ಸಾನಿಯಾ ಮಿರ್ಜಾ ಮಾಜಿ ಗಂಡನ ಮೋಜು ಮಸ್ತಿ: ಹನಿಮೂನ್ ಫೋಟೊ ಶೇರ್ ಮಾಡ್ಕೊಂಡ ಶೋಯಬ್ ಮಲ್ಲಿಕ್ & ಸನಾ ಜಾವೇದ್!
ಸಾನಿಯಾ ಮಿರ್ಜಾ & ಪಾಕಿಸ್ತಾನ ಮಾಜಿ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಮದುವೆ ಸಂಬಂಧ ಖತಂ ಆಗಿದೆ. ಶೋಯೆಬ್ ಮಲ್ಲಿಕ್ ಬೇರೆ ಹೆಂಗಸಿನ ಜೊತೆ ಮದುವೆ ಆದ ಹಿನ್ನೆಲೆ ಸಾನಿಯಾ ಮಿರ್ಜಾ ಈಗ ಫುಲ್ ನೋವಿನಲ್ಲಿ ಇದ್ದಾರೆ. ಹೀಗಿದ್ದಾಗಲೇ ಸುಮ್ಮನೆ ಇರದೆ ಈ ಶೋಯೆಬ್ ಮಲ್ಲಿಕ್ ಅನ್ನೋ ಸ್ವಯಂ ಘೋಷಿತ ಹೀರೋ ಹೊಸ ಹೆಂಡತಿ ಜೊತೆ ಹನಿಮೂನ್ ಮಾಡುತ್ತಾ ಫೋಟೊ ಶೇರ್ ಮಾಡಿದ್ದಾರೆ!
ಹೌದು ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಮಾಜಿ ಗಂಡ ಶೋಯಾಬ್ ಮಲ್ಲಿಕ್‌ನಿಂದ ಈಗ ಡಿವೋರ್ಸ್ ಪಡೆದಿದ್ದಾರೆ. ಈ ಮೂಲಕ 14 ವರ್ಷಗಳ ದಾಂಪತ್ಯ ಜೀವನ ಮುಗಿದು ಹೋಗಿದೆ. ಮತ್ತೊಂದ್ಕಡೆ ಶೋಯಾಬ್ ಮಲ್ಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಮದುವೆಯನ್ನು ಆಗಿದ್ದಾರೆ. ಹೀಗಿದ್ದಾಗಲೇ ತಾವು ಎಷ್ಟು ರಸಿಕರು ಅನ್ನೋದನ್ನ ಜಗತ್ತಿಗೆ ತೋರಿಸಲು ಈಗ ಶೋಯಾಬ್ ಮಲ್ಲಿಕ್ & ಸನಾ ಜಾವೇದ್ ಹನಿಮೂನ್ ಫೋಟೊ ಶೇರ್ ಮಾಡಿದ್ದರು. ಆದರೆ ಇದೇ ವಿಡಿಯೋ ಈಗ ಬ್ಯಾಕ್ ಫೈಯರ್ ಆಗಿದೆಯಂತೆ, ಅಂದ್ರೆ ತಾವೇ ಮಾಡಿದ ತಪ್ಪಿಗಾಗಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಛೀ, ಥೂ ಅಂತಾ ಉಗಿಸಿಕೊಂಡಿದ್ದಾರೆ.

ಸಾನಿಯಾ ಬಾಳು ಹಾಳು ಮಾಡಿದ್ಯಾರು?
ಅಂದಹಾಗೆ ಹಲವು ದಿನಗಳಿಂದ ಕಾಲ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲೀಕ್ ಅವರ ವಿಚ್ಛೇದನ ಊಹಾಪೋಹ ಜೋರಾಗಿತ್ತು. 2024ರ ಜನವರಿ 20ರಂದು ಪಾಕಿಸ್ತಾನದ ನಟಿ ಸನಾ ಜಾವೇದ್ ಜೊತೆಗಿನ ವಿವಾಹ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಶೋಯೆಬ್ ಮಲ್ಲಿಕ್, ಸಾನಿಯಾ ಮಿರ್ಜಾ ಜೊತೆ ವಿಚ್ಛೇದನಕ್ಕೆ ಒಳಪಟ್ಟಿರುವುದು ಪಕ್ಕಾ ಎಂದು ಘೋಷಿಸಿದ್ದ. ಈ ಫೋಟೊ ಬಳಿಕ ಸಾನಿಯಾ ಮಿರ್ಜಾರ ಮಾಜಿ ಗಂಡನ, ಹೊಸ ಹನಿಮೂನ್ ಫೋಟೊಸ್ ವೈರಲ್ ಆಗಿತ್ತು. ಅದಕ್ಕೆ ಅಭಿಮಾನಿಗಳು ಸರಿಯಾಗೇ ಉತ್ತರ ಕೊಟ್ಟಿದ್ದಾರೆ.
ರೊಚ್ಚಿಗೆದ್ದ ಸಾನಿಯಾ ಮಿರ್ಜಾ!
ಹೀಗೆ ತನ್ನ ಗಂಡ ಶೋಯೆಬ್ ಹೊಸ ಮದುವೆನ ಆಗಿರುವ ವಿಚಾರ ಸಾನಿಯಾ ಅವರಿಗೂ ಶಾಕ್ ಕೊಟ್ಟಿತ್ತು. ಹಾಗೇ ಶೋಯೆಬ್ ಮದುವೆಯ ಚಿತ್ರಗಳು ಬಿಡುಗಡೆಯಾಗಿ ವೈರಲ್ ಆದ ಬಳಿಕ ಸಾನಿಯಾ ಮಿರ್ಜಾ ತಾವು ಶೋಯೆಬ್ ಮಲ್ಲಿಕ್ ಅವರಿಂದ ಡಿವೋರ್ಸ್ ಪಡೆದ ಕುರಿತು ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಈಗ ಶೋಯೆಬ್ & ಸನಾ ಜಾವೇದ್‌ಗೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ತನ್ನ ಹೊಸ ಗಂಡನ ಜೊತೆ ಸನಾ ಹನಿಮೂನ್‌ಗೆ ಹೋದ ಫೋಟೊ ಶೇರ್ ಮಾಡಿದ್ದರು. ಇದೇ ಫೋಟೊಗೆ ಇದೀಗ ಫುಲ್ ಕಮೆಂಟ್ಸ್ ಬರುತ್ತಿವೆ. ಹಾಗೇ ನೀನು ಸಾನಿಯಾ ಮಿರ್ಜಾ ಜೀವನ ಹಾಳು ಮಾಡಿದ್ದೀಯ ಅಂತಾ ಸನಾ ಜಾವೇದ್ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಸ್ವಿಮ್ಮಿಂಗ್ ಪೂಲ್ ಬಳಿ ಮಸ್ತಿ!
ಅಷ್ಟಕ್ಕೂ ಇದೀಗ ಸನಾ ಜಾವೇದ್ & ಶೋಯೆಬ್ ಮಲ್ಲಿಕ್ ಹನಿಮೂನ್ ಫೋಟೊ ಅಂತಾ ಹೇಳಲಾಗುತ್ತಿರುವ, ಪೋಸ್ಟ್ ಫುಲ್ ವೈರಲ್ ಆಗ್ತಿದೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್ ಎದುರು ಇಬ್ಬರೂ ವಿಶ್ರಾಂತಿ ಪಡೆದಿರುವ ದೃಶ್ಯ ಕಾಣಬಹುದು. ಹಾಗೇ, ತಮ್ಮ ಕಾಲುಗಳನ್ನು ಹಳದಿ ಕಲರ್ ಟವಲ್‌ನಿಂದ ಇಬ್ಬರೂ ಮುಚ್ಚಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಹೊಸ ಜೋಡಿಗೆ ಹಿಡಿಶಾಪ ಹಾಕಿದ್ದಾರೆ. ಹಾಗೇ ನಿಮ್ಮಿಬ್ಬರ ಈ ವರ್ತನೆ ಕಾರಣ ಸಾನಿಯಾ ಮಿರ್ಜಾ ಜೀವನ ಹಾಳಾಗಿದೆ ಎಂದು ಗರಂ ಆಗಿದ್ದಾರೆ.
ಮೊಹಮ್ಮದ್ ಶಮಿ ಜೊತೆ ಮದುವೆ?
ಇದೆಲ್ಲಾ ಏನೇ ಇರಲಿ, ಆದರೆ ಸಾನಿಯಾ ಮಿರ್ಜಾ ಅವರ ಬದುಕು ಹಾಳಾಗಿರುವುದು ಮಾತ್ರ ದುರಂತ ಅಂತಿದ್ದಾರೆ ಅಭಿಮಾನಿಗಳು. ಅಲ್ಲದೆ ಶೋಯೆಬ್ ಮಲ್ಲಿಕ್ ಹಾಗೂ ಅವರ ಹೊಸ ಹೆಂಡತಿ ಸನಾ ಜಾವೇದ್‌ಗೆ ಶಾಪ ಹಾಕುತ್ತಿದ್ದಾರೆ ಫ್ಯಾನ್ಸ್. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಸಾನಿಯಾ ಮಿರ್ಜಾ ಮತ್ತೆ ಮದುವೆ ಆಗುತ್ತಾರಾ? ಅಂತಾ ಕಾದು ನೋಡಬೇಕಿದೆ. ಮತ್ತೊಂದು ಕಡೆ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆ ಆಗಲಿದ್ದಾರೆ, ಅನ್ನೋ ಗಾಳಿ ಸುದ್ದಿ ಕೂಡ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಅನ್ನೋದು ಆಮೇಲೆ ಗೊತ್ತಾಗಿತ್ತು.












Click it and Unblock the Notifications