Shiva Rajkumar: ಅನಾರೋಗ್ಯದ ಸಂದರ್ಭದಲ್ಲೂ ಶಿವಣ್ಣ ಈ ಕೆಲಸ ಮಾಡಿದ್ದರು: ಯುವ ರಾಜ್‌ಕುಮಾರ್!
Shiva Rajkumar: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸುದೀರ್ಘ 40 ವರ್ಷಗಳ ಸಿನಿಮಾ ಜರ್ನಿಯನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ನಟ ಯುವ ರಾಜ್‌ಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ದೊಡಪ್ಪನವರ 40 ವರ್ಷಗಳ ಸಿನಿ ಜರ್ನಿ
ದೊಡ್ಡಪ್ಪ ನನಗೆ ಚಿಕ್ಕವನಾಗಿದ್ದಾಗಿನಿಂದಲೂ ಫೇವರೆಟ್ ನಟ ಅಷ್ಟೆ ಅಲ್ಲ, ಅವರು ನನ್ನ ಜೀವನದ ಮಾರ್ಗದರ್ಶಕರು ಕೂಡ ಚಿತ್ರ ಹಾಗೂ ಚಿತ್ರರಂಗದ ಮೇಲಿನ ಅವರ ಬದ್ಧತೆ ನಮಗೇಲ್ಲ ಪಾಠಗಳಂತೆ ಅಂತ ಹೇಳಿದ್ದಾರೆ.

ಮುಂದುವರಿದು ನಟನೆ ಮೇಲಿನ ಅವರ ಉತ್ಸಾಹ, ನನ್ನಂತೆಯೇ ಎಷ್ಟೋ ಜನರ ಜೀವನೋತ್ಸಾಹಕ್ಕೆ ಕಾರಣವಾಗಿದೆ. ಒಬ್ಬ ನಟ, ಶ್ರೇಷ್ಠ ನಟನಾಗುವುದು ಹೇಗೆ ಅಂತ ನಮ್ಮ ದೊಡ್ಡಪ್ಪನವರ ಒಂದೊಂದು ಚಿತ್ರಗಳು ತೋರಿಸಿಕೊಟ್ಟಿವೆ. ಸದಾ ಇತರರಿಗಾಗಿ ಮಿಡಿಯುವ ದೊಡ್ಡಪ್ಪನ ಹೃದಯ. ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಎಂದಿಗೂ ನಿರಾಸೆ ಮೂಡಿಸದೆ, ಎಲ್ಲರನ್ನ ಕಾಯಲು ನಿಲ್ಲುತ್ತದೆ. ತನ್ನ ಅನಾರೋಗ್ಯದ ಸಂದರ್ಭದಲ್ಲೂ ಕೂಡ ತನ್ನನ್ನ ನಂಬಿದವರಿಗೆ ಭರವಸೆಯ ಸಾಂತ್ವನ ಹೇಳಿದ್ದು, ದೊಡ್ಡಪ್ಪನವರ ವಿಶಾಲ ಹೃದಯವಂತಿಕೆ.
ಅವರ ಈ ಐತಿಹಾಸಿಕ ಸಿನಿ ಜರ್ನಿಯಲ್ಲಿ ಅದೇಷ್ಟೋ ಸೂಪರ್ ಹಿಟ್, ಬ್ಲಾಕ್ ಬಾಸ್ಟರ್ ಚಿತ್ರಗಳು ಹೊರಬಂದಿವೆ. ಅದರಲ್ಲಿ ಬೆಸ್ಟ್ ಆಫ್ ಬೆಸ್ಟ್ ಚಿತ್ರವಾದ ಓಂ ಚಿತ್ರದಲ್ಲಿ ನಾನು ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದು ನನ್ನ ಸೌಭಾಗ್ಯ. ನಾನು ಅದನ್ನು ಯಾವತ್ತು ಮರಿಯೋಲ್ಲ. ಮತ್ತೆ ಅದೆ ಥರದ ಅವಕಾಶಕ್ಕೆ ಕಾಯ್ತಿದ್ದೀನಿ.
40 ವರ್ಷಗಳ ನಿಮ್ಮ ಜರ್ನಿ ಭಾರತದ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿಸಿದೆ. ನಿಮ್ಮ ಅಭಿನಯ ನಮ್ಮಂತಹ ಅದೇಷ್ಟೋ ಪೀಳಿಗಳಿಗೆ ಸ್ಪೂರ್ತಿ ನೀಡಿದೆ. ನಿಮ್ಮ ಈ ಸಿನಿ ಪಯಣ ಹೀಗೆ ಮುಂದುವರೆಯಲಿ. ನಿಮ್ಮ 40 ವರ್ಷದ ಸಿನಿ ಪಯಣವನ್ನ ನಾನು ಸಂಭ್ರಮದಿಂದ, ಸಂಭ್ರಮಿಸುತ್ತೇನೆ. ♥️ ದೊಡ್ಡಪ್ಪ... ಎಂದು ಅವರು ಬರೆದುಕೊಂಡಿದ್ದಾರೆ.
ಎಕ್ಕ ಸಿನಿಮಾ ಬಿಡುಗಡೆ ನಿರೀಕ್ಷೆ: ಇನ್ನು ಉದಯೋನ್ಮುಖ ನಟ ಯುವರಾಜ್‌ಕುಮಾರ್ ಅವರು ಅವರ ಬಹು ನಿರೀಕ್ಷಿತ ಸಿನಿಮಾ ಎಕ್ಕ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ. ಎಕ್ಕ ಸಿನಿಮಾವು ಜುಲೈ 18ಕ್ಕೆ ಬಿಡುಗಡೆಯಾಗಲಿದ್ದು. ಈ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆ ಇದೆ. ಇನ್ನು ಬ್ಯಾಂಗಲ್ ಬಂಗಾರಿ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ಹವಾ ಸೃಷ್ಟಿ ಮಾಡಿದೆ. ಈ ಹಾಡನ್ನು ಬಳಸಿ ಯುವಕ ಮತ್ತು ಯುವತಿಯರು ವಿಡಿಯೋ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.












Click it and Unblock the Notifications