Upendra: ಉಪೇಂದ್ರ ಬಗ್ಗೆ ಮಾತನಾಡಿದ ಕಮಲ್ ಪುತ್ರಿ ಶ್ರುತಿ ಹಾಸನ್: ಇಲ್ಲಿದೆ ವೈರಲ್ ವಿಡಿಯೋ!
Upendra: ದಕ್ಷಿಣ ಭಾರತದ ಬಹು ನಿರೀಕ್ಷಿತ ಸಿನಿಮಾ ಕೂಲಿ ಹೊಸ ಹಲವು ಕಾರಣಕ್ಕೆ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಕನ್ನಡದ ನಟ ಮತ್ತು ನಟಿಯರೂ ಸಹ ನಟಿಸಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಘಟಾನುಘಟಿ ನಟ - ನಟಿಯರು ಹಾಗೂ ಬಾಲಿವುಡ್‌ನ ನಟರು ಸಹ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಹಲವು ಕಾರಣಕ್ಕೆ ವಿಶೇಷವಾಗಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಉಪೇಂದ್ರ ಅವರು ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೂಲಿ ಚಿತ್ರದಲ್ಲಿ ಉಪೇಂದ್ರ ಮತ್ತು ಶ್ರುತಿ ತಂದೆ ಮಗಳ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ನಟ ಕಮಲ್‌ಹಾಸನ್ ಅವರ ಪುತ್ರಿ ಹಾಗೂ ನಟಿ ಶ್ರುತಿ ಅವರು ಉಪ್ರೇಂದ್ರ ಅವರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಕೂಲಿ ಸಿನಿಮಾದಲ್ಲಿ ಸ್ಟಾರ್ ನಟರಾದ ರಜನಿಕಾಂತ್, ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್ ಮತ್ತು ಶ್ರುತಿ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಯ ನಟರು ನಟಿಸಿದ್ದಾರೆ. ಇದೀಗ ನಟ ಉಪೇಂದ್ರ ಅವರ ನಟನೆ ಮತ್ತು ಸಿಂಪ್ಲಿಸಿಟಿಯ ಬಗ್ಗೆ ಶ್ರುತಿ ಹಾಸನ್ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದೇ ಕಾರ್ಯಕ್ರಮದಲ್ಲಿ ನಟ ರಜನಿಕಾಂತ್ ಅವರು ಸಹ ಉಪ್ರೇಂದ್ರ ಅವರ ನಿರ್ದೇಶನ ಕಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಬಹು ನಿರೀಕ್ಷಿತ ಸಿನಿಮಾ ಕೂಲಿ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಶ್ರುತಿ ಹಾಸನ್ ಅವರು ಉಪೇಂದ್ರ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೆಲವರ ಮುಖ ನೋಡಿದರೆ ಸಾಕು ಅವರ ಪ್ರಭಾವ ಮತ್ತು ಪವರ್‌ಫುಲ್ ಎನಿಸುತ್ತದೆ ಅಂತವರ ಸಾಲಿನಲ್ಲಿ ಉಪೇಂದ್ರ ಅವರು ನಿಲ್ಲುತ್ತಾರೆ. ನೀವು ಬಂದು ಸ್ಕ್ರೀನ್‌ನಲ್ಲಿ ನಿಂತ್ರೆ ಸಾಕು. ತೆರೆಮೇಲೆ ನಿಮ್ಮ ಪ್ರಸೆನ್ಸ್ ನೋಡುವುದೇ ರೋಮಾಂಚನವನ್ನು ಉಂಟು ಮಾಡುತ್ತದೆ. ನೀವೊಬ್ಬ ಕ್ರಿಯೇಟಿವ್ ಜೀನಿಯಸ್ ಎನ್ನುವುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿದೆ.
ಅಪಾರ ಯಶಸ್ಸು, ಅಭಿಮಾನಿಗಳ ಪ್ರೀತಿ ಮರೆಯುವುದಕ್ಕೆ ಸಾಧ್ಯವಿಲ್ಲ. ಈ ಸಿನಿಮಾ ಮಾಡುವಾಗ ನಿಮ್ಮ ಬಳಿ ನಾನೊಂದು ಅದ್ಭುತ ವಿಚಾರವೊಂದನ್ನು ಕಲಿತುಕೊಂಡೆ. ರಜನಿಕಾಂತ್ ಎದುರು ನೀವು ಅಭಿಮಾನಿಯಂತೆ ಕಾಣಿಸಿಕೊಂಡಿರಿ. ಆಗ ನನಗೆ ಅರ್ಥವಾಯ್ತು ನಿಜ ಜೀವನದಲ್ಲಿ ಏನು ಸಾಧನೆ ಮಾಡಿದ್ದೇವೆ ಎನ್ನುವುದಕ್ಕಿಂತ ನಾವು ಯಾರನ್ನು ಪ್ರೀತಿಸಿದ್ವಿ, ಯಾರನ್ನು ನೋಡಿ ಬೆಳೆದೆವು ಎನ್ನುವುದನ್ನು ಮರೆಯಬಾರದು. ಈ ಗುಣವನ್ನು ನಾನು ನಿಮ್ಮನ್ನು ನೋಡಿ ಕಲಿತೆ ಎಂದು ಹೇಳಿದ್ದಾರೆ.
@shrutihaasan words about our #Upendra Sir
— HarshithDFan (@HarshithDfan) August 13, 2025
What she is saying can you translate @grok ! #Coolie #CoolieUnleashed #Rajinikanth #Kannada
pic.twitter.com/ExE9p5JMMr
ರಜನಿಕಾಂತ್‌ರಿಂದಲೂ ಮೆಚ್ಚುಗೆ: ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟ ಉಪೇಂದ್ರ ಅವರ ನಿರ್ದೇಶನ ಎ ಹಾಗೂ ಓಂ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ನಟ ಉಪೇಂದ್ರ ಅವರು ಅದ್ಭುತವಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರ ಓಂ ಸಿನಿಮಾ ಬಾಷಾದಂತಹ 10 ಸಿನಿಮಾಗಳಿಗೆ ಸಮ ಎಂದು ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications