ಸೋನು ಶ್ರೀನಿವಾಸ್ ಗೌಡ ಭರ್ಜರಿ ಯುಗಾದಿ, ಜೈಲಿಂದ ಹೊರಬಂದು ಸೆಲೆಬ್ರೇಷನ್!
ಸೋನು ಶ್ರೀನಿವಾಸ್ ಗೌಡ ಬಿಗ್‌ಬಾಸ್ ಮನೆಗೆ ಹೋಗಿ ಬಂದ ನಂತರ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಹಲವು ವಿಚಾರಗಳಲ್ಲಿ ಸೋನು ಶ್ರೀನಿವಾಸ್ ಗೌಡ ಗಮನ ಸೆಳೆದಿದ್ದು, ಹಲವಾರು ವಿಚಾರದಲ್ಲಿ ಕಾಂಟ್ರವರ್ಸಿ ಕೂಡ ಮಾಡಿಕೊಂಡರು. ಹೀಗಿದ್ದಾಗ ಮಗು ಒಂದನ್ನ ಸೋನು ಶ್ರೀನಿವಾಸ್ ಗೌಡ ಅನಧಿಕೃತವಾಗಿ ದತ್ತು ತೆಗೆದುಕೊಂಡಿದ್ದಾರೆ ಅಂತಾ ಆರೋಪಿಸಿ ಜೈಲಿಗು ಕಳುಹಿಸಲಾಗಿತ್ತು. ಇದೀಗ ಜೈಲಿನಿಂದ ರಿಲೀಸ್ ಆದ ನಂತರ, ಸೋನು ಶ್ರೀನಿವಾಸ್ ಗೌಡ ಭರ್ಜರಿಯಾಗಿ ಯುಗಾದಿ ಹಬ್ಬ ಆಚರಿಸಿದ್ದಾರೆ.
ಈಗ ಸೋನು ಶ್ರೀನಿವಾಸ್ ಗೌಡ ಹಬ್ಬಕ್ಕೆ ಅಂತಾ ಸೀರೆಯಲ್ಲಿ ಮಿಂಚಿರುವ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಸ್ ಈಗ ವೈರಲ್ ಆಗಿ, ಸಿಕ್ಕಾಪಟ್ಟೆ ಕಮೆಂಟ್ಸ್ & ಲೈಕ್ಸ್ ಪಡೆಯುತ್ತಿವೆ. ಹಾಗೇ ಸೋನು ಶ್ರೀನಿವಾಸ್ ಗೌಡ ಕುರಿತಾಗಿ ನೆಗೆಟಿವ್ ಕಮೆಂಟ್ಸ್ ಜೊತೆಗೆ ಪಾಸಿಟಿವ್ ಕಮೆಂಟ್ಸ್ ಕೂಡ ಬೀಳುತ್ತಿವೆ. ಈ ಮೂಲಕವಾಗಿ ಸೋನು ಶ್ರೀನಿವಾಸ್ ಗೌಡ ಜೈಲಿನಿಂದ ಹೊರ ಬಂದ ನಂತರ ಮತ್ತಷ್ಟು ಫೇಮಸ್ ಆಗುತ್ತಿರುವ ರೀತಿ ಕಾಣಿಸುತ್ತಿದೆ ಅಂತಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಸೋನು ಜೈಲಿಗೆ ಹೋಗಿದ್ದು ಏಕೆ?
ಅಂದಹಾಗೆ ಸೋನು ಸ್ಟೋರಿಯಲ್ಲಿ ಟ್ವಿಸ್ಟ್ ಕೊಟ್ಟಿದ್ದೇ ಮಗು ದತ್ತು ತೆಗೆದುಕೊಂಡ ಕೇಸ್. ಸೋನು ಗೌಡ ಬರೀ ರೀಲ್ಸ್ ಮಾಡ್ಕೊಂಡು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ ಅನಿಸುತ್ತದೆ. ಆದರೆ ಈ ಮಧ್ಯೆ ತನ್ನದೆ ಯುಟ್ಯೂಬ್ ಚಾನೆಲ್ ತೆರೆದು ಅದ್ರಲ್ಲಿ ಪ್ರತಿನಿತ್ಯ ವ್ಲಾಗ್ಸ್ ಹಾಕುತ್ತಿದ್ದ ಸೋನು ಶ್ರೀನಿವಾಸ್ ಗೌಡ ಮಗು ದತ್ತು ತೆಗೆದುಕೊಂಡ ಬಗ್ಗೆ ಮಾತನಾಡಿದ್ದರು. ಹೀಗೆ ಹೆಣ್ಣು ಮಗು ಒಂದನ್ನ ದತ್ತು ಪಡೆದಿದ್ದೇನೆ ಅಂತಾ ಊರು ತುಂಬಾ ಹೇಳಿಕೊಂಡು ಬಂದು ಅದನ್ನೂ ವ್ಲಾಗ್ ಮಾಡಿ, ಸೋನು ತಾನೇ ಹಳ್ಳಕ್ಕೆ ಬಿದ್ದಂತೆ ಆಗಿತ್ತು. ಇದೇ ಕಾರಣಕ್ಕೆ ಅರೆಸ್ಟ್ ಆಗಿ ಜೈಲಿಗೆ ಕೂಡ ಸೇರಿದ್ದರು ಸೋನು ಶ್ರೀನಿವಾಸ್ ಗೌಡ. ಇದೀಗ ರಿಲೀಸ್ ಆಗಿ ಬಂದು ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.
ಪೊಲೀಸರಿಂದ ಭಾರಿ ವಿಚಾರಣೆ
ಹೀಗೆ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆದ ಸುದ್ದಿ ದೇಶಾದ್ಯಂತ ಸದ್ದು ಮಾಡ್ತು. ಬಾಲಕಿಯ ಊರಾದ ರಾಯಚೂರಿನ ಮಸ್ಕಿ ತಾಲೂಕು ಕಾಚಾಪುರ ಗ್ರಾಮದಿಂದ, ಸೋನು ಕರೆದುಕೊಂಡು ಬಂದಿದ್ರು ಎನ್ನಲಾಗಿತ್ತು. ಬಾಲಕಿ ದತ್ತು ಪಡೆಯುವಲ್ಲಿ, ಯಾವುದೇ ರೀತಿ ಕಾನೂನು ಪಾಲನೆ ಮಾಡಿರದ ಸೋನು ಗೌಡ ಪೊಲೀಸರ ಅತಿಥಿಯಾಗಿದ್ದೆರು. ಸ್ಥಳ ಮಹಜರ್ ಮಾಡೋಕೆ ಬಾಲಕಿ ಹುಟ್ಟೂರಿಗೂ ಸೋನು ಗೌಡನ ಕರೆದುಕೊಂಡು ಹೋಗಿ ಬಂದಿದ್ದರು ಪೊಲೀಸರು. ಆ ನಂತರ ಸೋನುಗೆ ಪರಪ್ಪನ ಅಗ್ರಹಾರ ದರ್ಶನ ಆಗಿತ್ತು, ಈಗ ರಿಲೀಸ್ ಆಗಿ ಮನೆ ಸೇರಿದ್ದು 'ಯುಗಾದಿ' ಹಬ್ಬವನ್ನೂ ಸಂಭ್ರಮದಿಂದ ಆಚರಿಸಿದ್ದಾರೆ ಸೋನು.

ಒಟ್ನಲ್ಲಿ ಕಾಂಟ್ರವರ್ಸಿ ಬಲೆಯಲ್ಲಿ ಸಿಲುಕಿ ಸದ್ದು ಮಾಡಿದ್ದ ರೀಲ್ಸ್ ರಾಣಿ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಈಗ ಏನೇ ಮಾಡಿದ್ರೂ ಸದ್ದು ಆಗುತ್ತಿದೆ. ಅದ್ರಲ್ಲೂ ರಾಷ್ಟ್ರೀಯ ಅಂದ್ರೆ ದೇಶ ಮಟ್ಟದಲ್ಲೂ ಮಾಧ್ಯಮಗಳು ಸೋನು ಶ್ರೀನಿವಾಸ್ ಗೌಡ ಸುದ್ದಿಯನ್ನ ಪ್ರಸಾರ ಮಾಡಿ ವಿಷಯ ತಿಳಿಸುತ್ತಿವೆ. ಈ ಮೂಲಕ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿ ಬಂದಿದ್ದರ ನಡುವೆ ಈಗ ಯುಗಾದಿ ಆಚರಣೆ ವಿಚಾರ ಕೂಡ ಸದ್ದು ಮಾಡುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ!
ಬಿಗ್‌ಬಾಸ್ ಸೋನು ಶ್ರೀನಿವಾಸ್ ಗೌಡ ಬಾಲಕಿ ದತ್ತು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಭಾರಿ ಚರ್ಚೆ ಶುರುವಾಗಿತ್ತು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಹೀಗಿದ್ದಾಗಲೇ ಜಾಮೀನು ಪಡೆದು ಈಗ ಹೊರಗೆ ಬಂದಿರುವ ಬಿಗ್‌ಬಾಸ್ ಸೋನು ಶ್ರೀನಿವಾಸ್ ಗೌಡ ಹಬ್ಬವನ್ನು ಭರ್ಜರಿಯಾಗಿಯೇ ಆಚರಿಸಿದ್ದಾರೆ. ಹೀಗಾಗಿ ಮುಂದೆ ಬಾಲಕಿ ದತ್ತು ಪ್ರಕರಣ ಎಲ್ಲಿಗೆ ಹೋಗಿ ಮುಟ್ಟಲಿದೆ? ಈ ಕೇಸ್‌ನಲ್ಲಿ ಸೋನು ಶ್ರೀನಿವಾಸ್ ಗೌಡಗೆ ರಿಲೀಫ್ ಸಿಗುತ್ತಾ? ಅಂತಾ ಕಾದು ನೋಡಬೇಕಿದೆ. ಅಲ್ಲಿಯವರೆಗೂ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗಳು ಗ್ಯಾರಂಟಿ ಅಂತಾರೆ, ನೆಟ್ಟಿಗರು.












Click it and Unblock the Notifications