ಟಗರು-2 ಫಿಕ್ಸ್, ಡಾಲಿ ಧನಂಜಯ್ ಜೊತೆಗೆ ಶಿವಣ್ಣ ಫೈಟಿಂಗ್‌ಗೆ ಅಖಾಡ ಸಿದ್ಧ... Tagaru Movie
ಟಗರು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಸಿನಿಮಾ ರಂಗದಲ್ಲಿ ಟಗರು ಎಬ್ಬಿಸಿದ್ದ ಹವಾ ಇಂದಿಗೆ ಕೂಡ ಯಾವುದೇ ಸಿನಿಮಾ ಬೀಟ್ ಮಾಡಲು ಆಗುತ್ತಿಲ್ಲ. ಯಾಕಂದ್ರೆ ಅಷ್ಟೊಂದು ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು ಟಗರು ಸಿನಿಮಾ. 2018 ಫೆಬ್ರವರಿ ತಿಂಗಳಲ್ಲಿ ರಿಲೀಸ್ ಆಗಿದ್ದ ಟಗರು ಸಿನಿಮಾ ಬಾಕ್ಸ್ ಆಫಿಸ್ ಪುಡಿ ಪುಡಿ ಮಾಡಿತ್ತು. ಹೀಗೆ ಸುಮಾರು 7 ವರ್ಷಗಳ ನಂತರ ಮತ್ತೊಮ್ಮೆ ಕನ್ನಡ ಸಿನಿಮಾ ರಂಗದಲ್ಲಿ, ಎಲ್ಲವನ್ನೂ ಧೂಳ್ ಧೂಳ್ ಮಾಡಲು ಟಗರು-2 ಎಂಟ್ರಿ ಕೊಡುತ್ತಿದೆ!
ಹೌದು, ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಕಂಡಿದ್ದ ಶಿವರಾಜ್‌ಕುಮಾರ್ ಅಭಿನಯದ 'ಟಗರು' ಸಿನಿಮಾದ ಮುಂದಿನ ಭಾಗ ಕೂಡ ಬರಬೇಕು ಅನ್ನೋ ಡಿಮ್ಯಾಂಡ್ ಜಾಸ್ತಿ ಆಗಿತ್ತು. ಕಳೆದ 7 ವರ್ಷದಿಂದ ಕೂಡ ಟಗರು-2 ರಿಲೀಸ್ ಆಗಬೇಕು ಅಂತಾ ಜನ ಒತ್ತಾಯ ಮಾಡುತ್ತಿದ್ದರು. ಅದರಲ್ಲೂ ಹ್ಯಾಟ್ರಿಕ್ ಹೀರೋ ನಟ ಶಿವಣ್ಣ ಅವರ ಅಭಿಮಾನಿಗಳ ಒತ್ತಾಯ ಹೆಚ್ಚಾಗಿತ್ತು, ಇಂತಹ ಸಮಯದಲ್ಲೇ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಸಿಗುವುದು ಗ್ಯಾರಂಟಿ ಆಗಿದೆ!

ಟಗರು-2 ಯಾವಾಗ ಎಂಟ್ರಿ ಆಗುತ್ತೆ?
ಕನ್ನಡ ಸಿನಿಮಾ ಪ್ರೇಮಿಗಳಿಗೆ ನಟ ಶಿವಣ್ಣ ಮಾಡುವ ಸಿನಿಮಾಗಳು ಸಿಕ್ಕಾಪಟ್ಟೆ ಇಷ್ಟವಾಗುತ್ತವೆ. ಹೀಗೆಲ್ಲಾ ಇದ್ದಾಗ ಸಖತ್ ಮಾಸ್ ಸಿನಿಮಾಗಳನ್ನ ಮಾಡಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಕನ್ನಡಿಗರ ಹೃದಯ ಗೆಲ್ಲುತ್ತಾರೆ. ಅದೇ ರೀತಿ ಇದೀಗ 2018ರ ಸಮಯದಲ್ಲಿ ರಿಲೀಸ್ ಆಗಿದ್ದ ಬ್ಲಾಕ್ ಬಸ್ಟರ್ ಹಿಟ್, ಟಗರು ಸಿನಿಮಾದ ಮುಂದುವರಿದ ಭಾಗ ಅನೌನ್ಸ್ ಆಗಿದೆ. ನಾಳೆ ಅಂದ್ರೆ ಜುಲೈ 12ಕ್ಕೆ ಈ ಕುರಿತು ಭಾರಿ ದೊಡ್ಡ ಅಧಿಕೃತ ಸುದ್ದಿ ಹೊರ ಬೀಳುವುದು ಕೂಡ ಗ್ಯಾರಂಟಿ ಆಗಿದೆ.












Click it and Unblock the Notifications