Sonu Gowda: ಕಾರು ಅಪಘಾತ; ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಆಸ್ಪತ್ರೆಗೆ ದಾಖಲು

ಬೆಂಗಳೂರು, ಫೆಬ್ರವರಿ. 04: ರಾಜ್ಯದಲ್ಲಿ ಟಿಕ್ ಟಾಕ್, ರಿಲ್ಸ್ ಮೂಲಕ ಸಖತ್ ಫೇಮಸ್ ಆಗಿ ಕಿರುತೆರೆವರೆಗೂ ಪಯಣ ಮಾಡಿದವರಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋನು ಗೌಡ ಹೆಸರು ಮೊದಲಿಗೆ ಬರುತ್ತದೆ. ಬಿಗ್ ಬಾಸ್ ಒಟಿಟಿಯಲ್ಲಿ ಭಾಘಿಯಾಗಿ ಜನರ ಮನಗೆದ್ದಿದ್ದ ಸೋನುಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು... ನಟಿ ಸೋನು ಶ್ರೀನಿವಾಸ್ ಗೌಡ ಅವರು ಅಪಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಅಪಾರ ಫಾಲೋವರ್ಸ್ ಇದ್ದಾರೆ ಸೋನು ಗೌಡ ಅವರಿಗೆ. ಈ ಸುದ್ದಿ ಕೇಳಿ ಅವರ ಫಾಲೋವರ್ಸ್ ಶಾಕ್ ಆಗಿದ್ದು, ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Social media Influencer Sonu Gowda admitted to hospital due to car accident

ಸೋನು ಶ್ರೀನಿವಾಸ್ ಗೌಡ ಕಾರು ಅಪಘಾತ

ಬಿಗ್ ಬಾಸ್ ಒಟಿಟಿ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು ತೆಗೆಯಲು ಹೋಗಿ ಪಿಲ್ಲರ್‌ಗೆ ಗುದ್ದಿಸಿದ್ದಾರೆ ಎನ್ನುವ ಮಾಹಿತಿ ಇದೆ. ಮತ್ತೆ ಕೆಲವರು ಕಾರು ಡ್ರೈವಿಂಗ್ ಕಲಿಯುವ ವೇಳೆಗೆ ಪಿಲ್ಲರ್‌ಗೆ ಕಾರು ಗುದ್ದಿಸಿದ್ದಾರೆ ಎಂದಿದ್ದಾರೆ.

ಕಾರು ತೆಗೆಯುವಾಗ ಬ್ರೇಕ್ ತುಳಿಯಲು ಹೋಗಿ ಎಕ್ಸಿಲೇಟರ್ ತುಳಿದದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ನಟಿ ಸೋನು ಗೌಡ ಕಾರ್ ಡ್ರೈವಿಂಗ್ ಕಲಿಯಲು ಆರಂಭಿಸಿದ್ದು, ಎಕ್ಸಿಲೇಟರ್ ಮತ್ತು ಬ್ರೇಕ್ ನಡುವಿನ ಗೊಂದಲ ಉಂಟಾಗಿ ಅಪಘಾತ ನಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಸೋನು ಗೌಡ ಅವರ ಕೈಗೆ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಏಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿವೆ ಮೂಲಗಳು. ಇನ್ನು, ಕಾರು ಯಾರು ಚಲಾಯಿಸುತ್ತಿದ್ದರು ಎನ್ನುವ ಬಗ್ಗೆಯೂ ಗೊಂದಲಗಳಿದ್ದು, ಸೋನು ಗೌಡ ಅಥವಾ ಅವರ ತಮ್ಮ ಇಬ್ಬರಲ್ಲಿ ಒಬ್ಬರು ಕಾರು ಓಡಿಸುತ್ತಿದ್ದರು ಎನ್ನಲಾಗಿದೆ. ಅಪಘಾತವಾದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ ಎನ್ನುವ ಮಾಹಿತಿಯಿದೆ.

Social media Influencer Sonu Gowda admitted to hospital due to car accident

ಇನ್ನು, ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿದ್ದ ಸೋನು ಗೌಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ಇತ್ತೀಚೆಗೆ ಅವರ ಸಿನಿಮಾ ಕೂಡ ಘೋಷಣೆಯಾಗಿದೆ. ಕನಸು ಪ್ರೊಡಕ್ಷನ್ಸ್ ನಿರ್ಮಾಣದ 'ಕ್ಯಾಡ್ಬರಿಸ್' ಎಂಬ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ಸೋನು ಗೌಡ ನಟಿಸಲಿದ್ದಾರೆ. ಈ ಬಗ್ಗೆ ಅವರು ಪೋಸ್ಟರ್ ಶೇರ್ ಮಾಡಿಕೊಂಡು ಮಾಹಿತಿ ನೀಡಿದ್ದರು.

"ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಾನು ಕನಸು ಪ್ರೊಡಕ್ಷನ್ಸ್ ನಿರ್ಮಾಣದ ಕ್ಯಾಡ್ಬರಿಸ್ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದೆ. ಈಗ ಆ ಮೂವಿಯ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇಂದು ಈ ಚಿತ್ರದ ನನ್ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಹಾಗೂ ನಮ್ಮ ಚಿತ್ರತಂಡದ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ. ಈ ಚಿತ್ರವು ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಅದ್ವಿತಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇನ್ನು ಹಲವಾರು ದೊಡ್ಡ ದೊಡ್ಡ ನಟರು ನಟಿಸುತ್ತಿದ್ದಾರೆ. ಅವರೆಲ್ಲರ ಜೊತೆ ನಟಿಸಿದ್ದು ನನಗೆ ಸಂತಸ ತಂದಿದೆ. ಈ ಚಿತ್ರವನ್ನು ರಮೇಶ್ ಯಾದವ್ ರವರು ನಿರ್ದೇಶನ ಮಾಡುತ್ತಿದ್ದು ಡಾ. ಶಿವರಾಜ್ ಜಾಣಗೆರೆ ರವರು ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಮತ್ತು ಸಾಹಿತ್ಯ, ಬರೆದು ಸಂಗೀತ ಸಂಯೋಜನೆ, ಮಾಡಿದ್ದಾರೆ.

ಈ ಚಿತ್ರಕ್ಕೆ ಶರತ್ ಕುಮಾರ್ ಅವರ ಛಾಯಾಗ್ರಹಣವಿದ್ದು ಸಿನಿಮಾ ತುಂಬಾ ಸೊಗಸಾಗಿ ಮೂಡಿಬಂದಿದೆ. ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಈ ಚಿತ್ರದ ನಿರ್ಮಾಪಕರಿಗೂ ನಿರ್ದೇಶಕರಿಗೂ ಹಾಗೂ ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದಗಳು" ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+