Bhairavana Kone Pata: ಭೈರವನ ಅವತಾರದಲ್ಲಿ ಶಿವಣ್ಣ; ಅಭಿಮಾನಿಗಳು ಹೇಳಿದ್ದೇನು?

ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಸದಾ ಚಟುವಟಿಕೆಯಿಂದ ಇರುವ ನಟ. ಬೇರೆ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಎಂದು ಮೂರು ನಾಲ್ಕು ವರ್ಷಕ್ಕೊಮ್ಮೆ ಸಿನಿಮಾ ಮಾಡುತ್ತಿದ್ದರೆ, ಶಿವಣ್ಣ ಮಾತ್ರ ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇತ್ತಿಚಿನ ದಿನಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಅದಕ್ಕೆ ತಕ್ಕಂತೆ ಮುಂದಿನ ಸಿನಿಮಾದಲ್ಲಿ ಸಖತ್ ಮಾಸ್‌ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

Shivaraj Kumar s Bhairavana Kone Pata First Look Sparks Excitement

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ನಿರ್ದೇಶಕ ಹೇಮಂತ್ ರಾವ್ ಜೊತೆಗೆ ಸಿನಿಮಾ ಮಾಡಲು ಸಜ್ಜಾಗಿದ್ದು, ಭೈರವನ ಕೊನೆ ಪಾಠ ಎಂದು ಹೆಸರಿಡಲಾಗಿದೆ. ಚಿತ್ರದ ಮೊದಲ ಲುಕ್ ಇಂದು ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ?

ಭೈರವನ ಕೊನೆ ಪಾಠ ಒಂದು ಪತ್ತೇದಾರಿ ಸಿನಿಮಾ ಎನ್ನಲಾಗಿದೆ. ಕವಲುದಾರಿ ಎನ್ನುವ ಥ್ರಿಲ್ಲರ್ ಸಿನಿಮಾ ಮಾಡಿರುವ ಹೇಮಂತ್ ರಾವ್ ಮತ್ತೊಂದು ಅದೇ ರೀತಿಯ ಪತ್ತೇದಾರಿ ಥ್ರಿಲ್ಲರ್ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಶಿವರಾಜ್‌ಕುಮಾರ್ ಅವರನ್ನು ವಿಭಿನ್ನವಾಗಿ ತೋರಿಸಲು ಹೇಮಂತ್ ಸಜ್ಜಾಗಿದ್ದು, ಮೊದಲ ಲುಕ್‌ನಲ್ಲೇ ಅದರ ಸುಳಿವು ಕೊಟ್ಟಿದ್ದಾರೆ. ಕೊನೆಯ ಪಾಠ ಕಲಿಸುವುದು ಇನ್ನೂ ಬಾಕಿ ಇದೆ ಎನ್ನುವ ಟ್ಯಾಗ್‌ಲೈನ್ ಹೊಂದಿದ್ದು, ಭೈರವ ಯಾರು ಕೊನೆಯ ಪಾಠ ಯಾರಿಗೆ ಮಾಡುತ್ತಾರೆ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಹೇಮಂತ್ ರಾವ್.

ಸಿನಿಮಾ ಬಿಡುಗಡೆ ಯಾವಾಗ?

2024ರ ಕೊನೆಯಲ್ಲಿ ಅಥವಾ 2025ರ ಆರಂಭದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. 'ಭೈರವನ ಕೊನೆ ಪಾಠ' ಸಿನಿಮಾಗೂ ಮುನ್ನ ಶಿವರಾಜ್‌ಕುಮಾರ್ ಅವರ ರಣಗಲ್ ಸಿನಿಮಾ ಬಿಡುಗಡೆಯಾಗಬೇಕಿದೆ. ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು ಆಗಸ್ಟ್‌ಗೆ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ.

ಅದಾದ ಬಳಿಕ ಉತ್ತರ ಕಾಂಡ ಸಿನಿಮಾದಲ್ಲಿ ಕೂಡ ಶಿವರಾಜ್‌ಕುಮಾರ್ ನಟಿಸಲಿದ್ದಾರೆ. ಈ ನಡುವೆ ಭೈರವನ ಕೊನೆ ಪಾಠ ಸಿನಿಮಾಗೂ ಕೂಡ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+