ಸುನಾಮಿ ರೀತಿ ಅಬ್ಬರಿಸುತ್ತಿದ್ದಾರೆ ಶಾರುಖ್ ಖಾನ್ ಫ್ಯಾನ್ಸ್!

ಭಾರತೀಯ ಚಿತ್ರರಂಗ ಅಂದ್ರೆ ಒಂದು ಗತ್ತು ಇದೆ, ಅದರಲ್ಲೂ ಬಾಲಿವುಡ್ ಸಿನಿಮಾಗಳಿಗೆ ಒಂದು ತಾಕತ್ ಇದೆ. ಹೀಗೆ ದಶಕಗಳ ಕಾಲ ಬಾಲಿವುಡ್ ಅಂಗಳವನ್ನ ಆಳಿದ್ರು ಶಾರುಖ್ ಖಾನ್. ಇಂತಿಪ್ಪ ಶಾರುಖ್ ಖಾನ್ ಅವರ ವಯಸ್ಸು 58 ಆದ್ರೂ ಗತ್ತು ಮಾತ್ರ ಒಂಚೂರು ಕಡಿಮೆಯಾಗಿಲ್ಲ. 'ಡಂಕಿ' ಮೂಲಕ ಮತ್ತೊಮ್ಮೆ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯೋದಕ್ಕೆ ಕಿಂಗ್ ಖಾನ್ ಸಿದ್ಧವಾಗಿರುವ ಸಮಯದಲ್ಲೇ ಅಭಿಮಾನದ ಸುನಾಮಿ ಸೃಷ್ಟಿಯಾಗಿದೆ.

ಹೌದು, ಬಾಲಿವುಡ್ ಬಾದ್ ಶಾ ಬಿರುದಾಂಕಿತ ಹಲವು ಸಿನಿಮಾ ಮೂಲಕ ಸಾವಿರಾರು ಕೋಟಿ ಬಾಕ್ಸ್ ಆಫಿಸ್ ಪೀಸ್ ಮಾಡಿದ ಶಾರುಖ್ ಖಾನ್ ಮತ್ತೆ ಕಮಾಲ್ ಮಾಡೋದಕ್ಕೆ ಸಜ್ಜಾಗಿದ್ದಾರೆ. ಡಂಕಿ ಮೂಲಕ, ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಮಯದಲ್ಲಿ ಶಾರುಖ್ ಫ್ಯಾನ್ಸ್ ತಮ್ಮಿಷ್ಟದ ನಟನಿಗೆ ಸರ್ಪ್ರೈಸ್ ನೀಡಲು, ಸಾವಿರಾರು ಕಿಲೋ ಮೀಟರ್ ದೂರದಿಂದ ಓಡೋಡಿ ಬರುತ್ತಿದ್ದಾರಂತೆ!

Shah Rukh Khan Foreign Fans Will Watch Dunki In India

ಹ್ಯಾಟ್ರಿಕ್ ಪಡೆಯುತ್ತಾರಾ ಶಾರುಖ್?

ಅಷ್ಟಕ್ಕೂ ಶಾರುಖ್ ಖಾನ್ ಈ ವರ್ಷದಲ್ಲಿ ಎರಡೆರಡು ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ಪಠಾಣ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಬಳಿಕ ಬಿಡುಗಡೆ ಆದ ಜವಾನ್ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಬಿಟ್ಟಿದೆ. ಈಗ ಶಾರುಖ್ ನಟನೆಯ ಮತ್ತೊಂದು ಸಿನಿಮಾ 'ಡಂಕಿ' ಇನ್ನೇನು ಕೆಲವೇ ದಿನದಲ್ಲಿ ರಿಲೀಸ್ ಆಗಿ, ಅಬ್ಬರಿಸೋದಕ್ಕೆ ಸಿದ್ಧವಾಗುತ್ತಿದೆ. ಈ ಮೂಲಕ, ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಲು ಕಿಂಗ್ ಖಾನ್ ಸನ್ನದ್ಧರಾಗಿದ್ದಾರೆ. ಹೀಗಿದ್ದಾಗ ಅವರ ಅಭಿಮಾನಿಗಳು ಕೂಡ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ.

ವಿದೇಶದಿಂದ ಬರ್ತಿದ್ದಾರೆ ಫ್ಯಾನ್ಸ್!

ಅಂದಹಾಗೆ 'ಡಂಕಿ' ಬತ್ತಳಿಕೆಯಿಂದ ಹೊರಬಂದಿರುವ ಡ್ರಾಪ್ 1 & ಡ್ರಾಪ್ 2 ಹಿಟ್ ಆಗಿದೆ. ಇನ್ನೇನೂ ಚಿತ್ರ ತೆರೆಗೆ ಬರಲು ಕೆಲವೇ ದಿನ ಬಾಕಿ ಇದ್ದು, ಚಿತ್ರದ ಕ್ರೇಜ್ ಜೋರಾಗಿದೆ. ಯಾವ ಮಟ್ಟಕ್ಕೆ ಅಂದ್ರೆ ಡಂಕಿ ಸಿನಿಮಾ ನೋಡಲು ವಿದೇಶದಿಂದ ಕೂಡ ಭಾರತಕ್ಕೆ ಶಾರುಖ್‌ರ ಫ್ಯಾನ್ಸ್ ಬರ್ತಿದ್ದಾರೆ. ಕೆನಡಾ, ಯುಎಸ್‌ಎ, ಯುಎಇ ಸೇರಿದಂತೆ ಬೇರೆ ಬೇರೆ ದೇಶಗಳಿಂದ 100ಕ್ಕೂ ಹೆಚ್ಚು ಫ್ಯಾನ್ಸಾ ಇಂಡಿಯಾಗೆ ಲ್ಯಾಂಡ್ ಆಗುತ್ತಿದ್ದಾರಂತೆ. ಡಿಸೆಂಬರ್ 22ರಂದು ಈ ಸಿನಿಮಾ ರಿಲೀಸ್ ಆಗಲಿದೆ.

Shah Rukh Khan Foreign Fans Will Watch Dunki In India

ಒಟ್ನಲ್ಲಿ ಶಾರುಖ್ ಖಾನ್ ಏನೇ ಮಾಡಿದರೂ ಟ್ರೆಂಡ್ ಎಂಬಂತಾಗಿದೆ. ಅದರಲ್ಲೂ ಕಿಂಗ್ ಖಾನ್ ಬಾಲಿವುಡ್ ಅಂಗಳದಲ್ಲಿ ನಿರ್ಮಿಸಿರುವ ದಾಖಲೆಗಳು ಹವಾ ಎಬ್ಬಿಸಿವೆ. ಹೀಗಿದ್ದಾಗ ಮತ್ತಷ್ಟು ದಾಖಲೆಗಳ ತಮ್ಮ ಹೆಸರಿಗೆ ಬರೆದುಕೊಳ್ಳಲು ಸಜ್ಜಾಗಿದ್ದಾರೆ. ಇದೀಗ ಮತ್ತೊಮ್ಮೆ ಡಂಕಿ ಮೂಲಕ ಧಾಂ.. ಧೂಂ.. ಎಬ್ಬಿಸಲು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 22 ಕ್ಕೆ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಲಿದೆ. ಹಾಗೆ ಹೊಸ ವರ್ಷಕ್ಕೆ ಶಾರುಖ್ ಖಾನ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಸಿಗಲಿದೆ. ಚಿತ್ರ ತಂಡದ ಶ್ರಮ ಕೂಡ ಹೆಚ್ಚಾಗಿದ್ದು 'ಡಂಕಿ' ತೆರೆಗೆ ತರಲು ಬೇಕಿರುವ ತಯಾರಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+