ಲಿರುವ ವೈಎಂಸಿಎ ಮೈದಾನದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ಇಫ್ತಾರ್ ಕೂಡದಲ್ಲಿ 15 ಸ್ಥಳೀಯ ಮಸೀದಿಗಳ ಇಮಾಮ್‌ಗಳನ್ನು ಹಾಜರಾಗಲು ಆಹ್ವಾನಿಸಲಾಗಿತ್ತು. ಸುಮಾರು 3000 ಉಪವಾಸ ಮಾಡುವ ಮುಸ್ಲಿಂಮರಿಗೆ ವ್ಯವಸ್ಥೆ ಮಾಡಲಾಗಿತ್ತು.

ನೆಟ್ಟಿಗರು ಕೆಂಡಾಮಂಡಲ

ಆದರೆ ಈ ವಿಡಿಯೋಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಕಳೆದ ತಿಂಗಳು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯಿತು. ಇದರಲ್ಲಿ ದೇಶ ಅಲ್ಲದೆ ವಿದೇಶದಿಂದಲೂ ಜನ ಭಾಗವಹಿಸಿ ಪವಿತ್ರಾ ಸ್ಥಾನ ಮಾಡಿದರು. ಕೆಲ ಮುಸ್ಲಿಂ ಬಾಂಧವರೂ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಹೀಗಿರುವಾಗ ತಮಿಳು ನಟ ವಿಜಯ್ ಎಲ್ಲಾ ಜಾತಿ ಧರ್ಮದವರನ್ನು ಒಂದೇ ರೀತಿ ನೋಡುವುದಾದರೆ ಕುಂಭಮೇಳದಲ್ಲಿ ಯಾಕೆ ಭಾಗವಹಿಸಲಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳಿಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

tamil actor vijay wears a hat and offers prayers with muslims - netizens are outraged

ವಿಜಯ್ ಮುಂಬರುವ ಸಿನಿಮಾ

ವಿಜಯ್ ಅವರ ಮುಂಬರುವ ಚಿತ್ರದ ಬಗ್ಗೆ ಮಾತನಾಡುವುದಾದರೆ, ನಟ ತಮ್ಮ ಬಹುನಿರೀಕ್ಷಿತ ಚಿತ್ರ 'ಜನ ನಾಯಕನ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ವಿಜಯ್ ಪ್ರಸ್ತುತ ಹೆಚ್. ವಿನೋದ್ ನಿರ್ದೇಶನದ ಚಿತ್ರ 'ಜನ ನಾಯಕನ್' ನ ಶೂಟಿಂಗ್ ಪೂರ್ಣಗೊಳಿಸುತ್ತಿದ್ದಾರೆ. ರಾಜಕೀಯಕ್ಕೆ ಸಕ್ರಿಯವಾಗಿ ಪ್ರವೇಶಿಸುವ ಮೊದಲು ಇದು ಚಿತ್ರರಂಗದಲ್ಲಿ ಅವರ ಕೊನೆಯ ಸಿನಿಮಾ ಎಂದು ನಟ ದೃಢಪಡಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಜೊತೆಗೆ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+