ಸೋನು ನಿಗಮ್ ಹೆಸರಿನಲ್ಲಿ ಹೆಚ್ಚಿದ ಮೋಸ: ಫ್ಯಾನ್ಸ್‌ಗೆ ಎಚ್ಚರಿಕೆ ನೀಡಿದ ಗಾಯಕ

ಸೆಲೆಬ್ರೆಟಿಗಳಿಗೆ ಸೈಬರ್‌ ವಂಚಕರ ಕಾಟ ತಪ್ಪಿದಲ್ಲ. ಖ್ಯಾತ ನಟ-ನಟಿಯರ ಹಾಗೂ ಗಾಯಕರ ಹೆಸರು ಬಳಸಿಕೊಂಡು ನಕಲಿ ಖಾತೆ ಸೃಷ್ಟಿಸಿ, ಜನರಿಗೆ ವಂಚಿಸುವ ಜಾಲ ಎಲ್ಲೆಡೆ ತನ್ನ ಕಬಂಧ ಬಾಹು ಚಾಚಿಕೊಂಡಿದೆ. ಸಿನಿಮಾದಲ್ಲಿ ಅವಕಾಶ ನೀಡುತ್ತೇವೆ. ನಮ್ಮನ್ನು ಭೇಟಿಯಾಗಬಹುದು, ನಮ್ಮೊಂದಿಗೆ ಕೊಲಾಬರೇಷನ್‌ ಮಾಡಬಹುದು ಎನ್ನುವ ಮೆಸೇಜ್‌ಗಳನ್ನು ಕಳುಹಿಸಿ ಜನರನ್ನು ವಂಚಿಸಲಾಗುತ್ತಿದೆ. ಸೆಲೆಬ್ರೆಟಿಗಳ ಮೇಲೆ ಅಂದರೆ ತಮ್ಮಿಷ್ಟದ ನಟ-ನಟಿಯರ ಮೇಲೆ ಅತಿಯಾದ ಅಭಿಮಾನ, ಮೋಹ ಇರುವವರು ಈ ಸೈಬರ್‌ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ.

ಇದೀಗ ಈ ವಂಚಕರ ವಂಚನೆಯ ಬಿಸಿ ಖ್ಯಾತ ಗಾಯಕ ಸೋನು ನಿಗಮ್ ಅವರಿಗೂ ತಟ್ಟಿದ್ದು, ಸ್ವತಃ ಸೋನು ನಿಗಮ್ ಅವರೇ ಈ ಬಗ್ಗೆ ಮೌನ ಮುರಿದು ಎಚ್ಚರಿಕೆ ನೀಡಿದ್ದಾರೆ. ಗಾಯಕ ಸೋನು ನಿಗಮ್ ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣದ ಖಾತೆಗಳು ಸೃಷ್ಟಿಯಾಗಿವೆ. ಸೋನು ನಿಗಮ್ ಅವರು ಹಲವು ವರ್ಷಗಳಿಂದ ಟ್ವಿಟರ್ನಲ್ಲಿ ಸಕ್ರಿಯರಾಗಿಲ್ಲ. ಆದರೆ ಇತ್ತೀಚಿಗೆ ಅವರ ಹೆಸರಲ್ಲಿ ಒಂದಷ್ಟು ಖಾತೆ ತೆರೆಯಲಾಗಿದೆ. ಆನ್ಲೈನ್ನಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

Singer Sonu Nigam Warns Of Fake Accounts On X

ಸೋನು ನಿಗಮ್ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದಿರುವ ಕಿಡಿಗೇಡಿಗಳು ಕೆಲವು ವಿವಾದಾತ್ಮಕ ವಿಚಾರಗಳನ್ನು ಪೋಸ್ಟ್‌ಗಳನ್ನು ಆ ಖಾತೆಯಿಂದ ಮಾಡುತ್ತಿದ್ದಾರೆ. ಅಲ್ಲದೇ ತಾವೇ ಸೋನು ನಿಗಮ್ ಎನ್ನುವ ರೀತಿಯಲ್ಲಿ ನಂಬಿಸಿ ಜನರಿಗೆ ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿ ಸೋನು ನಿಗಮ್ ನಕಲಿ ಖಾತೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದು ಸೋನು ನಿಗಮ್ ಅವರ ಗಮನಕ್ಕೆ ಕೂಡ ಬಂದಿದ್ದು, ಕೂಡಲೇ ಅವರು ತಮ್ಮ ಅಧೀಕೃತ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

Singer Sonu Nigam Warns Of Fake Accounts On X

'ನಿಮ್ಮೆಲ್ಲರಿಗೂ ಒಂದು ಬಹಳ ಮುಖ್ಯವಾದ ವಿಚಾರವನ್ನು ಹಂಚಿಕೊಳ್ಳಬೇಕಿದೆ. ಸೋಶಿಯಲ್‌ ಮೀಡಿಯಾದಲ್ಲಿ ನನ್ನ ಹೆಸರನ್ನು ಯಾರೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ತಂಡದವರು ಯಾವುದೇ ಕಾರಣಕ್ಕೂ ಯಾರನ್ನೂ ಸಂಪರ್ಕಿಸಿಲ್ಲ. ನನ್ನ ಹೆಸರಲ್ಲಿ ಯಾವುದಾದರೂ ನಕಲಿ ಖಾತೆ ಕಂಡರೆ ಅದನ್ನು ಕೂಡಲೇ ರಿಪೋರ್ಟ್ ಮಾಡಿ ಮತ್ತು ಬ್ಲಾಕ್ ಮಾಡಿ. ಈ ವಿಚಾರವನ್ನು ನನ್ನ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದಗಳು. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿರಾ ಎಂದು ಭಾವಿಸುತ್ತೇನೆ' ಎಂದು ಸೋನು ನಿಗಮ್ ತಮ್ಮ ಅಧೀಕೃತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+