ಮಗುವಂತೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ಶಿವಣ್ಣ, ಕನ್ನಡಿಗರ ಮನಸ್ಸು ವಿಲವಿಲ... Shiva Rajkumar

ಕನ್ನಡಕ್ಕೆ ಒಬ್ಬರೇ ಶಿವಣ್ಣ, ಬಣ್ಣದ ಲೋಕದಲ್ಲಿ ಮಾತ್ರವಲ್ಲ ಶಿವಣ್ಣ ಸಮಾಜ ಸೇವೆಯಲ್ಲೂ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಆದರೆ ಇಂತಹ ಅದ್ಭುತ ವ್ಯಕ್ತಿಗೆ ಸಾಲು ಸಾಲು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಮಯದಲ್ಲೇ ಅಮೆರಿಕಗೆ ತೆರಳಿ, ಕ್ಯಾನ್ಸರ್ ಗೆದ್ದು ಕನ್ನಡ ನಾಡಿಗೆ ಮರಳಿ ಬಂದಿದ್ದಾರೆ. ಆದರೆ ಈ ಸಂತಸದ ಸಮಯದಲ್ಲೇ ಮಗುವಂತೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ಶಿವಣ್ಣ ಗೀತಕ್ಕನ ಬಗ್ಗೆ ಹೇಳಿದ ಮಾತುಗಳು ಕನ್ನಡಿಗರ ಮನಸ್ಸು ಗೆದ್ದಿದೆ.

ಡಾ. ರಾಜ್‌ಕುಮಾರ್ ಎಂಬ ಜಗತ್ತು ಕಂಡ ಶ್ರೇಷ್ಠ ನಟನಿಗೆ ಮೊದಲ ಮಗನಾಗಿ ಹುಟ್ಟಿದ್ದ ಡಾ. ಶಿವರಾಜ್‌ಕುಮಾರ್ ಅವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿಗಳೇ ಇವೆ. ಅದರಲ್ಲೂ ಕನ್ನಡ ಸಿನಿಮಾ ರಂಗವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಕೂಡ ಇದೆ. ಇದನ್ನೆಲ್ಲಾ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಶಿವಣ್ಣಗೆ ಆರೋಗ್ಯ ಮಾತ್ರ ಪದೇ ಪದೇ ಕೈಕೊಟ್ಟಿದೆ.

Shiva Rajkumar Health And He Said This About His Wife

ಕ್ಯಾನ್ಸರ್ ಗೆದ್ದು ಬಂದ ಸೆಂಚ್ಯುರಿ ಸ್ಟಾರ್

ಇದೀಗ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಕೂಡ ಗೆದ್ದು ಬಂದಿದ್ದಾರೆ ಶಿವಣ್ಣ. ಆದರೆ, ಇದೇ ಸಮಯದಲ್ಲಿ ಮಗುವಂತೆ ಕಣ್ಣೀರು ಹಾಕಿ ಕನ್ನಡಿಗರನ್ನು ಈಗ ಭಾವುಕರನ್ನಾಗಿಸಿದ್ದಾರೆ ಶಿವಣ್ಣ. ಹ್ಯಾಟ್ರಿಕ್ ಹೀರೋ, ಸೆಂಚ್ಯುರಿ ಸ್ಟಾರ್, ಕರುನಾಡ ಚಕ್ರವರ್ತಿ ಹೀಗೆಲ್ಲಾ ಕನ್ನಡಿಗರ ನಿಶ್ಕಲ್ಮಶ ಹೃದಯದಿಂದ ಸಾಲು ಸಾಲು ಬಿರುದು ಪಡೆದಿರುವ ಶಿವಣ್ಣ ಕಣ್ಣೀರು ಹಾಕಿದ್ದೇಕೆ? ಮುಂದೆ ಓದಿ.

ಮಗುವಂತೆ ಶಿವಣ್ಣ ಕಣ್ಣೀರು ಹಾಕಿದ್ದೇಕೆ?

ಆಧುನಿಕ ಜಗತ್ತಿನಲ್ಲಿ ಶಿವಣ್ಣ ಮತ್ತು ಗೀತಕ್ಕ ಜೋಡಿ ಹೊಸ ಸಮಾಜದ ಯುವಕರಿಗೆ ಮಾದರಿ ಎನ್ನಬಹುದು. ಏಕೆಂದರೆ ಕ್ಯಾನ್ಸರ್ ರೀತಿಯ ದೊಡ್ಡ ದೊಡ್ಡ ಸಂಕಷ್ಟಗಳು ಎದುರಾದರೂ ಗೀತಕ್ಕ ಎಂದಿಗೂ ಹೆದರದೇ, ಧೈರ್ಯವಾಗಿ ಶಿವಣ್ಣ ಜೊತೆಗೆ ನಿಂತು ಗೆದ್ದು ಬೀಗಿದ್ದಾರೆ. ಈ ಸಮಯವನ್ನು ನೆನಪು ಮಾಡಿಕೊಂಡು ಶಿವಣ್ಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಹೀಗೆ ಶಿವಣ್ಣ ಕಣ್ಣೀರು ಹಾಕಿದ ವಿಚಾರ ಇದೀಗ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದೆ.

ಶಿವಣ್ಣ ಡಬಲ್ ಸೆಂಚ್ಯುರಿ ಗ್ಯಾರಂಟಿ

ಒಟ್ನಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಕ್ಯಾನ್ಸರ್ ಎಂಬ ಮಹಾಮಾರಿ ಗೆದ್ದು ಬಂದಿದ್ದಾರೆ. ನಟ ಶಿವಣ್ಣ ಅವರು ಆರೋಗ್ಯವಾಗಿ ಕನ್ನಡದ ಮಣ್ಣಿಗೆ ವಾಪಸ್ ಬಂದ ಈ ಸಮಯ ನೋಡಿ ಕನ್ನಡ ನಾಡು ಸಾಕಷ್ಟು ಹೆಮ್ಮೆ ವ್ಯಕ್ತಪಡಿಸುತ್ತಿದೆ. ಇದರ ಜೊತೆಗೆ, ಮತ್ತೆ ಬೆಳ್ಳಿತೆರೆ ಮೇಲೆ ಶಿವಣ್ಣನ ಖದರ್ & ಸೂಪರ್ ಆಕ್ಟಿಂಗ್ ನೋಡಿ ಶಿಳ್ಳೆ ಹಾಗೂ ಚಪ್ಪಾಳೆ ತಟ್ಟಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸೆಂಚ್ಯುರಿ ಸ್ಟಾರ್ ಸಿನಿಮಾ ಲೆಕ್ಕದಲ್ಲಿ ಡಬಲ್ ಸೆಂಚ್ಯುರಿ ಬಾರಿಸಲಿ ಅನ್ನೋದೆ ಅಭಿಮಾನಿಗಳ ಆಸೆ ಮತ್ತು ಒತ್ತಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+