ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು 20 ನಿಮಿಷಕ್ಕೆ ಓಡಿ ಬಂದು ಗಾಯತ್ರಿ ಮಂತ್ರ ಪಠಿಸಿದ ಗಾಯಕಿ ಸುಚಿತ್ರಾ

ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು 20 ನಿಮಿಷಕ್ಕೆ ಓಡಿ ಬಂದೆ ಅಂತ ನಟಿ ಹಾಗೂ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ.

ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಮುಜುಗರಕ್ಕೀಡಾಗಿದ್ದರ ಬಗ್ಗೆ ಗಾಯಕಿ ಸುಚಿತ್ರಾ ಎಕ್ಸ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಬಾಡಿ ಪಾಸಿಟಿವಿಟಿಯಿಂದ ಬರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಸುಚಿತ್ರಾ ಭಾಗವಹಿಸಿದ್ದರಂತೆ. ಭಾಗಿಯಾಗಿರುವಾಗ ತಲೆ ಕೆಡುವಷ್ಟು ಓಪನ್ ಆಗಿರಬೇಡಿ ಎಂಬ ಮಾತು ನೆನಪಾಯ್ತು ಹೀಗಾಗಿ ಅಲ್ಲಿಂದ ಬಂದು ಬಿಟ್ಟೆ. ಮನೆಗೆ ಬಂದು ಸ್ನಾನ ಮಾಡಿ ವಿಶ್ರಾಂತಿ ಬಳಿಕ ಗಾಯತ್ನಿ ಮಂತ್ರಿ ಪಠಿಸಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

suchitra krishnamoorthi reveals she attended a nude party in berlin

ಬರ್ಲಿನ್ ಇವೆಲ್ಲಾ ಮಾಮೂಲು ಎಂದಿರುವ ಸುಚಿತ್ರಾ ಅವರು ಆ ಅನುಭವವನ್ನು ಹೊಂದುವ ಆಲೋಚನೆಯೊಂದಿಗೆ ಹೋಗಿದ್ದೆ. ಸುಚಿತ್ರಾ ತಾನು ಹೃದಯದಲ್ಲಿ ತುಂಬಾ ದೇಸಿ ಆಗಿದ್ದು ತಾನು ಯಾರ ಬಿ*** ಮತ್ತು ಬಿ****** ಗಳನ್ನು ನೋಡಲು ಬಯಸದೆ ಅಲ್ಲಿಂದ ಓಡಿ ಬಂದಿದ್ದಾಗಿ ಹೇಳಿದ್ದಾರೆ.

ವಿದೇಶದಲ್ಲಿ ಕೆಲವೊಂದು ಪಾರ್ಟಿಗಳು ಮುಜುಗರಕ್ಕೀಡು ಮಾಡುತ್ತವೆ. ಬರ್ಲಿನ್‌ನಲ್ಲಿ ಇದು ತುಂಬಾ ಅಂದರೆ ತುಂಬಾ ಸಾಮಾನ್ಯ ವಿಷಯ. ಆದರೆ ಭಾರತೀಯರಿಗೆ ಇದರಲ್ಲಿ ಭಾಗಿಯಾಗುವುದು ತುಂಬಾ ಮುಜುಗರದ ವಿಷಯ. ದೇಹದ ಕುರಿತು ಪಾಸಿಟಿವಿಟಿ ಬೆಳೆಸಿಕೊಳ್ಳಲು ಉತ್ತೇಜನ ನೀಡುವುದು ಇದರ ಉದ್ದೇಶ.

suchitra krishnamoorthi reveals she attended a nude party in berlin

ಈ ಬಗ್ಗೆ ಗಾಯಕಿ ಕೇಳಿದಾಗ, ನೋಡಿದಾಗ, ಜೀವನದಲ್ಲಿ ಒಂದು ಅನುಭವ ಆಗಲಿ ಎಂದುಕೊಂಡು ಸ್ನೇಹಿತರೊಬ್ಬರ ಸ್ನೇಹಿತರಿಗೆ ಸೇರಿದ ಬಾರ್‌ವೊಂದರಲ್ಲಿ ಈ ಪಾರ್ಟಿಯಲ್ಲಿ ಪಾಲ್ಗೊಂಡೆ. ನಾನು ಎಲ್ಲಾ ಅತಿಥಿಗಳ ಪಟ್ಟಿಯಲ್ಲಿ ಒಬ್ಬಳಾಗಿದ್ದೆ. ಅಲ್ಲಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಾನು ತುಂಬಾ ದೇಸಿ ಹುಡುಗಿ, ನನಗೆ ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ಆಗಲಿಲ್ಲ ಎಂದು ಸುಚಿತ್ರಾ ಕೃಷ್ಣಮೂರ್ತಿ ಹೇಳಿದ್ದಾರೆ.

ಮೋಜು ಮಸ್ತಿ ಇರಬೇಕು. ಆದರೆ ಈ ರೀತಿ ಪಾರ್ಟಿಯಲ್ಲಿ ನನಗೆ ಇರಲು ಆಗಲಿಲ್ಲ. ಅಲ್ಲಿನ ಪರಿಸರಕ್ಕೆ ಅದು ಉತ್ತಮವಾಗಿರುತ್ತದೆ. ಇದು ಭಾರತೀಯರಾದ ನಮಗೆ ಇದನ್ನು ನೋಡುವುದು ಕಷ್ಟ. ಅಲ್ಲಿ ಇದು ಸಾಮಾನ್ಯ ವಿಚಾರ ಆದರೆ ಇದು ನನಗೆ ಅಸಮಾನ್ಯ ಎನಿಸಿತು. ರಾತ್ರಿಯಿಂದ ಬೆಳ್ಳೆವರೆಗೂ ಈ ಪಾರ್ಟಿಯಲ್ಲಿ ಜನ ಬೆತ್ತಲೆಯಾಗೇ ಇರುತ್ತಾರೆ. ಆದರೆ ಇಲ್ಲಿ ಉಳಿಯುವುದು ತುಂಬಾ ಕಷ್ಟವಾಯಿತು. ಹೀಗಾಗಿ ನಾನು 20 ನಿಮಿಷಕ್ಕೆ ವಾಪಸ್ ಬಂದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+