Sridevi Byrappa: 'ಯುವರಾಜ್ ಯೂ* ಮಾಡಿ ಬಿಸಾಕಿದ': ಈ ಕಮೆಂಟ್‌ಗೆ ಶ್ರೀದೇವಿ ಕೊಟ್ಟ ಉತ್ತರವೇನು?
ಕನ್ನಡ ಚಿತ್ರರಂಗ ನಟ ಯುವರಾಜ್ ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿರುವುದು ಗೊತ್ತಿರುವ ವಿಚಾರ. ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಶ್ರೀದೇವಿ ಭೈರಪ್ಪ ಅಲ್ಲಿಯೇ ಅರೆಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ದೂರಾಗಿರುವ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಛೇದನ ಪಡೆಯುತ್ತಿರುವುದು ಕಳೆದ ಕೆಲವು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು.
ಪ್ರೀತಿಸಿ ಮದುವೆಯಾಗಿದ್ದ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ, ಮದುವೆಯಾದ 4 ವರ್ಷಕ್ಕೆ ದೂರಾಗಿದ್ದಾರೆ. ಸದ್ಯ ವಿಚ್ಛೇದನ ಅರ್ಜಿ ಕೋರ್ಟ್ ಅಂಗಳದಲ್ಲಿದ್ದು, ಇಬ್ಬರೂ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದಾರೆ. ವಿಚ್ಛೇದನ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಯುವ ಹಾಗೂ ಶ್ರೀದೇವಿ ಇಬ್ಬರ ಬಗ್ಗೆಯೂ ಅನೇಕ ಆರೋಪಗಳು ಕೇಳಿಬಂದಿದ್ದವು. ಕೆಲವರು ಎಲ್ಲಾ ವಿಚಾರಕ್ಕೂ ಇದೇ ವಿಚಾರವನ್ನು ಎಳೆದು ತರುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು.

ಸೋಶಿಯಲ್ ಮೀಡಿಯಾದಲ್ಲಿ ಯುವರಾಜ್ ಕುಮಾರ್ ಪೋಸ್ಟ್‌ಗೆ ಶ್ರೀದೇವಿ ಭೈರಪ್ಪ ಬಗ್ಗೆ, ಶ್ರೀದೇವಿ ಭೈರಪ್ಪ ಪೋಸ್ಟ್‌ಗೆ ಯುವರಾಜ್ ಕುಮಾರ್ ಬಗ್ಗೆ ಕಮೆಂಟ್ ಮೂಲಕ ಪ್ರಶ್ನಿಸುವುದು, ಅವಹೇಳನ ಮಾಡುವುದು, ಕೀಳುಮಟ್ಟದಲ್ಲಿ ಕಾಮೆಂಟ್ ಮಾಡುವುದು ಸಾಮಾನ್ಯವಾಗಿದೆ. ಇದೇ ರೀತಿ ಸಿಕ್ಕ ಸಿಕ್ಕ ಫೋಟೋಗೆ ಕೆಟ್ಟ ಕಮೆಂಟ್ ಹಾಕಿದ ವ್ಯಕ್ತಿಗೆ ಶ್ರೀದೇವಿ ಭೈರಪ್ಪ ಖಾರವಾಗಿ ತಿರುಗೇಟು ನೀಡಿದ್ದಾರೆ.
ಶ್ರೀದೇವಿ ಭೈರಪ್ಪ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಇತ್ತೀಚಿಗೆ ಪೋಸ್ಟ್ ಮಾಡಿದ ಫೋಟೋವೊಂದಕ್ಕೆ ನೆಟ್ಟಿಗನೊಬ್ಬ ಅವಹೇಳನಕಾರಿ ಪದ ಬಳಸಿ ಕೀಳುಮಟ್ಟದಲ್ಲಿ ಕಾಮೆಂಟ್ ಮಾಡಿದ್ದಾನೆ. 'ಯುವರಾಜ್ ಯೂ* ಮಾಡಿ ಬಿಸಾಕಿದ.. ಜೈ ದೊಡ್ಡ ಮನೆ' ಎಂದು ಕಮೆಂಟ್ ಮಾಡಿದ್ದಾನೆ.

ಈ ಕೆಟ್ಟ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಶ್ರೀದೇವಿ 'ನೀವು ಓಕೆ ಅಲ್ವಾ? ನಿಮ್ಮ ಮನೆಯಲ್ಲಿರುವ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ, ಅವರ ಕಾಳಜಿ ವಹಿಸಿ' ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ. ಈ ವ್ಯಕ್ತಿಯ ಕೆಟ್ಟ ಕಮೆಂಟ್‌ಗೆ ಶ್ರೀದೇವಿ ಪ್ರತಿಕ್ರಿಸಿರುವುದನ್ನು ನೋಡಿ ಅನೇಕು ಶ್ರೀದೇವಿ ಪರ ನಿಂತಿದ್ದು, ಜೈ ದೊಡ್ಡ ಮನೆ ಎನ್ನುತ್ತಾ ಕೀಳುಮಟ್ಟದಲ್ಲಿ ಕಾಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications