ಮೊಡವೆ ತೊಲಗಿಸಲು ನನ್ನ ಎಂಜಲು ಹಚ್ಚಿಕೊಳ್ತೀನಿ: ಮಿಲ್ಕಿ ಬ್ಯೂಟಿ ಸೀಕ್ರೇಟ್ ರಿವೀಲ್...Tamannaah Bhatia
ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಮಿಲ್ಕಿ ಬ್ಯೂಟಿ ಎಂದೇ ಫೇಮಸ್. ಹಾಲಿನಂತೆ ಹೊಳೆಯುವ ತನ್ನ ಮೈಕಾಂತಿಯಿಂದಲೇ ತಮನ್ನಾಗೆ ಈ ಹೆಸರು ಬಂದಿದೆ. ಇನ್ನು ಪಡ್ಡೆಹುಡುಗರ ಹಾಟ್ ಫೇವರೇಟ್ ಕೂಡ ಹೌದು. ನಟಿಯಾಗಿರುವ ಕಾರಣ ಅಂದವಾಗಿ ಕಾಣಲು ತುಂಬಾ ದುಬಾರಿಯಾದ ಮೇಕಪ್ ವಸ್ತುಗಳನ್ನ ಬಳಸಬಹುದು ಎನ್ನಲಾಗುತ್ತೆ. ಇನ್ನು ಅಂದ ಹೆಚ್ಚಿಸಿಕೊಳ್ಳಲು ಈಗ ಸರ್ಜರಿಗಳ ಮೊರೆಯೂ ಹೋಗುತ್ತಾರೆ. ಆದರೆ ತಮನ್ನಾ ತಮ್ಮ ಬ್ಯೂಟಿ ಸೀಕ್ರೇಟ್‌ವೊಂದನ್ನ ಬಿಟ್ಟುಕೊಟ್ಟಿದ್ದಾರೆ. ತಮ್ಮ ಮುಖಕ್ಕೆ ಎಂಜಲು ಹಾಕುವುದಾಗಿ ಹೇಳಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಸಾಮಾನ್ಯವಾಗಿ ತಮನ್ನಾ ಭಾಟಿಯಾ ಅವರ ಹೊಳೆಯುವ ಚರ್ಮವನ್ನು ಸಿನಿಮಾಗಳಲ್ಲಿ ನೋಡಿದ ಬಹುತೇಕ ಎಲ್ಲರೂ ಮೆಚ್ಚುತ್ತಾರೆ. ಆಹಾ ಏನ್ ಅಂದ ಚೆಂದ ಎಂದು ಹೊಗಳುತ್ತಾರೆ. ಆದರೆ ಇತ್ತೀಚಿನ ಸಂದರ್ಶನದಲ್ಲಿ ತಮನ್ನಾ ನೀಡಿರುವ ಹೇಳಿಕೆ ಶಾಕ್ ನೀಡುವಂತಿದೆ. ನಟಿ ತಮ್ಮ ಚರ್ಮದ ಆರೈಕೆಯ ವಿಧಾನದ ಬಗ್ಗೆ ಮಾತನಾಡಿದ್ದು, ಇದರಲ್ಲಿ ವಿಚಿತ್ರವೆಂದರೆ ಮೊಡವೆ ಚಿಕಿತ್ಸೆಗೆ ತಮ್ಮ ಉಗುಳನ್ನು (ಎಂಜಲು) ಬಳಸುವುದಾಗಿ ಬಹಿರಂಗಪಡಿಸಿದ್ದಾರೆ.

ಹಲ್ಲುಜ್ಜದೆ ಬೆಳಗ್ಗೆಯ ಎಂಜಲು ಬಳಸಿ
'ನೀವು ಮುಖದ ಮೊಡವೆಗಳಿಗೆ ನೀವು ಹೇಗೆ ಚಿಕಿತ್ಸೆ ಪಡೆಯುತ್ತೀರಿ ಎಂದು ಕೇಳಿದ್ದಕ್ಕೆ ತಮನ್ನಾ, "ನನ್ನ ಎಂಜಲು ಎಂದಿದ್ದಾರೆ. ಇದು ನಿಜಕ್ಕೂ ಮೊಡವೆ ಹೋಗಲಾಡಿಸಲು ಚೆನ್ನಾಗಿ ಕೆಲಸ ಮಾಡುತ್ತದೆ. ಅದು ಹಲ್ಲುಜ್ಜುವ ಮೊದಲು, ಬೆಳಿಗ್ಗೆಯ ಎಂಜಲು ತುಂಬಾ ಪರಿಣಾಮಕಾರಿ. ಆ ಎಂಜಲಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಎಂದೂ ತಮನ್ನಾ ವಿವರಿಸಿದ್ದಾರೆ. ಇದು ವೈಜ್ಞಾನಿಕವಾದ ವಿಚಾರವೇ, ನಾನೇನು ಡಾಕ್ಟರ್ ಅಲ್ಲ. ಆದರೆ ಇದು ನನ್ನ ವೈಯಕ್ತಿಕ ಹ್ಯಾಕ್. ಇದರ ಹಿಂದೆ ವಿಜ್ಞಾನವಿದೆ ಎಂದು ನಾನು ನಂಬುತ್ತೇನೆ. ನೀವು ಬೆಳಿಗ್ಗೆ ಎದ್ದಾಗ ನಿಮ್ಮ ದೇಹವು ನಿಮ್ಮ ಬಾಯಿಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಸೃಷ್ಟಿಸಿರುತ್ತದೆ' ಎಂದಿದ್ದಾರೆ.
'ನಮ್ಮ ಕಣ್ಣುಗಳು ಲೋಳೆಯಿಂದ ತುಂಬಿರುವುದಕ್ಕೆ, ನಮ್ಮ ಮೂಗು ಲೋಳೆಯಿಂದ ತುಂಬಿರುವುದಕ್ಕೆ ಮತ್ತು ನಮ್ಮ ಬಾಯಿ ಹಲ್ಲುಜ್ಜುವ ಮೊದಲು ರಾತ್ರಿಯಲ್ಲಿ ಸಂಗ್ರಹವಾದ ಎಲ್ಲ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುವುದಕ್ಕೆ ಇದು ಕಾರಣವಾಗಿದೆ. ನೀವು ಈ ಉಗುಳನ್ನು ಬಳಸಿದರೆ, ಅದು ನಿಮ್ಮ ಮೊಡವೆಗಳನ್ನು ತಕ್ಷಣವೇ ಒಣಗಿಸುತ್ತದೆ' ಎಂದು ತಮನ್ನಾ ಬ್ಯೂಟಿ ಸೀಕ್ರೇಟ್ ಹೇಳಿದ್ದಾರೆ.
ವಯಸ್ಸಾಗದಂತೆ ಕಾಣುವುದು ಹೇಗೆ?
'ಹಲವು ಸ್ಕಿನ್‌ಕೇರ್ ಬ್ರ್ಯಾಂಡ್‌ಗಳು ನೀವು 25 ವರ್ಷ ವಯಸ್ಸಿನೊಳಗೆ ಆಂಟಿ ಏಜ್ ಉತ್ಪನ್ನಗಳನ್ನು ಪ್ರಾರಂಭಿಸಬೇಕು ಎಂದು ಪ್ರಚಾರ ಮಾಡುತ್ತವೆ. ನನ್ನ ಪ್ರಕಾರ, ಇದು ಮಾರ್ಕೆಟಿಂಗ್ ಗಿಮಿಕ್ ಅಲ್ಲ. ಆದರೆ ನಿಜವಾದ ಸತ್ಯ. ನಾನು ಯಾವಾಗಲೂ ಕ್ಯಾಮೆರಾ ಮುಂದೆಯೇ ಇರುತ್ತೇನೆ. ಆದ್ದರಿಂದ ನಾನು 24-25 ವರ್ಷ ವಯಸ್ಸಿನಿಂದಲೂ ಉತ್ತಮ ಚರ್ಮದ ಆರೈಕೆಯನ್ನು ಬಳಸುತ್ತಿದ್ದೇನೆ. ಅದು ಹೆಚ್ಚು ತಡೆಗಟ್ಟುವ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಸುಂದರವಾಗಿ ವಯಸ್ಸಾಗಲು ಬಯಸಿದರೆ, 25 ವರ್ಷ ವಯಸ್ಸಿನಿಂದಲೇ ಆಂಟಿ ಏಜ್ ಕ್ರೀಮ್‌ಗಳನ್ನು ಬಳಸುವುದು ಒಳ್ಳೆಯದು. ಅದು ಸಹಾಯ ಮಾಡುತ್ತದೆ. ಆದರೆ ಅದರ ಹೊರತಾಗಿ, ನಿಮ್ಮ ಉತ್ತಮ ಆಹಾರವು ಕೆಲಸ ಮಾಡುತ್ತದೆ' ಎಂದು ಎಂದು ಸಲಹೆ ಕೊಟ್ಟಿದ್ದಾರೆ.












Click it and Unblock the Notifications