Bigg Boss Finale: ಉಗ್ರಂ ಮಂಜು ಮೇಲೆ ಸುದೀಪ್ ಸಿಟ್ಟಾಗಿದ್ಯಾಕೆ?
ಬಿಗ್ ಬಾಸ್ ಫಿನಾಲೆ ರಂಗೇರಿದ್ದು ವಿನ್ನರ್ ಯಾರು ಎನ್ನುವ ಕುತೂಹಲಕ್ಕೆ ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ. ಫಿನಾಲೆ ವಾರಕ್ಕೆ ಬಂದಿದ್ದ ಉಗ್ರಂ ಮಂಜು ಟಾಪ್ 5ನೇ ಸ್ಪರ್ಧಿಯಾಗಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ವೇದಿಕೆ ಮೇಲೆ ತುಂಬಾ ಒಳ್ಳೆಯವರಾಗಲು ಹೋದ ಉಗ್ರಂ ಮಂಜುಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು, ಬುದ್ದಿವಾದ ಹೇಳಿದರು.
ಫಿನಾಲೆ ವಾರದವರೆಗೆ ಮನೆಯಲ್ಲಿದ್ದು ಹೊರ ಬಂದು ಮಂಜುಗೆ ಹಲವು ಬಹುಮಾನಗಳು ಬಂದವು. ಅದರಲ್ಲಿ ವಾಕ್‌ಮೇಟ್ ಫುಟ್‌ವೇರ್ ಕಡೆಯಿಂದ 2 ಲಕ್ಷ ರೂಪಾಯಿ ಬಹುಮಾನ ಬಂದಿತು. ಅದನ್ನು ಪಡೆದ ಉಗ್ರಂ ಮಂಜು, ಅಲ್ಲೇ ಇದ್ದ ತಮ್ಮ ತಂದೆಗೆ ಇದನ್ನು ವೃದ್ಧಾಶ್ರಮಕ್ಕೆ ಕೊಡಿ ಎಂದು ಹೇಳಿದರು. ಬಳಿಕ ಇಕೋ ಪ್ಲಾನೆಟ್ ವತಿಯಿಂದ ಮಂಜುಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು. ಇದನ್ನು ಯಾರಿಗೆ ಕೊಡ್ತೀರಿ ಎಂದು ಸುದೀಪ್ ಕೇಳಿದರು, ಅದಕ್ಕೆ ಉತ್ತರ ಕೊಟ್ಟ ಉಗ್ರಂ ಮಂಜು, ಊರಿನಲ್ಲಿ ಕಷ್ಟದಲ್ಲಿರುವ ರೈತರಿಗೆ ಕೊಡಿ ಎಂದರು.

ಉಗ್ರಂ ಮಂಜು ಮಾತಿಗೆ ಕಿಚ್ಚ ಸುದೀಪ್ ಅಲ್ಲೇ ಸಿಟ್ಟಾದರು. ಅಪ್ಪ ಅಂದಾಗ ಎದ್ದು ನಿಂತರಲ್ಲ ಅವರು ಕೂಡ ರೈತರೇ, ಈ ಹಣವನ್ನು ನೀವೇ ಇಟ್ಟುಕೊಳ್ಳಿ ಎಂದು ಮಂಜು ತಂದೆಗೆ ಹೇಳಿದರು. ದಾನ ಮಾಡಬೇಕು, ಒಳ್ಳೆತನ ಬೇಕು ದಡ್ಡತನ ಬೇಡ ಎಂದು ಉಗ್ರಂ ಮಂಜುಗೆ ಕಿವಿ ಹಿಂಡಿದರು.
2 ಲಕ್ಷ ರೂಪಾಯಿ ಕೊಡ್ತೀನಿ ಅಂದ್ರಲ್ಲ ಅದನ್ನ ನಾನೇ ಕೊಡ್ತೇನೆ. ನಿಮ್ಮ ಪರಿಶ್ರಮಕ್ಕೆ ಒಂದು ಸಂಸ್ಥೆ ಗೌರವ ಪೂರ್ವಕವಾಗಿ ನಿಮಗೆ ಕೊಟ್ಟಾಗ ಅದನ್ನು ನೀವೆ ಇಟ್ಟುಕೊಳ್ಳಬೇಕು. ಈ ವೇದಿಕೆ ಮೇಲೆ ನೀವು ಸಂಪಾದನೆ ಮಾಡಿದ್ದೀರಾ ಅದನ್ನು ಇಟ್ಟುಕೊಳ್ಳಿ ಎಂದು ಹೇಳಿದರು. ಬಳಿಕ ಸಂಗೀತ ಮೊಬೈಲ್ಸ್ ಕಡೆಯಿಂದ ಉಗ್ರಂ ಮಂಜುಗೆ 50 ಸಾವಿರ ರೂಪಾಯಿಯ ಗಿಫ್ಟ್ ವೋಚರ್ ಸಿಕ್ಕಿದೆ.
ಉಗ್ರಂ ಮಂಜುಗೆ ಸಿಕ್ಕ ಹಣ ಎಷ್ಟು?
ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕೆ 10 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗಿದೆ. ಉಳಿದಂತೆ ಅವರಿಗೆ 3.5 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಬಿಗ್ ಬಾಸ್ ಅನ್ನು ನನ್ನ ಜೀವನದಲ್ಲಿ ಎಂದೂ ಮರೆಯಲ್ಲ ಎಂದು ಉಗ್ರಂ ಮಂಜು ಹೇಳಿದ್ದಾರೆ.












Click it and Unblock the Notifications