Sunny Mahipal: ದರ್ಶನ್ ದಾರಿ ಹಿಡಿದ ಕಿರುತೆರೆ ನಟ ಸನ್ನಿ ಮಹಿಪಾಲ್!
ಬೆಂಗಳೂರು ಜುಲೈ 23: ಇತ್ತೀಚೆಗೆ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಅವರದ್ದೇ ಸುದ್ದಿ. ದರ್ಶನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸುದ್ದಿ ಅರಗಿಸಿಕೊಳ್ಳಲು ಯಾರಿಗೂ ಕೂಡ ಸಾಧ್ಯವೇ ಆಗುತ್ತಿಲ್ಲ. ಹೀಗಿರುವಾಗ ಕನ್ನಡದ ಕಿರುತೆರೆ ನಟರೊಬ್ಬರು ದರ್ಶನ್ ಅವರ ದಾರಿ ಹಿಡಿದಂತೆ ಕಾಣಿಸುತ್ತಿದೆ.
'ಹಿರಿ ಅಕ್ಕನ ಚಾಳಿ ಮನೆ ಮಂದಿಗೆಲ್ಲ' ಅನ್ನೋ ರೀತಿ ಕನ್ನಡದ ಕಿರುತೆರೆ ನಟ ಸನ್ನಿ ಮಹಿಪಾಲ್ ಅವರು ಪತ್ನಿ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕನ್ನಡದ ಧಾರವಾಹಿಯಲ್ಲಿ ನಟಿಸುತ್ತಿದ್ದ ಮಹಿಪಾಲ್ ಮದುವೆಯಾಗಿದ್ದರೂ ಇನ್ನೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಸನ್ನಿ ಮಹಿಪಾಲ್ ಯಾರು?
'ನೇತ್ರಾವತಿ' ಹೆಸರಿನ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್, ಈಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಶುರುವಾಗಿದ್ದ ಸ್ನೇಹ ಪ್ರೇಮಕ್ಕೆ ತಿರುಗಿ ಕೆಲವೇ ತಿಂಗಳಲ್ಲಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಅಲ್ಲದೆ ಯುವತಿಗೆ ಮಹಿಪಾಲ್ ತಾವು ಮದುವೆಯಾಗೋದಾಗಿ ನಂಬಿಸಿದ್ದಾರೆ. ಇಬ್ಬರೂ ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಾರೆ. ಸದ್ಯ ಆ ಮಹಿಳೆ ಎರಡು ತಿಂಗಳ ಗರ್ಭಿಣಿ.
ಹೀಗಿದ್ದರೂ ಮಹಿಪಾಲ್ ಬೇರೆ ಆಟವೇ ಆಡಿದ್ದಾರೆ. ಅಗ್ನಿಸಾಕ್ಷಿಯಾಗಿ ಕೈ ಹಿಡಿಯದೇ ಹೋದರೂ ಒಬ್ಬ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಹೊಂದಿ, ಆಕೆಯನ್ನು ಗರ್ಭಿಣಿ ಮಾಡಿ, ಮನೆಯವರ ಒಪ್ಪಿಗೆ ಪಡೆದುಕೊಂಡು ಬರುವುದಾಗಿ ಹೇಳಿ ಪತ್ನಿಯಿಂದ ದೂರ ಉಳಿದಿದ್ದಾರೆ. ಹೀಗೆ ಕುಂಟು ನೆಪ ಮಾಡಿಕೊಂಡು ಪತ್ನಿಯಿಂದ ದೂರವಿದ್ದ ಮಹಹಿಪಾಲ್ ಮತ್ತೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಮೊದಲ ಪತ್ನಿಗೆ ಮಹಿಪಾಲ್ ಮನಬಂದಂತೆ ಥಳಿಸಿದ್ದಾರೆ. ಆಕೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಟಯ ಮೂಲಕ ಧಾರವಾಹಿ, ಸಿನಿಮಾ ನೋಡುವ ಪ್ರೇಕ್ಷಕರಿಗೆ ಮಾದರಿಯಾಗಬೇಕಿದ್ದ ಇವರೇ ಈ ದಾರಿ ಹಿಡಿದು ವೈಯಕ್ತಿಕ ಜೀವನದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ದರ್ಶನ್ ದಾರಿ ಹಿಡಿದ ಕಿರುತೆರೆ ನಟ
ಹೌದು... ನಟ ದರ್ಶನ್ ತೂಗುದೀಪ್ ಸಿನಿಮಾದಲ್ಲಿ ಹೀರೋ... ಆದರೆ ಈಗ ಆತ ನೋಡುಗರ ದೃಷ್ಟಿಯಲ್ಲಿ ಕೆಟ್ಟವರಾಗಿ ಹೋಗಿದ್ದಾರೆ. ದುಡುಕಿ ಮಾಡಿದ ತಪ್ಪಿಗೆ ಒಂದು ಜೀವವೇ ಬಲಿಯಾಗಿದೆ. ಸರಳವಾಗಿ ಬಗೆಹರಿಸಿಕೊಳ್ಳಬಹುದಾಗಿದ್ದ ಸಮಸ್ಯೆಯನ್ನು ಪ್ರಾಣ ತೆಗೆಯುವ ಮೂಲಕ ನೋಡುಗರ ದೃಷ್ಟಿಯಲ್ಲಿ ದರ್ಶನ್ ಭಾರವಾಗಿ ಹೋಗಿದ್ದಾರೆ.
ನಿಯಂತ್ರಿಸಲಾಗದ ಕೋಪಕ್ಕೆ ಬುದ್ಧಿ ಕೊಟ್ಟು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಡದ ಊಟ ಮಾಡುತ್ತಾ ಸೊರಗಿ ಹೋಗಿದ್ದಾರೆ. ಈಗ ತಾವು ಮಾಡಿದ ತಪ್ಪಿನ ಅರಿವಾದರೂ ದರ್ಶನ್ ಹೊರಬರುವುದು ಅಷ್ಟು ಸುಲಭವಿಲ್ಲ. ದರ್ಶನ್ ಕಾನೂನು ಕುಣಿಕೆ ಬಲವಾಗುತ್ತಲೇ ಇದೆ. ಹೀಗೆ ದರ್ಶನ್ ಪ್ರಕರಣದಿಂದ ಅರಿಯಬೇಕಾದ ವಿಷಯಗಳು ಸಾಕಷ್ಟಿವೆ.
ಕಾನೂನಿನ ಬಗ್ಗೆ ಮಾಸಿದ ಭಯ!
ಹೀಗಿರುವಾಗ ಸನ್ನಿ ಮಹಿಪಾಲ್ ಯಾಕಿಂತ ಕೆಲಸಕ್ಕೆ ಕೈ ಹಾಕಿದರು ಎನ್ನುವುದು ಪ್ರಶ್ನೆಯಾಗಿದೆ. ಇವರಿಗೆಲ್ಲಾ ಕಾನೂನಿನ ಮೇಲೆ ಭಯ ಇಲ್ವಾ? ಅಥವಾ ತಾವು ನಟರು ತಮ್ಮನ್ನು ಯಾರೂ ಕೂಡ ಪ್ರಶ್ನೆ ಮಾಡುವುದಿಲ್ಲ ಎನ್ನುವ ಅತಿಯಾದ ಆತ್ಮವಿಶ್ವಾಸನಾ? ಇಂಥಹ ಘಟನೆಗಳಿಂದ ಸಮಾಜಕ್ಕೆ ಯಾವ ಸಂದೇಶವನ್ನು ರವಾನಿಸಿದಂತಾಗುತ್ತದೆ ಎನ್ನುವ ಕಿಂಚಿಂತು ಪರಿಜ್ಞಾನ ಇವರಿಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟನೆ ಮಾಡುವ ತಾರೆಯರು ಸಣ್ಣ ಸಣ್ಣ ವಿಚಾರದಲ್ಲಿ ಎಡವುತ್ತಿರುವುದು ನಿಜಕ್ಕೂ ಬೇಸರ ತಂದಿದೆ. ಸಾಮಾನ್ಯವಾಗಿ ನಾಯಕ ನಟರನ್ನು ಅಭಿಮಾನಿಗಳು ಮಾದರಿಯಾಗಿ ಇಟ್ಟುಕೊಂಡಿರುತ್ತಾರೆ. ಅವರಂತೆ ನಡೆದುಕೊಳ್ಳುವವರು ಅನೇಕ ಜನರಿದ್ದಾರೆ. ಹೀಗಿರುವಾಗ ಸಿನಿಮಾ ತಾರೆಯರು ವೈಯಕ್ತಿಕ ಜೀವನದ ಮೂಲಕ ಇಂತಕ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿರುವುದಕ್ಕೆ ಕಡಿವಾಣ ಬೀಳಬೇಕಿದೆ. ತಪ್ಪು ಮಾಡಿದ್ದು ಸಾಬೀತಾದರೆ ಕಾನೂನು ಕ್ರಮ ತ್ವರಿತವಾಗಿ ಕೈಗೊಳ್ಳಬೇಕಿದೆ.












Click it and Unblock the Notifications