Shiva Rajkumar: ಡಾ. ಶಿವರಾಜ್‌ಕುಮಾರ್ ಅಭಿಮಾನಿಗಳೇ ಇಲ್ಲಿ ಗಮನಿಸಿ...

ಆಡು ಮುಟ್ಟದ ಸೊಪ್ಪಿಲ್ಲ, ಡಾ. ಶಿವರಾಜ್‌ಕುಮಾರ್ ಮಾಡದ ಪಾತ್ರವಿಲ್ಲ ಎನ್ನಬಹುದು. 50 ವರ್ಷಗಳಿಂದ ಸತತವಾಗಿ ಕನ್ನಡ ಸಿನಿಮಾ ರಂಗದ ಸೇವೆ ಮಾಡಿರುವ ಶಿವಣ್ಣ ಕೋಟಿ, ಕೋಟಿ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಭೀಕರ ಸುದ್ದಿ ಒಂದು ಹೊರಬಿದ್ದು ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಆಘಾತ ಎದುರಾಗಿತ್ತು. ಹೀಗೆ ಶಿವಣ್ಣ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಹೀಗಿದ್ದಾಗಲೇ...

ಶಿವಣ್ಣ ಕನ್ನಡಿಗರ ಪ್ರೀತಿಯ ನಟ ಮಾತ್ರವಲ್ಲ, ಎಷ್ಟೋ ಜನರಿಗೆ ಅಣ್ಣ... ಅದೆಷ್ಟೋ ಜನರ ಬೆನ್ನಿಗೆ ನಿಂತ ರಕ್ಷಕರೂ ಹೌದು. ಲೆಕ್ಕವಿಲ್ಲದಷ್ಟು ಜನರು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಲು ಸಹಾಯ ಮಾಡಿದ ಸ್ಟಾರ್ ಅಂದ್ರೆ ಅದು ಡಾ. ಶಿವರಾಜ್‌ಕುಮಾರ್. ಆದ್ರೆ ಶಿವಣ್ಣ ಅವರು ಭಾರಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೋಟಿ ಕೋಟಿ ಅಭಿಮಾನಿಗಳ ಎದೆಯಲ್ಲಿ ಆತಂಕ ಶುರುವಾಗಿತ್ತು. ಹೀಗೆ ದೊಡ್ಡ ಅಪಾಯ ಎದುರಿಸಿ ಬಂದಿರುವ ನಟ ಶಿವಣ್ಣ ಅವರು ಇದೀಗ ಮತ್ತೆ ಇಡೀ ಸಮಾಜಕ್ಕೆ ಮಾದರಿ ಆಗುತ್ತಿದ್ದಾರೆ!

Shivarajkumar s Cancer Battle Explored in Inspiring Documentary

ಶಿವಣ್ಣ ಅಭಿಮಾನಿಗಳೇ ಇಲ್ಲಿ ಗಮನಿಸಿ...

ಹೌದು, ಕ್ಯಾನರ್ ಎಂಬ ಭಯಾನಕವಾದ ಕಾಯಿಲೆ ಗೆದ್ದು ಬಂದಿರುವ ಹ್ಯಾಟ್ರಿಕ್ ಹೀರೋ & ಸೆಂಚ್ಯುರಿ ಸ್ಟಾರ್ ಶಿವಣ್ಣ ಇದೀಗ ಸಮಾಜಕ್ಕೆ ಮಾದರಿ ಆಗಿದ್ದಾರೆ. ಕ್ಯಾನರ್ ಬಂದಿದೆ ಅಂತಾ ಡಾಕ್ಟರ್ ಹೇಳಿದ ಕೂಡಲೇ ಕುಸಿದು ಬೀಳುವ ಈ ಸಮಾಜದಲ್ಲಿ, ಕ್ಯಾನರ್ ಎದುರಿಸಿ ಗೆದ್ದು ಬೀಗಿದ್ದಾರೆ. ಹೀಗೆ, ಜೀವನದಲ್ಲಿ ಕ್ಯಾನ್ಸರ್ ಗೆದ್ದು ಯುವ ಪೀಳಿಗೆಗೆ ದೊಡ್ಡ ಸಂದೇಶವನ್ನು ರವಾನಿಸಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಈ ಯಶೋಗಾಥೆ ಇದೀಗ ಡಾಕ್ಯುಮೆಂಟರಿ ಆಗಿ ಬರುತ್ತಿದೆ! ಹಾಗಾದ್ರೆ ಇದು ರಿಲೀಸ್ ಆಗೋದು ಯಾವಾಗ? ಬನ್ನಿ ತಿಳಿಯೋಣ.

ಅಮೆರಿಕದ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು...

ಡಾ. ಶಿವರಾಜ್‌ಕುಮಾರ್ ತಮ್ಮ ಸಿನಿಮಾಗಳ ಮೂಲಕ ಮಾತ್ರವಲ್ಲ ತಮ್ಮ ಜೀವನದ ಮೂಲಕ ಕೂಡ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹೀಗಾಗಿ ನಟ ಶಿವಣ್ಣ ಅಂದ್ರೆ ಕನ್ನಡ ನಾಡಿನ ಜನರಿಗೆ ಸಿಕ್ಕಾಪಟ್ಟೆ ಪ್ರೀತಿ. ಹೀಗಿದ್ದಾಗ ದಿಢೀರ್ ಶಿವಣ್ಣ ಅವರಿಗೆ ಗಂಭೀರ ಕಾಯಿಲೆ ಕಾಡ್ತ ಇದೆ ಅನ್ನೋ ಸುದ್ದಿ ಹೊರಬಿದ್ದು, ಸಂಚಲನ ಸೃಷ್ಟಿ ಆಗಿತ್ತು. ಅದರಲ್ಲೂ, ಅಮೆರಿಕಗೆ ತೆರಳಿ ನಟ ಶಿವಣ್ಣ ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೂಡ ಭಾರಿ ತಲ್ಲಣ ಎಬ್ಬಿಸಿತ್ತು. ಈಗ ಎಲ್ಲಾ ಯಶಸ್ವಿಯಾಗಿ ಮುಗಿದಿದ್ದು, ಈ ಬಗ್ಗೆ ಅಮೆರಿಕದ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಒಂದು ಡಾಕ್ಯುಮೆಂಟರಿ ಸಿದ್ಧಪಡಿಸುತ್ತಿದ್ದಾರೆ.

ಡಾಕ್ಯುಮೆಂಟರಿ ಕುರಿತು ಖಾಸಗಿ ಸಂದರ್ಶನದಲ್ಲಿ ಮತ್ತೆ ಮಾತನಾಡಿರುವ ಶಿವಣ್ಣ ದಂಪತಿ, ಶೀಘ್ರದಲ್ಲೇ ಡಾಕ್ಯುಮೆಂಟರಿ ರಿಲೀಸ್ ಆಗುವ ಬಗ್ಗೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಕ್ಯಾನ್ಸರ್ ಗೆದ್ದು ಬೀಗಲು ಯುವ ಪೀಳಿಗೆಗೆ ಈ ಡಾಕ್ಯುಮೆಂಟರಿ ಪ್ರೋತ್ಸಾಹ ನೀಡಲಿದೆ. ಹೀಗಾಗಿ ಅಮೆರಿಕದ ಕ್ಯಾನ್ಸರ್ ಆಸ್ಪತ್ರೆ ವೈದ್ಯರು ಖುದ್ದಾಗಿ ಶಿವಣ್ಣ ಅವರನ್ನು ಒಪ್ಪಿಸಿ ಈ ಡಾಕ್ಯುಮೆಂಟರಿಯನ್ನ ಶೂಟ್ ಮಾಡಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+