Sonu Nigam Row: ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ಹಾಸ್ಯ ನಟ ದೊಡ್ಡಣ್ಣ "ಕುಳ್ಳಿ" ಹೇಳಿಕೆ, ಇಲ್ಲಿದೆ ವೈರಲ್ ವಿಡಿಯೋ!
Sonu Nigam Row: ದಶಕಗಳ ಕಾಲದಿಂದ ಕನ್ನಡ ಚಿತ್ರರಂಗದಲ್ಲಿರುವ ಹಾಸ್ಯ ನಟ ದೊಡ್ಡಣ್ಣ ಅವರು 500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖಳನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು ನಿಧಾನವಾಗಿ ಹಾಸ್ಯ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್ ಆಗಿದ್ದಾರೆ. ಇವರು ಮಾಡದೆ ಇರುವ ಹಾಸ್ಯ ಪಾತ್ರ ಇದೆ ಎನ್ನುವಂತಿಲ್ಲ... ಇವರು ಮಾಡದ ಪೋಷಕ ನಟನ ಪಾತ್ರವಿಲ್ಲ. ಕನ್ನಡಿಗರು ಹಾಗೂ ಕನ್ನಡ ಚಿತ್ರೋದ್ಯಮವು ಇವರನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ. ಆದರೆ, ಕನ್ನಡ ಹಾಗೂ ಕನ್ನಡಿಗರ ವಿಚಾರ ಬಂದಾಗ ಇರುವ ಕೊಟ್ಟಿರುವ ಒಂದು ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಣ್ಣ ಅವರೇ ಇದು ನಿಮ್ಮ ದೊಡ್ಡತನಕ್ಕೆ ತಕ್ಕುದ್ದಲ್ಲ ಅಂತ ಹೇಳುತ್ತಿದ್ದಾರೆ. ಇಷ್ಟಕ್ಕೂ ದೊಡ್ಡಣ್ಣ ಕನ್ನಡಿಗರ ಮುನಿಸಿಗೆ ಕಾರಣವಾಗಿದ್ದು ಯಾಕೆ ಎನ್ನುವ ಮಾಹಿತಿ ಇಲ್ಲಿದೆ.
ದೊಡ್ಡಣ್ಣ ಅವರು ವಿವಾದಗಳಿಂದ ದೂರು ಉಳಿದಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಹಿರಿಯರಂತೆ ಹಾಗೂ ಕನ್ನಡ ಚಿತ್ರರಸಿಕರಿಗೆ ಒಳ್ಳೆಯ ಹಾಸ್ಯದಿಂದಲೇ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ ದೊಡ್ಡಣ್ಣ ಅವರು ಗಾಯಕ ಸೋನು ನಿಗಮ್ ಬಗ್ಗೆ ಕೇಳಿರುವ ಪ್ರಶ್ನೆಗೆ ರಿಯಾಕ್ಟ್ ಮಾಡಿರುವ ರೀತಿ ಕನ್ನಡಿಗರಲ್ಲಿ ಬೇಸರ, ಕೋಪ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಗಾಯಕ ಸೋನು ನಿಗಮ್ ಅವರ ವಿವಾದದ ಬಗ್ಗೆ ಪತ್ರಕರ್ತೆಯ ಪ್ರಶ್ನೆಗೆ ಹಗುರವಾಗಿ ರಿಯಾಕ್ಟ್ ಮಾಡಿದ್ದಾರೆ ದೊಡ್ಡಣ್ಣ. ಹಾಸ್ಯ ನಟ ದೊಡ್ಡಣ ಅವರ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟಕ್ಕೂ ದೊಡ್ಡಣ್ಣ ಹೇಳಿದ್ದೇನು ಅಂತ ನೋಡೋಣ... ಸೋನಿ ನಿಗಮ್ ಅವರು ಕನ್ನಡಿಗರ ಬಗ್ಗೆ ಮಾತನಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ಪತ್ರಕರ್ತೆಯೊಬ್ಬರು "ಸೋನು ನಿಗಮ್ ಅವರು ಕ್ಷಮೆ ಕೇಳಬೇಕಿತ್ತು. ಕೇಳಲಿಲ್ಲ ಆದರೂ ಕನ್ನಡ.. ಕನ್ನಡ ಅಂತ ಎಲ್ಲೋದರೂ ಅಂದನ್ನೇ ಕೇಳಬೇಕಾ... ಕನ್ನಡಿಗರನ್ನ ಉಗ್ರರಿಗೆ ಹೋಲಿಕೆ ಮಾಡಿದ್ದಾರೆ" ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಪತ್ರಕರ್ತೆಯ ಈ ಪ್ರಶ್ನೆಗೆ ಉತ್ತರಿಸಿರುವ ದೊಡ್ಡಣ್ಣ ಅವರು, "ನೀನು ನನ್ನ ಕೇಳೋ ಪ್ರಶ್ನೆಯನ್ನ ಸೋನಿ ನಿಗಮ್ ಬಳಿನೇ ಈ ಕ್ಯಾಮೆರಾ ತೆಗೆದುಕೊಂಡು ಹೋಗಿ ಕೇಳಬಹುದಿತ್ತಲ್ಲವೇ ಕುಳ್ಳಿ... ನನ್ನನ್ನ ಲಾಕ್ ಮಾಡ್ತಿದ್ದೀಯಾ... ಹೋಗು ಸಾಕು" ಅಂತ ಅತ್ಯಂತ ಉಡಾಫೆಯಿಂದ ಉತ್ತರಿಸಿದ್ದಾರೆ.
ಯಾರಾದ್ರೂ ಏನಾದ್ರು ಅಂತಾರೆ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟೊರತರ ಹೇಳಿಕೆ ಕೊಟ್ಟು ಜಾರಿಕೊಳ್ಳುವುದು ತಮ್ಮ ಹಿರಿತನಕ್ಕೆ ಸರಿ ಹೊಂದುವುದಿಲ್ಲ ದೊಡ್ಡಣ್ಣ ಅವರೇ,
— Goudrusarkar - ಗೌಡ್ರುಸರ್ಕಾರ್ (@Gs_0107) May 6, 2025
ನಾಡು ನುಡಿ ವಿಷಯಕ್ಕೆ ಬಂದರೆ ಯಾವನೇ ಇದ್ರೂ ಅವನನ್ನು ಖಂಡಿಸಿ, ಅಣ್ಣಾವ್ರ ಹಾದಿಯಲ್ಲಿ ನಡೆಯಿರಿ.#bansonunigampic.twitter.com/zTM9tokVIu
ದೊಡ್ಡಣ್ಣ ಅವರ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. "ಯಾರಾದ್ರೂ ಏನಾದ್ರು ಅಂತಾರೆ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟೊರತರ ಹೇಳಿಕೆ ಕೊಟ್ಟು ಜಾರಿಕೊಳ್ಳುವುದು ತಮ್ಮ ಹಿರಿತನಕ್ಕೆ ಸರಿ ಹೊಂದುವುದಿಲ್ಲ ದೊಡ್ಡಣ್ಣ ಅವರೇ,
ನಾಡು ನುಡಿ ವಿಷಯಕ್ಕೆ ಬಂದರೆ ಯಾವನೇ ಇದ್ರೂ ಅವನನ್ನು ಖಂಡಿಸಿ, ಅಣ್ಣಾವ್ರ ಹಾದಿಯಲ್ಲಿ ನಡೆಯಿರಿ" ಅಂತ ಜನ ಹೇಳುತ್ತಿದ್ದಾರೆ.
ಕ್ಷಮಾಪಣೆ ಕೇಳಿದರೂ ನಿಲ್ಲದ ಆಕ್ರೋಶ: ಇನ್ನು ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಿದ ಮೇಲೆಯೂ ಅವರ ಮೇಲೆ ಕನ್ನಡಿಗರ ಆಕ್ರೋಶ ಕಡಿಮೆಯಾಗುತ್ತಿಲ್ಲ. ಕನ್ನಡಿಗರು ಯಾವುದೇ ಕಾರಣಕ್ಕೂ ಸೋನು ನಿಗಮ್ ಅವರನ್ನು ಕ್ಷಮಿಸಬಾರದು ಎಂದು ಹೇಳಿದ್ದಾರೆ.












Click it and Unblock the Notifications