ಸಿಹಿ ಸಾವು, ಸೀತಾ ಮೆಂಟಲ್... ಸೀತಾ ರಾಮ ಸೀರಿಯಲ್‌ಗೆ ದೆವ್ವದ ಕಾಟ! Sita Rama Serial
ಸೀತಾ ರಾಮ, ಓ.. ಸೀತಾ ರಾಮ.. ಹೀಗೆ ಟಿವಿ ಸ್ಕ್ರೀನ್ ಮೇಲೆ 'ಸೀತಾ ರಾಮ' ಸೀರಿಯಲ್ ಸಾಂಗ್ ಬರುತ್ತಿದ್ದರೆ, ಮನೆಯಲ್ಲಿ ಇರುವ ಮಹಿಳೆಯರು ಮೈಮರೆತು ಕೂತು ಬಿಡುತ್ತಾರೆ. ಯಾಕಂದ್ರೆ ಪಕ್ಕಾ ಫ್ಯಾಮಿಲಿ ಎಂಟರ್‌ಟೈನಿಂಗ್ ಆಗಿ 'ಸೀತಾ ರಾಮ' ಸೀರಿಯಲ್ ಈಗ ಅಬ್ಬರಿಸುತ್ತಿದೆ. ಅದ್ರಲ್ಲೂ 'ಸೀತಾ ರಾಮ' ಸೀರಿಯಲ್ ಸಿಹಿ ಪಾತ್ರ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ತನಕ ಎಲ್ಲರಿಗು ಇಷ್ಟ. ಯಾಕಂದ್ರೆ 'ಸೀತಾ ರಾಮ' ಸೀರಿಯಲ್ ಸಿಹಿ ಪಾತ್ರಧಾರಿ ಅಷ್ಟು ಮುದ್ದು ಮುದ್ದಾಗಿ ನಟನೆ ಮಾಡುತ್ತಾರೆ.
ಹೀಗೆ 'ಸೀತಾ ರಾಮ' ಸೀರಿಯಲ್ ಅಖಾಡದಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ದಿಢೀರ್ 'ಸೀತಾ ರಾಮ' ಸೀರಿಯಲ್ ಸೆಟ್ ಅಲ್ಲಾಡಿ ಹೋಗಿದೆ. ಕಲಾವಿದರ ಸಮೇತವಾಗಿ ವೀಕ್ಷಕರು ಕೂಡ ಕಣ್ಣೀರಿನ ಕಡಲಲ್ಲಿ ಮುಳುಗಿ ಹೋಗಿದ್ದಾರೆ. ಯಾಕಂದ್ರೆ, ಸಿಹಿ ಸಾವು, ಸೀತಾ ಮೆಂಟಲ್... ಸೀತಾ ರಾಮ ಸೀರಿಯಲ್‌ಗೆ ದೆವ್ವದ ಕಾಟ ಈಗ ಶುರುವಾಗಿ ಬಿಟ್ಟಿದೆ!

'ಸೀತಾ ರಾಮ' ಸೀರಿಯಲ್ ಸಿಹಿ ಸಾವು!
ಹೌದು, 'ಸೀತಾ ರಾಮ' ಸೀರಿಯಲ್ ಕನ್ನಡ ಕಿರುತೆರೆ ಅಂದ್ರೆ ಟಿವಿ ಶೋಗಳ ಅಖಾಡದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಅದು ಹೇಗೆ ಅಂದ್ರೆ ತನ್ನ ಕಥೆಯಿಂದ ಹಿಡಿದು, ಕ್ಯಾಮೆರಾ, ಕಾಸ್ಟ್ಯೂಮ್, ಲೊಕೇಷನ್ ಹಾಗೂ ಇದೆಲ್ಲವನ್ನೂ ಮೀರಿ 'ಸೀತಾ ರಾಮ' ಸೀರಿಯಲ್ ಕಥೆ & ಪಾತ್ರಗಳು ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿವೆ. ಅದರಲ್ಲೂ ಇದೇ ಧಾರಾವಾಹಿಯಲ್ಲಿ ಬರುವ 'ಸಿಹಿ' ಪಾತ್ರ ಕನ್ನಡಿಗರಿಗೆ ಅಚ್ಚುಮೆಚ್ಚು.
'ಸೀತಾ ರಾಮ' ಸೀರಿಯಲ್ ಸಿಹಿ ಇನ್ನಿಲ್ಲ!
'ಸೀತಾ ರಾಮ' ಸೀರಿಯಲ್ ಸಿಹಿ ಅಂತಾನೇ ಫೇಮಸ್ ಆಗಿರುವ ಒಂದು ಕ್ಯಾರೆಕ್ಟರ್ ಈ ಸಂದರ್ಭದಲ್ಲಿ ಹೊರ ರಾಜ್ಯಗಳಲ್ಲೂ ಗಮನ ಸೆಳೆಯುತ್ತಿದೆ. ಆದರೆ, ಇದೀಗ 'ಸೀತಾ ರಾಮ' ಸೀರಿಯಲ್ ಸಿಹಿ ಪಾತ್ರವನ್ನ ನಿರ್ದೇಶಕರು ಕೊನೆಗೊಳಿಸಿದ್ದಾರೆ. ಹೀಗೆ ಸಿಹಿ ಸಾವು 'ಸೀತಾ ರಾಮ' ಸೀರಿಯಲ್ ಅಭಿಮಾನಿಗಳನ್ನ ಕೂಡ ಆಘಾತಕ್ಕೆ ಒಳಗಾಗುವ ರೀತಿಯೇ ಮಾಡಿದೆ.
ಮತ್ತೊಂದು ಕಡೆ 'ಸೀತಾ ರಾಮ' ಸೀರಿಯಲ್ ಸಿಹಿ ಸತ್ತಿದ್ದರೂ, ದೆವ್ವ ಆಗಿ ಅಂದ್ರೆ ಆತ್ಮದ ರೂಪದಲ್ಲಿ ಮತ್ತೆ ಬಂದಿದ್ದಾಳೆ. ಆದರೆ ಮತ್ತೊಂದು ಕಡೆಯಲ್ಲಿ ಇದೇ 'ಸೀತಾ ರಾಮ' ಸೀರಿಯಲ್‌ನ ಸೀತಾ ಪಾತ್ರಧಾರಿಗೆ ಮಗಳನ್ನು ಕಳೆದುಕೊಂಡು ಹುಚ್ಚು ಕೂಡ ಹಿಡಿದಿದೆ. ಈ ಮೂಲಕ 'ಸೀತಾ ರಾಮ' ಸೀರಿಯಲ್ ಈಗ ಫುಲ್ ಎಮೋಷನಲ್ ಆಗಿಬಿಟ್ಟಿದೆ!












Click it and Unblock the Notifications