Shilpa Shetty: ನಾನು ಕರ್ನಾಟಕದ ಹುಡುಗಿ: ಹಿಂದಿ ಮೀಡಿಯಾ ಮುಂದೆ ಕನ್ನಡ ಇಂಡಸ್ಟ್ರಿ ತಾಕತ್ತು ಎತ್ತಿ ಹಿಡಿದ ಶಿಲ್ಪಾ ಶೆಟ್ಟಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮುಂಬೈನಲ್ಲಿ ನಡೆದ 'ಕೆಡಿ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ, ನಾನು ಕರ್ನಾಟಕದ ಹುಡುಗಿ, ಕನ್ನಡದವಳು ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕನ್ನಡ ಚಿತ್ರರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಹಿಂದಿ ಮೀಡಿಯಾ ಎದುರಲ್ಲಿಯೇ ಕನ್ನಡ ಇಂಡಸ್ಟ್ರಿಯ ಶಕ್ತಿ ಮತ್ತು ತಮ್ಮ ಮೂಲದ ಬಗ್ಗೆ ಗರ್ವ ವ್ಯಕ್ತಪಡಿಸಿದ್ದಾರೆ.
ನಾನು ಕರ್ನಾಟಕದ ಹುಡುಗಿ, ಕನ್ನಡದವಳು ಎಂದು ನಟಿ ಶಿಲ್ಪಾ ಶೆಟ್ಟಿಯ ಈ ಹೇಳಿಕೆಗೆ ಕನ್ನಡಿಗರಿಂದ ಹಾಗೂ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಕನ್ನಡ ಹಿನ್ನಲೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಟ್ಟು ಮಾತನಾಡಿರುವುದು ವಿಶೇಷವಾಗಿ ಗಮನ ಸೆಳೆದಿದೆ. ನಾನು ಕರ್ನಾಟಕದ ಹುಡುಗಿ, ಕನ್ನಡದ ಹುಡುಗಿ ಎಂದು ಶಿಲ್ಪಾ ಶೆಟ್ಟಿ ಹೇಳುವ ಮೂಲಕ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ನಿನ್ನೆ (ಜುಲೈ 10) ಮುಂಬೈನಲ್ಲಿ ಧ್ರುವಾ ಸರ್ಜಾ ಅಭಿನಯದ 'ಕೆಡಿ' (KD; The Devil) ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಕೆಡಿ ಚಿತ್ರಕ್ಕೆ ಬಣ್ಣ ಹಚ್ಚಿರುವ ಶಿಲ್ಪಾ ಶೆಟ್ಟಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಈ ವೇಳೆ ಅವರು ಕನ್ನಡ ಚಿತ್ರರಂಗವನ್ನು ಕೊಂಡಾಡಿದ್ದಾರೆ. ಇದು ನನ್ನ ಮೊದಲ ಬಹುಭಾಷಾ ಸಿನಿಮಾ. 18 ವರ್ಷಗಳ ನಂತರ ಮತ್ತೆ ನಾನು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಾನು ಯಾವಾಗಲೂ ಹೇಳುತ್ತೇನೆ. ನಾನು ಕರ್ನಾಟಕದ ಹುಡುಗಿ. ಕನ್ನಡದ ಹುಡುಗಿ. ಕನ್ನಡ ಸಿನಿಮಾದಲ್ಲಿ ನಟಿಸೋದು ನನಗೆ ತುಂಬಾನೇ ವಿಶೇಷ. ಪ್ರೇಮ್ ಸರ್ ಜೊತೆ ಸಿನಿಮಾ ಮಾಡೋಕೆ ಖುಷಿ ಆಯಿತು. ದಿನಪೂರ್ತಿ ಸಂಜಯ್ ದತ್ ಜೊತೆ ಆ್ಯಕ್ಟಿಂಗ್ ಮಾಡುವ ಅವಕಾಶ ಸಿಕ್ಕಿತು ಎಂದು ಶಿಲ್ಪಾ ಶೆಟ್ಟಿ ಅವರು ಹೇಳಿದ್ದಾರೆ.
ಇನ್ನೂ ಮೊದಲಿಗೆ ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದೆ. ಏಕೆಂದರೆ ಒಂದರ ಹಿಂದೊಂದು ಸಿನಿಮಾ ಹಾಗೂ ರಿಯಾಲಿಟಿ ಶೋನಲ್ಲಿ ಬ್ಯುಸಿ ಆಗಿದ್ದೆ. ಆದರೆ ಅದೇ ಸಮಯದಲ್ಲಿ ರೋಹಿತ್ ಶೆಟ್ಟಿಯ ವೆಬ್ ಸರಣಿಯಲ್ಲಿ ನಟಿಸುವಾಗ ಅಪಘಾತವಾಗಿ ಕಾಲು ಮುರಿದುಕೊಂಡು ವೀಲ್ ಚೇರ್ನಲ್ಲಿ ಕೂರಬೇಕಾಯ್ತು. ಆಗ ನನ್ನ ಮ್ಯಾನೇಜರ್ ನನಗೆ ಬಲವಂತ ಮಾಡಿ ಕತೆ ಕೇಳುವಂತೆ ಹೇಳಿದರು ಎಂದು ವೇದಿಕೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಇದೀಗ ಕೆಡಿ ಚಿತ್ರದಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ನಟ ರವಿಚಂದ್ರನ್ ಜೊತೆಗೆ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತ್ಸೋದ್ ತಪ್ಪಾ, 'ಒಂದಾಗೋಣ ಬಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಉಪೇಂದ್ರ ನಟನೆಯ ಆಟೋ ಶಂಕರ್ ಚಿತ್ರದಲ್ಲೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಇದೀಗ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದಲ್ಲಿ ಸತ್ಯವತಿ ಹೆಸರಿನ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.












Click it and Unblock the Notifications