Majaa Talkies: "ಮಜಾ ಟಾಕೀಸ್‌" ದಿಢೀರ್‌ ನಿಲ್ಲಿಸಲು ಅಸಲಿ ಕಾರಣ ಬಿಚ್ಚಿಟ್ಟ ಸೃಜನ್‌ ಲೋಕೇಶ್‌

ಕಲರ್ಸ್‌ ವಾಹಿನಿಯಲ್ಲಿ ನಟ ಸೃಜನ್‌ ಲೋಕೇಶ್‌ ಅವರು ನಡೆಸಿಕೊಡುತ್ತಿದ್ದ "ಮಜಾ ಟಾಕೀಸ್‌" ಕಾಮಿಡಿ ಶೋ ರಾಜ್ಯಾದ್ಯಂತ ಜನಪ್ರಿಯತೆ ಪಡೆದಿತ್ತು. ಹೊಟ್ಟೆ ಹುಣ್ಣಾಗುವಂತೆ ಈ ಕಾರ್ಯಕ್ರಮದಲ್ಲಿ ಜನರನ್ನು ನಗಿಸುತ್ತಿದ್ದರು. ಸಾಲು ಸಾಲು ಸೆಲೆಬ್ರಿಟಿಗಳು ಈ ಕಾರ್ಯಕ್ರಮ ಬರುತ್ತಿದ್ದರಿಂದ ಮತ್ತಷ್ಟು ಹೈಪ್‌ ತೆಗೆದುಕೊಂಡಿತ್ತು. ಆದರೆ ಮಜಾ ಟಾಕೀಸ್‌ ಹೊಸ ಸೀಸನ್‌ಗೆ ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. ಹೀಗಾಗಿ ಹೊಸ ಸೀಸನ್‌ ದಿಢೀರ್‌ ನಿಂತು ಹೋಗಿತ್ತು. ಇದಕ್ಕೆ ಅಸಲಿ ಕಾರಣ ಏನು ಎಂದು ಸೃಜನ್‌ ಕೊನೆಗೂ ಮೌನಮುರಿದಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಸೃಜನ್‌ ಲೋಕೇಶ್‌ ಮಜಾ ಟಾಕೀಸ್‌ ಫ್ಲಾಪ್‌ ಆಗಿದ್ದೇಕೆ? ಎಂಬುದನ್ನು ರಿವೀಲ್‌ ಮಾಡಿದ್ದಾರೆ. 'ನನ್ನ ಪ್ರಕಾರ ವರ್ಷಕ್ಕೊಂದು ಸಿನಿಮಾ ಕೊಡೋದು, ವರ್ಷವಿಡೀ ಮಜಾ ಟಾಕೀಸ್‌ ಮಾಡೋದು ಎರಡೂ ಕಷ್ಟದ ಕೆಲಸ. ಮಜಾ ಟಾಕೀಸ್‌ ಬಿಸಿ ಬಿಸಿ ದೋಸೆ ಇದ್ದಂಗೆ. ಪ್ರತಿ ವಾರವೂ ಹೋಗಬೇಕಿತ್ತು. ಅದಕ್ಕೆ ತಯಾರಿ ಕೂಡ ಅಷ್ಟೇ ಇರುತ್ತೆ' ಎಂದಿದ್ದಾರೆ.

Srujan Lokesh Reveals Real Reason Why Majaa Talkies Stopped Suddenly

'ಮಜಾ ಟಾಕೀಸ್‌ ಶುರುವಾದಾಗ ಅವರಿಗೆ ನಾನು ಒಂದು ಷರತ್ತು ಹಾಕಿದೆ. ಇದನ್ನು ನಾನೇ ನಿರ್ದೇಶನ ಮಾಡಬೇಕು, ಬೇರೆಯವರು ನಿರ್ದೇಶನ ಮಾಡಿದ್ರೆ ಒಪ್ಪಲ್ಲ ಎಂದಿದ್ದೆ. ಯಾಕಂದ್ರೆ ಅಲ್ಲಿ ಏನು ಮಾಡ್ತೀನಿ ಅನ್ನೋದು ನನಗೆ ಗೊತ್ತು. ಹಾಗಾಗಿ ನನಗೆ ಬಿಟ್ಟರೆ ನಾನೇ ಮಾಡ್ತೀನಿ, ಬೇರೆಯವರು ಡೈರೆಕ್ಟ್‌ ಮಾಡೋದಾದ್ರೆ ಬೇಡ ಎಂದಿದ್ದೆ. ಅದಕ್ಕೆ ಅವರೂ ಒಪ್ಪಿದ್ರು' ಎಂದಿದ್ದಾರೆ.

'ಸಿನಿಮಾ ಕೂಡ ಹಾಗೆನೇ, ಇದು ನನ್ನ ಕಥೆ. ನನ್ನ ತಲೆಯಲ್ಲಿರೋದನ್ನ ಬೇರೆಯವರಿಗೆ ಕೊಟ್ಟಾಗ ಅದು ಹೇಗೆ ಬರುತ್ತೋ ಗೊತ್ತಿಲ್ಲ. ಹಾಗಾಗಿ ನಾನೇ ಇದರ ಜವಾಬ್ದಾರಿ ತಗೋಬೇಕು, ಗೆದ್ದರೂ ಸೋತರೂ ನಾನೇ ಹೊಣೆ ತೆಗೆದುಕೊಳ್ಳಬಹುದು. ಎರಡನ್ನೂ ನಾನೇ ತಗೋಬೇಕು ಅಂತ ಫಿಕ್ಸ್‌ ಆದೆ' ಎಂದು ಸೃಜನ್‌ ಹೇಳಿದ್ದಾರೆ.

'ಮಾಡಿದ್ದನ್ನೇ ಮಾಡಿದ್ರೆ ಜನ ಬೈತಾರೆ'

'ನಾವು ಏನೋ ಒಂದು ಉದ್ದೇಶದಿಂದ ಮಾಡ್ತೀವಿ. ಆದರೆ, ಮಾಡಿದ್ದನ್ನೇ ಮಾಡಿದ್ರೂ ಜನ ಬೈತಾರೆ. ಮಜಾ ಟಾಕೀಸ್‌ ಶುರುವಾಗಿ ಹತ್ತು ವರ್ಷ ಆಯ್ತು. ನನ್ನ ಮಗ ಹುಟ್ಟಿದ ದಿನವೇ ಮಜಾ ಟಾಕೀಸ್‌ಗೆ ಒಪ್ಪಿಗೆ ಸಿಕ್ಕಿದ್ದು. ಆದರೆ ಆಗಿನ ಕಾಮಿಡಿಗೂ ಈಗಿನ ಕಾಮಿಡಿಗೂ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ. ನಾವು ಪ್ರಯೋಗ ಮಾಡಿದ್ವಿ, ಜನರಿಗೆ ಅದು ಇಷ್ಟ ಆಗಲಿಲ್ಲ. ಈಗ ಜನರಿಗೆ ಏನು ಇಷ್ಟ ಆಗಿಲ್ಲ ಅನ್ನೋದು ಗೊತ್ತಾಯ್ತು. ಹಾಗಾಗಿ ಮುಂದೆ ಏನಾಯ್ತು ಅಂತ ತಿದ್ದಿಕೊಳ್ತೀವಿ ಪರವಾಗಿಲ್ಲ' ಎಂದು ಸೃಜನ್‌ ನೇರವಾಗಿ ಹೇಳಿದ್ದಾರೆ.

'ಸಚಿನ್‌ ತೆಂಡುಲ್ಕರ್‌ ಕೂಡ ಡಕೌಟ್‌ ಆಗಿದ್ದಾರೆ. ಹಾಗಂತ ಅವರು ಕೆಟ್ಟ ಕ್ರಿಕೆಟರ್‌ ಅಲ್ಲ. ನಾನು ನಟ ಆಗಬೇಕು ಅಂದುಕೊಂಡಿರಲಿಲ್ಲ, ಇಂದು ನಿರ್ದೇಶಕನಾಗಿದ್ದೀನಿ. ಈಗಿನ ಕಾಂಪಿಟೇಷನ್‌ನಲ್ಲಿ ನಟ ಆಗೋದು ಸುಲಭದ ಮಾತಲ್ಲ. ನಾನು ನನ್ನ ಮಗನಿಗೂ ಅಷ್ಟೇ ಒತ್ತಡ ಹಾಕಲ್ಲ, ಅವನಿಗೆ ಏನು ಇಷ್ಟವೋ ಅದೇ ಮಾಡಲಿ' ಎಂದಿದ್ದಾರೆ ಸೃಜನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+