Sonal Monteiro: ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ & ಹೀರೋಯಿನ್ ಸೋನಾಲ್ ಲವ್ ಸ್ಟೋರಿ!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೊಲೆ, ಹಿಂಸೆ, ಸಾವುಗಳ ನೋವಿನ ಸಮಯದಲ್ಲೇ ಈಗ ಖುಷಿ ಖುಷಿ ಸುದ್ದಿ ಒಂದು ಹಲ್‌ಚಲ್ ಎಬ್ಬಿಸಿದೆ. 'ಕಾಟೇರ' ನಿರ್ದೇಶಕ ತರುಣ್ ಸುಧೀರ್ & ಹೀರೋಯಿನ್ ಸೋನಾಲ್ ಮೊಂಟೇರಿಯೋ ಮದುವೆ ಡೇಟ್ ಫಿಕ್ಸ್ ಆಗಿ ಎಲ್ಲೆಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದೆ. ಹಾಗಿದ್ರೆ ಸೋನಾಲ್ ಅವರನ್ನ ಲವ್ ಮಾಡಿದ್ದು ಹೇಗೆ ತರುಣ್ ಸುಧೀರ್? ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.
ಸೋನಾಲ್ ಮೊಂಟೇರಿಯೋ ಅವರು ಕನ್ನಡ ಸಿನಿಮಾ ಅಭಿಮಾನಿಗಳು ಕಂಡ ಅತ್ಯದ್ಭುತ ನಟಿ. ಕೆಲವೇ ಸಿನಿಮಾಗಳಲ್ಲಿ ನಟನೆ ಮಾಡಿದ್ದರೂ ಕೋಟ್ಯಂತರ ಅಭಿಮಾನಿಗಳನ್ನು ನಟಿ ಸೋನಾಲ್ ಮೊಂಟೇರಿಯೋ ಸಂಪಾದಿಸಿದ್ದಾರೆ. ತರುಣ್ ನಿರ್ದೇಶಿಸಿದ್ದ 'ರಾಬರ್ಟ್' ಸಿನಿಮಾ ಸೋನಾಲ್ ಮೊಂಟೇರಿಯೋ ಅವರ ಸಿನಿಮಾ ಕರಿಯರ್‌ಗೆ ದೊಡ್ಡ ತಿರುವು ನೀಡಿತ್ತು. ಹೀಗೆ 2021ರಲ್ಲಿ ರಿಲೀಸ್ ಆಗಿದ್ದ 'ರಾಬರ್ಟ್' ಸಿನಿಮಾ ಬಳಿಕ ಸೋನಾಲ್ ಮೊಂಟೇರಿಯೋ ಅವರಿಗೆ ಹತ್ತಾರು ಸಿನಿಮಾ ಆಫರ್ ಹುಡುಕಿಕೊಂಡು ಬಂದವು. ರಾಬರ್ಟ್ ಸಿನಿಮಾದ ಅದ್ಭುತವಾದ ನಟನೆ ಸೋನಾಲ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು ಹಾಗಾದ್ರೆ ತರುಣ್ & ಸೋನಾಲ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಮುಂದೆ ಓದಿ.

ತರುಣ್ & ಸೋನಾಲ್ ಲವ್ ಸ್ಟೋರಿ...
ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದ ಚಿತ್ರ 'ರಾಬರ್ಟ್' ಭಾರಿ ದೊಡ್ಡ ಸದ್ದು ಮಾಡಿತ್ತು. ನೂರಾರು ಕೋಟಿ ರೂಪಾಯಿ ಗಳಿಸಿತ್ತು ಈ 'ರಾಬರ್ಟ್' ಸಿನಿಮಾ. ಈ ಸಿನಿಮಾದಲ್ಲಿ ಸೋನಾಲ್ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದರು. ಹೀಗೆ ನೋಡ ನೋಡುತ್ತಲೇ ಸೋನಾಲ್ ಮೊಂಟೇರಿಯೋ ಪ್ಯಾನ್ ಇಂಡಿಯಾ ಹೀರೋಯಿನ್ ಕೂಡ ಆದರು. ಹೀಗಿದ್ದಾಗಲೇ ಸೋನಾಲ್ & ತರುಣ್ ಲವ್ ಸ್ಟೋರಿ ಭಾರಿ ಸೌಂಡ್ ಮಾಡ್ತು. ರಾಬರ್ಟ್ ಶೂಟಿಂಗ್ ಸಮಯದಲ್ಲೇ ದರ್ಶನ್ ಅವರು ತರುಣ್ & ಸೋನಾಲ್ ಅವರ ಮದುವೆ ಬಗ್ಗೆ ತಮಾಷೆಗೆ ರೇಗಿಸುತ್ತಿದ್ದರಂತೆ.
ನಟ ದರ್ಶನ್ ತೂಗುದೀಪ್ ಅವರು ರೇಗಿಸುವಾಗ ಸೆಟ್‌ನಲ್ಲಿ ಎಲ್ಲರೂ ತಮಾಷೆ ಮಾಡ್ತಿದ್ರು. ತಮಾಷೆ ಮಾತು ಇಬ್ಬರ ಮನಸ್ಸಲ್ಲಿ ಪ್ರೀತಿ ಮೂಡಿಸಿತ್ತು. 'ರಾಬರ್ಟ್' ಸಿನಿಮಾ ಶೂಟಿಂಗ್ ಸಮಯದಲ್ಲೇ ಸೋನಾಲ್ & ತರುಣ್ ನಡುವೆ ಪ್ರೀತಿ ಶುರುವಾಗಿತ್ತು. 'ರಾಬರ್ಟ್' ಸಿನಿಮಾದ ಶೂಟಿಂಗ್ ಸಮಯದಲ್ಲೇ ಇಬ್ಬರು ಕೂಡ ಪ್ರೀತಿಯ ಬಲೆಗೆ ಬಿದ್ದಿದ್ದರು ಎನ್ನಲಾಗಿದೆ. ಆದರೆ, ಈ ವಿಚಾರ ಗುಟ್ಟಾಗಿ ಉಳಿದಿತ್ತು. ಕೆಲ ತಿಂಗಳ ಹಿಂದೆ ಈ ಬಗ್ಗೆ ಚರ್ಚೆ ಆರಂಭ ಆಗಿತ್ತು.
ಮದುವೆಗೆ ಮುಹೂರ್ತ ಯಾವಾಗ?
ತರುಣ್ & ಸೋನಾಲ್ ಮದುವೆಗೆ ಸಿದ್ಧತೆ ಸಾಗಿದೆ. ಆದರೆ ಈವರೆಗೆ ಅಧಿಕೃತವಾಗಿ ಸೋನಾಲ್ ಹೆಸರನ್ನ ತರುಣ್ ಸುಧೀರ್ ಅವರು ಎಲ್ಲೂ ಬಾಯಿಬಿಟ್ಟಿಲ್ಲ. ನಾಳೆ ಈ ಕುರಿತಾಗಿ ಅಧಿಕೃತ ಘೋಷಣೆ ಆಗುವುದು ಬಹುತೇಕ ಪಕ್ಕಾ ಆಗಿದೆ. ಮುಂದಿನ ತಿಂಗಳು ಅಂದ್ರೆ ಆಗಸ್ಟ್ 10 & 11ಕ್ಕೆ ಇಬ್ಬರೂ ಮದುವೆ ಆಗುವುದು ಬಹುತೇಕ ಗ್ಯಾರಂಟಿ. ಹೀಗಾಗಿ ಇಬ್ಬರ ಮದುವೆ ಸುದ್ದಿ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ.
ದರ್ಶನ್ ಕೂಡ ಮದುವೆಗೆ ಬರ್ತಾರಾ?
ಸೋನಾಲ್ ಅವರಿಗೆ ದರ್ಶನ್ ತೂಗುದೀಪ್ ಅಣ್ಣನ ಸಮಾನ. ಅಲ್ಲದೆ ಖುದ್ದು ಸೋನಾಲ್ ಕೂಡ ದರ್ಶನ್ ಅವರನ್ನ ಅಣ್ಣಾ ಅಂತಾ ಕರೆಯುತ್ತಿದ್ದರು. ಹೀಗಾಗಿ ಇದೀಗ ಜೈಲಿನಲ್ಲಿ ಇರುವ ನಟಿ ಸೋನಾಲ್ ಅವರ ಅಣ್ಣ ದರ್ಶನ್ ತೂಗುದೀಪ್ ಮದುವೆಗೆ ಬರ್ತಾರಾ? ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳನ್ನ ಕಾಡುತ್ತಿದೆ. ಈಗಾಗಲೇ ದರ್ಶನ್ ತೂಗುದೀಪ್ ಅವರಿಗೆ ಮದುವೆ ಆಮಂತ್ರಣ ಪತ್ರ ತಲುಪಿದೆ. ಖುದ್ದಾಗಿ ಜೈಲಿಗೆ ತೆರಳಿದ್ದ ನಿರ್ದೇಶಕ ತರುಣ್ ಸುಧೀರ್, ಈ ಮದುವೆ ಆಮಂತ್ರಣ ಪತ್ರ ತಲುಪಿಸಿದ್ದಾರೆ. ಹೀಗಾಗಿ ತೀವ್ರ ಕುತೂಹಲ ಕೆರಳಿದ್ದು, ಮುಂದೆ ಏನಾಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications