'ಅಮ್ಮ ಅನ್ನೋ ಅಂದ್ರೆ ಅಪ್ಪ ಅಂತಾನೆ' ಮೇಘನಾರಾಜ್ ಮಗುಗೆ ಅಪ್ಪ ಇಲ್ಲ ಅಂತ ಹೇಳೋದು ಹೇಗೆ? ಸುಂದರ್ ರಾಜ್ ಬೇಸರ
ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಸುಂದರ್ ರಾಜ್ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅವರ ಮಾತು ಅವರ ಅಭಿನಯದಷ್ಟೇ ಚಂದ. ಅವರಾಡುವ ಒಂದೊಂದು ಮಾತಿಗೂ ಸ್ಪಷ್ಟತೆ ಇರುತ್ತದೆ. ಇದೀಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಗಂಡು ಹೆಣ್ಣು ಯಾವ ರೀತಿ ಯೋಚನೆ ಮಾಡಬೇಕು? ಜೀವನದಲ್ಲಿ ದುಡ್ಡು ಎಷ್ಟು ಮುಖ್ಯ? ಎನ್ನುವುದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಮುಂದೊಂದು ದಿನ ಮಗಳು ಮೇಘನಾರಾಜ್ ಮಗವಿಗೆ ತಂದೆ ಇಲ್ಲ ಎಂದು ಹೇಳುವುದು ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು ಕಲಾಮಾಧ್ಯಮ ಯುಟ್ಯೂಬ್ ಚಾನಲ್ ಸಂದರ್ಶನವೊಂದರಲ್ಲಿ ಮಾತನಾಡಿದ ಸುಂದರ್‌ರಾಜ್ ಅವರು ದಾಂಪತ್ಯ ಜೀವನದಲ್ಲಿ ಪತಿ ಪತ್ನಿ ಹೇಗಿರಬೇಕು? ಬದುಕಲು ಹಣ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಿದ್ದಾರೆ. ಅವರಾಡಿದ ಮುತ್ತಿನಂತಹ ಮಾತುಗಳು ಪ್ರತಿಯೊಬ್ಬರಿಗೂ ಶಕ್ತಿಯಾಗಲಿದೆ. ಮದುವೆಯಾಗಿ ವಿಚ್ಚೇದನ ಪಡೆದುಕೊಳ್ಳುವುದಕ್ಕಿಂತ ಮದುವೆಯಾಗುವ ಮುನ್ನ ಏನು ಯೋಚನೆ ಮಾಡಬೇಕು ಹಾಗೂ ಮದುವೆ ನಂತರ ಹೇಗಿರಬೇಕು ಅನ್ನೋದನ್ನು ವಿವರಿಸಿದ್ದಾರೆ.

ಮದುವೆಯಾಗುವ ಮುನ್ನ.....
ಮದುವೆಯಾಗಬೇಕು ಅಂದುಕೊಳ್ಳುವವರು ಮಾನಸಿಕವಾಗಿ ಮೊದಲು ಸಿದ್ಧರಾಗಬೇಕು. ಏನೇ ಆಗಲಿ ನಾನು ಜೊತೆಗಿರುತ್ತೇನೆ ಎಂದು ಗಟ್ಟಿ ನಿರ್ಧಾರ ಮಾಡಿದ ಬಳಿಕವಷ್ಟೇ ಮದುವೆಯಾಗಬೇಕು. ಮದುವೆಯ ನಂತರ ಮನಸ್ತಾಪಗಳು ಸಹಜ. ಅವುಗಳು ಬಂದಾಗ ವಾದ ಮಾಡುವುದು, ನಾನು ಮೇಲು ನೀನು ಕೀಳು ಅನ್ನೋದನ್ನು ಬಿಟ್ಟು ಸೈಲೆಂಟ್ ಆಗಬೇಕು. ಇಬ್ಬರಲ್ಲಿ ಒಬ್ಬರು ಸೈಲೆಂಟ್ ಆದರೆ ಜೀವನ. ಇದನ್ನು ಯಾವತ್ತೂ ಕೂಡ ಸೋಲು ಎಂದು ಭಾವಿಸಬಾರದು. ಜಗಳ ಬಂದಾಗ ಒಬ್ಬರು ಸೈಲೆಂಟ್ ಆದಾಗ ಮಾತ್ರ ದಾಂಪತ್ಯ ಜೀವನ ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದಿದ್ದಾರೆ ಸುಂದರ್ ರಾಜ್.
ಜೀವನದಲ್ಲಿ ಹಣ ಎಷ್ಟು ಮುಖ್ಯ?
ಇನ್ನೂ ಜೀವನದಲ್ಲಿ ಹಣ ಎಷ್ಟು ಮುಖ್ಯ ಅನ್ನೋದಕ್ಕೆ ಸುಂದರ್ ರಾಜ್ ತುಂಬಾ ಅದ್ಬುತವಾಗಿ ವಿವರಿಸಿದ್ದಾರೆ. ದುಡ್ಡು, ಬಂಗಾರ, ಬೆಳ್ಳಿ ಸುತ್ತಲು ಹರಡಿ ನನ್ನ ದೇಹದಲ್ಲಿ ನಾನಾ ಕಾಯಿಲೆ ಇಟ್ಟುಕೊಂಡು ಕೂಳಿತುಕೊಳ್ಳುವುದು ನನಗೆ ಇಷ್ಟ ಆಗುವುದಿಲ್ಲ. ಅದರ ಬದಲಾಗಿ ನಮ್ಮ ಸ್ನೇಹಿತರು, ಆತ್ಮೀಯರು, ನಮ್ಮ ಕುಟುಂಬದವರೊಂದಿಗೆ ನಮಗೆ ಧೈರ್ಯ ನೀಡುವವರೊಮದಿಗೆ ಯಾವುದೇ ಒತ್ತಡ ಇಲ್ಲದೆ ಕುಳಿತು ಮಾತನಾಡುವುದು ತುಂಬಾ ನೆಮ್ಮದಿ ನೀಡುತ್ತದೆ. ಹೀಗಾಗಿ ಎಲ್ಲದಕ್ಕೂ ದುಡ್ಡು ಮುಖ್ಯ ಅಲ್ಲ. ದುಡ್ಡು ಪಡೆಯಲು ಹೋಗಿ ಸಣ್ಣ ಜಗಳ ಬಂದರೆ ಸಿಗರೇಟ್ ಹಚ್ಚಿಕೊಂಡು ಎಣ್ಣೆ ಹೊಡೆಯುತ್ತಾ ಕುಳಿತುಕೊಳ್ಳುವುದು ಜೀವನ ಅಲ್ಲ.

ಸಿಂಹಕ್ಕೆ ಆಸ್ತಿ ಇದಿಯಾ, ನವಿಲು ಬಳಿ ಏನಿದೆ, ಹುಲಿ ಬಳಿ ಏನಿದೆ? ಏನೂ ಇಲ್ಲ ಆದರೂ ಅದನ್ನು ನಾವು ತಿರುಗಿ ನೋಡುವಂತಹ ಸೌಂದರ್ಯ, ಶಕ್ತಿಯನ್ನು ಆ ದೇವರು ಕೊಟ್ಟಿದ್ದಾನೆ. ಪ್ರಕೃತಿ ಸೃಷ್ಟಿಯಲ್ಲಿ ಆ ದೇವರು ಪ್ರಾಣಿ ಪಕ್ಷಿಗಳಿಗೆ ಎಲ್ಲವನ್ನೂ ಕೊಟ್ಟಿದೆ. ಅವು ಬಟ್ಟೆ ಹಾಕದಿದ್ದರು ಸುಂದರವಾಗಿ ಕಾಣಿಸುತ್ತವೆ. ಆದರೆ ಒಬ್ಬ ಮನುಷ್ಯ ಹೇಗೆ ಜೀವನ ಮಾಡುತ್ತಾನೆ ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸಿ. ಜೀವನ ಅಂದರೆ ಏನು ಅನ್ನೋದು ಅರ್ಥವಾಗುತ್ತದೆ ಎಂದು ಸುಂದರ ರಾಜ್ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ಪ್ರಕೃತಿಯಲ್ಲಿ ಎಲ್ಲವೂ ಇದೆ...
ನಾವು ಬಟ್ಟೆಗಾಗಿ ಬಡಿದಾಡುತ್ತೇವೆ. ಹಣಕ್ಕಾಗಿ ಹೊಡೆದಾಡುತ್ತೇವೆ. ಆದರೆ ಪ್ರಾಣಿ ಪಕ್ಷಿಯಂತೆ ನಮಗೆ ಆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಆದರೂ ಕೂಡ ನಮಗೆ ದುರಾಸೆ. ದುಡ್ಡು ಬದುಕಲು ಎಷ್ಟು ಬೇಕು ಅಷ್ಟಕ್ಕೆ ಮಾತ್ರ ತಲೆ ಕೆಡಿಸಿಕೊಳ್ಳಬೇಕು. ಆರೋಗ್ಯ ಹಾಳಾಗುವಷ್ಟು ಹಣದ ಹಿಂದೆ ಬೀಳುವುದು ಬೇಡ ಎಂದು ಸುಂದರ್ ರಾಜ್ ಸುಂದರವಾದ ಮಾತನ್ನು ಹೇಳಿದ್ದಾರೆ.

ಕಬಿನಿಯಲ್ಲಿ ಆನೆಯೊಂದು ಪ್ರಕೃತಿ ಜೊತೆಗೆ ಓಡಾಡಿಕೊಂಡು ಇತ್ತು. ಅದಕ್ಕೆ ಊಟ ಹಾಕೋರು ಯಾರು? ನೀರು ಕುಡಿಸುವವರು ಯಾರು? ಅದು ನೀರು ಕುಡಿಯುತ್ತೆ ಹೋಗುತ್ತೆ ಆಹಾರ ತಿನ್ನುತ್ತೆ ಆರಾಮಾಗಿ ಇರುತ್ತೆ. ನಾವು ಬೆಳಗ್ಗೆ ಆದರೆ ಆ ಗಾರ್ಬೇಜ್ ವಾಸನೆ, ಗಟರ್ ಬಳಿ ಕಸ ಹಾಕಿದ್ರು ಅಂತ ಹೊಡೆದಾಡುತ್ತೇವೆ. ನಮಗೆ ಬೆಳಗ್ಗೆ ಶುರುವಾಗುವುದೇ ಜಗಳಗಳಿಂದ, ವಾಹನಗಳ ಕೆಟ್ಟ ಹೊಗೆಯಿಂದ. ಇದರಿಂದ ಮನುಷ್ಯ ಮನಶಾಂತಿಯಿಂದ ಬದುಕುವುದು ಹೇಗೆ? ಈ ಸೂಕ್ಷ್ಮತೆ ಅರ್ಥವಾದರೆ ನಾವು ಹೇಗೆ ಬದುಕಬೇಕು ಅನ್ನೋದು ಅರ್ಥವಾಗುತ್ತದೆ ಎಂದರು.
ಮೇಘನಾ ತುಂಬಾ ಸ್ಟ್ರಾಂಗ್
ಇನ್ನೂ ಮೇಘನಾ ರಾಜ್ ಬಗ್ಗೆ ಮಾತನಾಡಿದ ಸುಂದರ್ ರಾಜ್ ಮೇಘನಾ ತುಂಬಾ ಸ್ಟ್ರಾಂಗ್ ಎಂದಿದ್ದಾರೆ. ಚಿರಂಜೀವಿ ಸರ್ಜಾ ಅಗಲಿದಾಗ ಮೇಘನಾ ಗರ್ಭಿಣಿ. ಆಗ ಅವರಿಗಾದ ನೋವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮೇಘನಾಗೆ ಹೇಗೆ ಧೈರ್ಯ ಹೇಳಬೇಕು ಗೊತ್ತಾಗಲಿಲ್ಲ. ಆದರೂ ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡು ಮೇಘನಾ ಜೊತೆ ನಿಂತುಕೊಂಡ್ವಿ. ಮೇಘನಾ ರಾಜ್‌ಗೆ ಸಿಂಪತಿ ಅಂದರೆ ಆಗಲ್ಲ. ಅವಳಿಗೆ ಯಾರೂ ಕೂಡ ಅಯ್ಯೋ ಅನ್ಬಾರ್ದು. ಇದು ಅವಳಿಗೆ ಇಷ್ಟ ಆಗುವುದಿಲ್ಲ. ಮೇಘನಾ ತನ್ನ ಜೀವನ ತಾನೇ ನೋಡಿಕೊಳ್ಳುತ್ತಾಳೆ. ರಾಯನ್‌ಗೆ ಸ್ನಾನ, ಊಟ, ಶಾಲೆಗೆ ಕರೆದುಕೊಂಡು ಹೋಗುವುದು ಎಲ್ಲವೂ ಮೇಘನಾದ್ದೇ ಕೆಲಸ.
ಹೀಗಾಗಿ ಸಿನಿಮಾ ಆಫರ್ ಬರುತ್ತದೆ, ಆದರೆ ಮೇಘನಾ ಮಗು ಬಿಟ್ಟು ಹೋಗುವುದಿಲ್ಲ. ಇವತ್ತಿಗೆ ಮೇಘನಾ ಬೆನ್ನು ಹಿಂದೆ ನಿಂತಿರುವುದು ಅವಳ ತಾಯಿ ಪ್ರಮಿಳಾ. ಅವರಿಬ್ಬರು ರಾಯನ್‌ಗಾಗಿ ಮೀಸಲಾಗಿದ್ದಾರೆ ಎಂದರು.
ರಾಯನ್‌ಗೆ ತಂದೆ ಇಲ್ಲ ಅನ್ನೋದನ್ನು ಹೇಳುವುದು ಕಷ್ಟ..
ಮನುಷ್ಯ ಹೋಗ್ತಾ ಹೋಗ್ತಾ ಮಗುವಾಗುತ್ತಾನೆ. ಯಾಕೆಂದರೆ ಇಷ್ಟೆಲ್ಲಾ ಕಷ್ಟಗಳನ್ನು ನೆನಪು ಇಟ್ಟುಕೊಂಡರೆ ಹುಚ್ಚನಾಗ್ತಾನೆ. ಅದಕ್ಕೆ ಮರಿವಿನ ಶಕ್ತಿ ಕೊಟ್ಟಿರೋದು ದೇವರು. ನಾವು ಹಳೆಯದನ್ನು ಮರೆತು ಮುಂದೆ ಹೋಗಬೇಕು. ಈಗ ರಾಯನ್‌ಗೆ ನಾಲ್ಕುವರೆ ವರ್ಷ. ಮುಂದೆ ರಾಯನ್‌ಗೆ ತಂದೆ ಇಲ್ಲ ಎಂದು ಹೇಳುವುದು ನಮಗೆ ಕಷ್ಟ ಇದೆ. ಯಾಕೆಂದರೆ ರಾಯನ್‌ಗೆ ತಾಯಿ, ತಾತ, ಅಜ್ಜಿ ಎಲ್ಲರೂ ಇದ್ದಾರೆ. ಆದರೆ ಅವನ ಸ್ನೇಹಿತರೊಂದಿಗೆ ಹೋದಾಗ ಅವನಿಗೆ ಅಪ್ಪ ಇಲ್ಲ ಅನ್ನೋ ನೋವು ಆಗೋದು ನೆನಪಿಸಿಕೊಂಡರೆ ತುಂಬಾ ನೋವಾಗುತ್ತದೆ.
ದುಡ್ಡು, ಬಟ್ಟೆ, ಬಂಗಲೆ, ಕಾರು ಇಲ್ಲ ಅನ್ನೋದು ಕೊರಗಲ್ಲ ಆದರೆ ತಂದೆ ತಾಯಿಯಲ್ಲಿ ಯಾರೋ ಒಬ್ಬರು ಇಲ್ಲ ನನಗೆ ಅನ್ನೋದು ಕೊರಗಂತೆ. ತಂದೆ-ತಾಯಿ ಪ್ರೀತಿಗೆ ರೀಪ್ಲೇಸ್‌ಮೆಂಟ್ ಇಲ್ಲ ಎಂದಿದ್ದಾರೆ ಸುಂದರ್ ರಾಜ್. ರಾಯನ್‌ಗೆ ಅಮ್ಮ ಅನ್ನು ಅಂದರೆ ಅಪ್ಪ ಅಂತಾನೆ. ಆ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅವರು ದೊಡ್ಡವನಾದ ಮೇಲೆ ಅವನಿಗೆ ಅಪ್ಪ ಇಲ್ಲ ಅನ್ನೋ ಕೊರಗು ಕಾಡುತ್ತದೆ ಅನ್ನೋ ನೋವು ನಮಗಿದೆ ಎಂದಿದ್ದಾರೆ ಸುಂದರ್ ರಾಜ್.
ಒಟ್ಟಿನಲ್ಲಿ ಮೇಘನಾ ರಾಜ್ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಗಳ ನಡುವೆ ಸುಂದರ್ ರಾಜ್ ಅವರು ಹೇಳಿದ ಈ ಮಾತಿನಿಂದ ಮೇಘನಾ ರಾಜ್ ಮುಂದೊಂದು ದಿನ ಮದುವೆ ಆದರು ಅಚ್ಚರಿ ಇಲ್ಲ.












Click it and Unblock the Notifications