Shakhahaari: ಇದು ಕನ್ನಡದ ವರ್ಲ್ಡ್ ಕ್ಲಾಸ್ ಸಿನಿಮಾ; ರಂಗಾಯಣ ರಘು ಅವರಿಗೆ ಪ್ರಶಸ್ತಿ ಬರೋದು ಪಕ್ಕಾ!
ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಕಥೆ ಸಿನಿಮಾಗಳು ಕಡಿಮೆಯಾಗುತ್ತಿವೆ ಎನ್ನುವ ದೂರುಗಳ ನಡುವೆಯೇ ಇತ್ತೀಚೆಗೆ ನೆಲದ ಕಥೆಗಳು ತೆರೆಗೆ ಬರುತ್ತಿವೆ. ಇದೀಗ ಬಿಡುಗಡೆಯಾಗಿರುವ ಶಾಖಾಹಾರಿ ಸಿನಿಮಾಗೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಡಿಮೆ ನಿರೀಕ್ಷೆಯೊಂದಿಗೆ, ಅತಿ ಕಡಿಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ 'ಶಾಖಾಹಾರಿ' ಸಿನಿಮಾ ನೋಡಿದ ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈಗ ಕನ್ನಡದ ನಟ, ನಟಿಯರು, ನಿರ್ದೇಶಕರು ಕೂಡ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.
ದುನಿಯಾ ವಿಜಯ್, ಯೋಗರಾಜ್ ಭಟ್, ಶಶಾಂಕ್, ಚೈತ್ರಾ ಆಚಾರ್, ಅನಿಲ್ ಕುಮಾರ್, ಅರುಣ್ ಸಾಗರ್, ಮಂಸೋರೆ ಸೇರಿದಂತೆ ಅನೇಕರು ಸಿನಿಮಾವನ್ನು ಕೊಂಡಾಡಿದ್ದಾರೆ.

ದುನಿಯಾ ವಿಜಯ್ ಏನಂದ್ರು?
ಸಿನಿಮಾ ನೋಡಿ ಮೆಚ್ಚಿರುವ ದುನಿಯಾ ವಿಜಯ್ 'ನಂಗೆ ಒಂದು ಕ್ಷಣ ಮೈ ಜುಮ್ ಎನಿಸಿತು' ಎಂದಿದ್ದಾರೆ. ಚೈತ್ರಾ ಆಚಾರ್ ಕೂಡ 'ರೋಮಾಂಚನವಾಯಿತು, ಅದ್ಭುತ ಥ್ರಿಲ್ಲರ್' ಸಿನಿಮಾ ಎಂದು ಹಾಡಿ ಹೊಗಳಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್, 'ಸಿನಿಮಾದಲ್ಲಿ ಒಬ್ಬ ನಿರ್ದೇಶಕನ ಧ್ಯಾನ ಕಾಣಿಸುತ್ತೆ. ಎಷ್ಟೋ ಶತಮಾನ ಆಗಿತ್ತು, ಥ್ರಿಲ್ಲರ್ ಮರ್ಡರ್ ಮಿಸ್ಟರಿ ಬಂದು' ಎಂದು ನಿರ್ದೇಶಕರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
ನಿರ್ದೇಶಕ ಅರುಣ್ ಸಾಗರ್ ಪ್ರತಿಕ್ರಿಯೆ ನೀಡಿ, 'ನೇಟಿವ್ ಕಥೆ ನೋಡ್ತಿದ್ದಾಗ, ಇದು ನನ್ನ ಕಥೆ, ನನ್ನ ಸುತ್ತ ನಡೀತಿದೆ ಎಂದು ಅನಿಸುತ್ತಿದೆ' ಎಂದು ಹೇಳಿದ್ದಾರೆ. ನಿರ್ದೇಶಕ ಶಶಾಂಕ್ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡಿದ್ದು 'ಇದು ಕನ್ನಡದ ವಿಶ್ವ ದರ್ಜೆಯ ಸಿನಿಮಾ' ಎಂದು ಕರೆದಿದ್ದಾರೆ.
ಶಾಖಾಹಾರಿಗೆ "ಮನಸೋತ" ತಾರೆಯರು✨#filmshakhahaari 𝗜𝗻 cinemas now @keelambimedia #Vinay #NidhiHegde #SandeepSunkada #MayurAmbekallu #VishwajithRao #RajeshKeelambi @Vinayuj_actor @Sreeharshagob @NidhiHegde15 #ShrutiMadawale @Mrtmusicoff @PROHarisarasu @KRG_Studios @KRG_Connects pic.twitter.com/gfPnfDhYcf
— KRG Connects (@KRG_Connects) February 18, 2024
ಕನ್ನಡ ಚಿತ್ರರಂಗವನ್ನು ದೂರಬೇಡಿ!
ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕನ್ನಡದಲ್ಲಿ ಬಂದಿರುವ ಅಪರೂಪದ ಸಿನಿಮಾ, ಇಂತಹ ಸಿನಿಮಾ ಗೆಲ್ಲಬೇಕು ಎಂದು ಹೇಳಿದ್ದಾರೆ.
ಇಂತಹ ಸಿನಿಮಾಗಳನ್ನು ಗೆಲ್ಲಿಸದೇ ಆಮೇಲೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಕಥೆಯ ಸಿನಿಮಾಗಳು ಬರಲ್ಲ ಎಂದು ದೂರಬೇಡಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.
ರಂಗಾಯಣ ರಘು ಅವರ ನಟನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಸಾಕಷ್ಟು ಪ್ರಶಸ್ತಿಗಳು ಸಿಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಶಾಖಾಹಾರಿ ಸಿನಿಮಾಗೆ ಸಂದೀಪ್ ಸುಂಕದ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಂಗಾಯಣ ರಘು ಹಾಗೂ ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಸಿನಿಮಾದಲ್ಲಿ ಗಮನ ಸೆಳೆದಿದೆ.












Click it and Unblock the Notifications