ಪ್ರಪೋಸ್‌ ಮಾಡ್ತಾರೆ, ಇಲ್ಲ ಅಣ್ಣ ಅಂತೀನಿ: ಮಿಥುನ ರಾಶಿ ನಟಿ ವೈಷ್ಣವಿ

"ಮಿಥುನ ರಾಶಿ" ಸೀರಿಯಲ್‌ ಮೂಲಕ ಮನೆಮಾತಾಗಿರುವ ಕಿರುತೆರೆ ನಟಿ ವೈಷ್ಣವಿ ಅವರು ಇದೀಗ "ಪ್ರೇಮಕಾವ್ಯ" ಸೀರಿಯಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನದಲ್ಲಿ ಅಚ್ಚರಿ ವಿಚಾರಗಳನ್ನು ಹೇಳಿಕೊಂಡಿದ್ದು, 'ಹಲವರು ನನ್ನ ಮದುವೆಯಾಗ್ತೀಯಾ? ಏನು ಬೇಕಾದರೂ ಕೊಡಿಸುತ್ತೀನಿ' ಎಂದು ಪ್ರಪೋಸಲ್‌ ಮುಂದಿಡುತ್ತಿರುವ ವಿಚಾರ ಬಹಿರಂಗಪಡಿಸಿದ್ದಾರೆ. ಈ ರೀತಿ ಆಫರ್‌ಗಳು ಕೊಟ್ಟಾಗ ವೈಷ್ಣವಿ ಏನು ಮಾಡ್ತಾರೆ ಎಂಬುದನ್ನೂ ಅವರೇ ಬಾಯ್ಬಿಟ್ಟಿದ್ದಾರೆ.

'ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಜನ ನನಗೆ ಕಮೆಂಟ್‌ ಹಾಕ್ತಾರೆ. ಕನ್ನಡದಲ್ಲಿ ಒಬ್ಬರಂತೂ ಕವಿತೆಗಳನ್ನೇ ಬರೆದು ಹಾಕ್ತಾರೆ. ಪ್ರತಿ ಪೋಸ್ಟ್‌ಗೂ ಕವಿತೆ ಬರೆಯುತ್ತಾರೆ. ಇನ್ನೂ ಒಂದಷ್ಟು ಜನ ವಿಲ್‌ ಯೂ ಮ್ಯಾರೀ ಮಿ ಎಂದು ಓಪನ್‌ ಆಗಿ ಕೇಳ್ತಾರೆ. ನಿಮ್ಮನ್ನ ಹೇಗೆ ಬೇಕಾದ್ರೂ ನೋಡಿಕೊಳ್ತೀನಿ, ಏನ್‌ ಬೇಕಾದ್ರೂ ಕೊಡಿಸುತ್ತೀನಿ, ನನ್ನ ಮದುವೆ ಆಗ್ತೀರಾ? ಎಂದು ಕೇಳಿದ್ದರು. ಅದಕ್ಕೆ ನಾನು ಇಲ್ಲ ಅಣ್ಣ ಎಂದು ರಿಪ್ಲೈ ಮಾಡಿ ಸುಮ್ಮನಾದೆ. ಸೇಫ್ಟಿಗಾಗಿ ಅಣ್ಣ ಅನ್ನೋದಷ್ಟೇ ಎಂದಿದ್ದಾರೆ. ನನಗೆ ಬೇರೆ ಬೇರೆ ಭಾಷೆಯ ಜನ ಕಾಮೆಂಟ್‌ ಮಾಡುತ್ತಾರೆ. ಅದನ್ನು ನೋಡಿದಾಗ ಒಳ್ಳೆಯದು ಅನಿಸುತ್ತೆ. ತುಂಬಾ ಖುಷಿಯಾಗುತ್ತೆ' ಎಂದಿದ್ದಾರೆ.

serial-actress-vaishnavi-reacts-to-marriage-proposals-on-social-media

'ಅಣ್ಣ ಅಂತಿದ್ದೆ, ಈಗ ಅವರಿಗೆ ನಾನು ನಾಯಕಿ'

16 ವರ್ಷದವಳಿದ್ದಾಗ ನಟನೆಗೆ ಬಂದೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಮಿಥುನ ರಾಶಿಗೆ ಬಂದಿದ್ದೆ. ಅಲ್ಲಿ ನನ್ನ ಮಗುವಿನಂತೆ ನೋಡಿಕೊಂಡರು. ಈಗಲೂ ಅದೇ ಪ್ರೀತಿ ಅವರಿಂದ ಸಿಗುತ್ತಿದೆ. ರಾಘವೇಂದ್ರ ಅವರು ಮೊದಲಿನಿಂದಲೂ ನನಗೆ ಗೊತ್ತು. ನಾನು ಅವರನ್ನು ಮೊದಲು ಅಣ್ಣ ಎಂದು ಕರೀತಿದ್ದೆ. ಈಗ ಪ್ರೇಮಕಾವ್ಯ ಸೀರಿಯಲ್‌ನಲ್ಲಿ ಅವರಿಗೆ ಜೋಡಿಯಾಗಿ ಪಾತ್ರ ಮಾಡುತ್ತಿದ್ದೇನೆ. ಈಗಲೂ ಮಿಸ್‌ ಅಣ್ಣ ಅಂತಲೇ ಕರೆಯುತ್ತೇನೆ. ಆಗ ಸಹ ಕಲಾವಿದರು ಎಂಬುದು ನೆನಪಾಗಿ ಸುಮ್ಮನಾಗ್ತೀನಿ. ಹಾಗಾಗಿ ಅಣ್ಣ ಅನ್ನೋದು ಕಡಿಮೆ ಮಾಡಿದ್ದೀನಿ ಎಂದಿದ್ದಾರೆ ವೈಷ್ಣವಿ.

ಹೊಸ ಸೀರಿಯಲ್‌ನಲ್ಲಿ ವೈಷ್ಣವಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಪ್ರೇಮಕಾವ್ಯ' ಶುರುವಾಗಿದ್ದು, ರವೀನ್ ಕುಮಾರ್ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಪ್ರಿಯಾ ಜೆ.ಆಚಾರ್ (ಪ್ರೇಮ), ವೈಷ್ಣವಿ (ಕಾವ್ಯ), ರಾಘವೇಂದ್ರ (ಮಾದೇವ), ವಿಕಾಸ್ (ರಾಮ್) ನಟಿಸಿದ್ದಾರೆ.

ಈ ಧಾರಾವಾಹಿಯು ಎರಡು ಜೋಡಿಗಳ ಪ್ರೇಮಕಥೆಯನ್ನು ಒಳಗೊಂಡಿದೆ. ಪ್ರೇಮ ಪಾತ್ರದಲ್ಲಿ ಪ್ರಿಯಾ ಜೆ.ಆಚಾರ್ ನಟಿಸಿದ್ದು, ಕಡಿಮೆ ವಿದ್ಯಾವಂತರಾದರೂ ತಂಗಿ ವಿಜ್ಞಾನಿಯಾಗುವ ಕನಸನ್ನು ಬೆನ್ನುಹತ್ತುವಳು, ಹಾಗೂ ಬಾಲ್ಯದ ಗೆಳೆಯ ರಾಮ್‌ನ ಪ್ರೀತಿಸುತ್ತಾಳೆ. ಕಾವ್ಯ ಪಾತ್ರದಲ್ಲಿ ವೈಷ್ಣವಿ ನಟಿಸುತ್ತಿದ್ದಾರೆ. ಇವರದ್ದು ಬಾಹ್ಯಾಕಾಶ ಸಂಶೋಧಕಿಯಾಗಬೇಕೆಂಬ ಆಶಯದೊಂದಿಗೆ ನಗರದಲ್ಲಿ ವಾಸಿಸುವ ಪಾತ್ರ. ರಾಘವೇಂದ್ರ ಅವರು ಮಾದೇವನಾಗಿ, ತಂಗಿಯ ಪ್ರಪಂಚವಾಗಿರುವ ಮೃದು ಸ್ವಭಾವದ ವ್ಯಕ್ತಿ. ವಿಕಾಸ್ ಮೊದಲ ಬಾರಿಗೆ ನಾಯಕನಾಗಿ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೀರಿಯಲ್‌ ಕೂಡ ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+