ಗಾಯಕಿಯೊಬ್ಬರ ಅಶ್ಲೀಲ ವಿಡಿಯೋ ಭಾರೀ ವೈರಲ್
ಕೆಲ ನಟ-ನಟಿಯರು ವಿವಾದಾತ್ಮಕ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಉದಾಹರಣೆಗಳಿವೆ. ಈ ನಡುವೆಯೇ ಗಾಯಕಿಯೊಬ್ಬರು ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದ್ರೆ ಆ ಗಾಯಕಿ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಲ ನಟ-ನಟಿಯರು, ಗಾಯಕ, ಗಾಯಕಿಯರು ವಿವಾದದ ಕಿಡಿ ಹೊತ್ತಿಸಿ ಬಳಿಕ ನೆಪಮಾತ್ರಕ್ಕೆ ಕ್ಷಮೆಯಾಚನೆ ಮಾಡಿರುವ ಉದಾಹರಣೆಗಳಿವೆ. ಇಂತಹ ಪ್ರಕರಣಗಳಲ್ಲಿ ಪರಭಾಷಿಕರ ಪಾಲು ಹೆಚ್ಚಿದೆ. ಇದೀಗ ರ‍್ಯಾಪರ್ ಟೋಮಿ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ವಿವಾದಕ್ಕೆ ಒಳಗಾಗಿದ್ದಾರೆ. ಈ ವಿಡಿಯೋವನ್ನು tommygenesis ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ರ‍್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಅವರ ಮ್ಯೂಸಿಕ್ ಅಶ್ಲೀಲ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಅವರು ನೀಲಿ ಬಣ್ಣದ ದೇಹ, ಚಿನ್ನದ ಆಭರಣ ಮತ್ತು ಕೆಂಪು ಬಿಂದಿ ಧರಿಸಿ ಹಿಂದೂ ದೇವತೆಯಂತೆ ವೇಷ ಧರಿಸಿದ್ದು, ಕ್ರಿಶ್ಚಿಯನ್ ಶಿಲುಬೆಯನ್ನು ಬಳಕೆ ಮಾಡಿದ್ದಾರೆ. ಅಲ್ಲದೆ, ಇದರಲ್ಲಿ ಅವಳು ಶಿಲುಬೆಯನ್ನು ನೆಕ್ಕಿ ಅದನ್ನು ತನ್ನ ಹಿಂಬದಿಯ ಬಳಿ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾಳೆ. ಈ ದೃಶ್ಯಗಳು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರನ ಆಕ್ರೋಶಕ್ಕೆ ಕಾರಣವಾಗಿವೆ.
ಟ್ರೂ ಬ್ಲೂ ಮ್ಯೂಸಿಕ್ ವೀಡಿಯೊದಲ್ಲಿನ ವಿವಾದಾತ್ಮಕ ದೃಶ್ಯಗಳಿಗಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ರ‍್ಯಾಪರ್ ಟಾಮಿ ಜೆನೆಸಿಸ್ ಅವರ ವಿರುದ್ಧ ಕೆಂಡಕಾರುತ್ತಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಧಾರ್ಮಿಕ ಸಮುದಾಯಗಳನ್ನು ಪ್ರಚೋದನೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯಾರು ಗುರು ಇವಳಿಗೆ ಗಾಯಕಿ ಪಟ್ಟ ಕೊಟ್ಟಿದ್ದು? ಇವಳಿಗೆ ಎರಡೂ ಸಮುದಾಯಗಳಿಗೂ ಅವಮಾನ ಮಾಡಲೆಂಬ ಉದ್ದೇಶದಿಂಲೇ ಈ ರೀತಿ ಮಾಡಿದ್ದಾಳೆ. ಇವಳ ವಿರುದ್ಧ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಟ್ಟ ಕೆಟ್ಟದಾಗಿಯೂ ಕಾಮೆಂಟ್ ಬಾಕ್ಸ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಟಾಮಿ ಜೆನೆಸಿಸ್ ಎಂದೂ ಕರೆಯಲ್ಪಡುವ ಜೆನೆಸಿಸ್ ಯಾಸ್ಮಿನ್ ಮೋಹನರಾಜ್, ಕೆನಡಾದ ವ್ಯಾಂಕೋವರ್‌ನಲ್ಲಿ ಜನಿಸಿದರು. ಇವರು ಭಾರತೀಯ ಮೂಲದವರಾಗಿದ್ದಾರೆ. ಅವರ ಸಂಗೀತವು ಹೆಚ್ಚಾಗಿ ಲಿಂಗ, ಗುರುತು ಮತ್ತು ಲೈಂಗಿಕತೆಗೆ ಸಂಬಂಧಿಸಿದ್ದು ಆಗಿರುತ್ತವೆ. ಅದೇನೆ ಇರಲಿ ಈ ರೀತಿ ಧರ್ಮಗಳನ್ನು ಇಟ್ಟುಕೊಂಡು ಬೆಂಕಿ ಹಚ್ಚುವ ಕೆಲಸವನ್ನು ಮಾಡಬಾರದಿತ್ತು ಅಂತಲೂ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications