Srujan Lokesh: ಸೃಜನ್ ಲೋಕೇಶ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದೇಕೆ..?
ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಅವರು ಏಕಾಏಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೃಜನ್ ಲೋಕೇಶ್ ಅವರಿಗೆ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ಮಾಪಕರಾದ ಸತ್ಯ ಹಾಗೂ ಪತ್ನಿ ನಿರ್ಮಲಾ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಧಾರಾವಾಹಿ ನಿರ್ಮಾಣಕ್ಕೆ ಪಡೆದುಕೊಂಡಿದ್ದ ಒಂದು ಕೋಟಿ ಸಾಲವನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ದಂಪತಿ ವಿರುದ್ಧ ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಮ್ಯಾನೇಜರ್ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ 'ಲಕ್ಷ್ಮೀ ನಿವಾಸ' ಎನ್ನುವ ಜನಪ್ರಿಯ ಧಾರಾವಾಹಿ ಪ್ರಸಾರ ಆಗುತ್ತಿದೆ. ಆದರೆ, ಸ್ಯಾಂಡಲ್‌ವುಡ್ ನಟ ಸತ್ಯ ಹಾಗೂ ಅವರ ಪತ್ನಿ ನಿರ್ಮಲಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದು, ಧಾರಾವಾಹಿ ನಿರ್ಮಾಣಕ್ಕೆ ಪಡೆದುಕೊಂಡಿದ್ದ ಒಂದು ಸಾಲವನ್ನು ಹಿಂತಿರುಗಿಸದ ಹಿನ್ನೆಲೆಯಲ್ಲಿ ದಂಪತಿಯ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಠಾಣೆಯಲ್ಲಿ ನಟ ಸೃಜನ್ ಲೋಕೇಶ್ ಒಡೆತನದ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯ ಆಗ್ನಿ ಯು ಸಾಗರ್ ಎಂಬುವವರು ದೂರನ್ನು ದಾಖಲಿಸಿದ್ದಾರೆ.

ಜೀ ಕನ್ನಡದಲ್ಲಿ 'ಲಕ್ಷ್ಮೀ ನಿವಾಸ' ಎನ್ನುವ ಜನಪ್ರಿಯ ಧಾರಾವಾಹಿ ಪ್ರಸಾರ ಆಗುತ್ತಿದೆ. ಆದರೆ, ಕೆಲವು ದಿನಗಳ ಹಿಂದಷ್ಟೇ ಈ ಸೀರಿಯಲ್ ಮರು ಪ್ರಸಾರ ಕಂಡಿತ್ತು. ಕನ್ನಡದ ಪ್ರಮುಖ ಮನರಂಜನಾ ವಾಹಿನಿಯಲ್ಲಿ ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯುವುದಿಲ್ಲ. ಆಗಲೇ ಏನೋ ಸರಿಯಿಲ್ಲ ಅನ್ನೋದು ಗೊತ್ತಾಗಿತ್ತು. ಲಕ್ಷ್ಮೀ ನಿವಾಸ ಸೀರಿಯಲ್ ನಿರ್ಮಾಣದ ಬಳಿಕ ನಷ್ಟ ಅನುಭವಿಸಿದ್ದ ದಂಪತಿ ಸೀರಿಯಲ್ ನಿಲ್ಲಿಸುವ ಅಲೋಚನೆಯಲ್ಲಿದ್ರಂತೆ. ಈ ವೇಳೆ ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಬಳಿ 1 ಕೋಟಿ ಸಾಲ ಪಡೆದಿದ್ದರು ಎನ್ನಲಾಗ್ತಿದೆ.
ಲಕ್ಷ್ಮಿ ನಿವಾಸ ಧಾರಾವಾಹಿ ಮರು ಪ್ರಸಾರ ಕಂಡಾಗಲೇ ನಿರ್ಮಾಪಕರಿಂದ ಏನೋ ತೊಂದರೆಯಾಗಿದೆ ಎನ್ನುವುದು ಗೊತ್ತಾಗಿತ್ತು. ಅರ್ಧಕ್ಕೆ ನಿಂತು ಹೋಗಿದ್ದ ಲಕ್ಷ್ಮಿನಿವಾಸ ಧಾರಾವಾಹಿಯನ್ನು ಮುಂದುವರಿಸಲು ಸೃಜನ್ ಲೋಕೇಶ್ 1 ಕೋಟಿ ಕೊಟ್ಟಿದ್ರಂತೆ. ಸಾಲವಾಗಿ ತೆಗೆದುಕೊಂಡ ಒಂದು ಕೋಟಿ ಹಣವನ್ನು ಮರುಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಲಕ್ಷ್ಮಿ ನಿವಾಸ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಮುಖ ಪಾತ್ರಧಾರಿಗಳಿಗೆ ಸಂಭಾವನೆ ನೀಡಿರಲಿಲ್ಲ. ಹೀಗಾಗಿ ಒಬ್ಬೊಬ್ಬರೇ ಈ ಧಾರಾವಾಹಿಯಿಂದ ಹಿಂದೆ ಸರಿದಿದ್ದರು. ಆರಂಭದಿಂದ ಇದ್ದವರು ಒಬ್ಬೊಬ್ಬರೇ ಸೀರಿಯಲ್ ಅನ್ನು ಬಿಟ್ಟು ಹೋಗಿದ್ದಕ್ಕೆ ಹಣ ಕಾಸಿನ ಸಮಸ್ಯೆಯೇ ಕಾರಣವೆಂದು ಹೇಳಾಗಿತ್ತು. ಈಗ ಇವರ ಮೇಲೆ ದೂರು ನೀಡಿದ ಬಳಿಕ ಅದೂ ಸಾಬೀತಾಗಿದೆ. ನಟ ಸತ್ಯ ಹಾಗೂ ಅವರ ಪತ್ನಿ ನಿರ್ಮಲಾ ಅವರ ವಿರುದ್ಧ ಹಣ ಪಡೆದು ಹಿಂತಿರುಗಿಸದೇ ವಂಚನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಸೃಜನ್ ಲೋಕೇಶ್ ಪ್ರೊಡಕ್ಷನ್ಸ್‌ನ ಜೆಪಿಎ ಹೋಲ್ಡರ್ ಆಗಿರುವ ಅಗ್ನಿ ಯು ಸಾಗರ್ ಎಂಬುವವರು ದೂರನ್ನು ದಾಖಲಿಸಿದ್ದಾರೆ.












Click it and Unblock the Notifications