‘ಬಾ ನಲ್ಲೆ ಮಧುಚಂದ್ರಕೆ’ ನಾಯಕ ಕೆ. ಶಿವರಾಮ್ ಸಿನಿಮಾಗಳು!
ಅದು 1993, ಕನ್ನಡ ಸಿನಿಮಾ ರಂಗದಲ್ಲಿ ಒಂದು ಸಿನಿಮಾ ಹಲ್‌ಚಲ್ ಎಬ್ಬಿಸಿತ್ತು. ಇಡೀ ಕನ್ನಡ ನಾಡಿನ ತುಂಬಾ ಈ ಸಿನಿಮಾ ಮನೆಮಾತಾಗಿ ಹೋಗಿತ್ತು. ಆ ಸಿನಿಮಾದ ಹೆಸರು, 'ಬಾ ನಲ್ಲೆ ಮಧುಚಂದ್ರಕೆ' ಅಂತಾ. ಹೀಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ್ದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಕನ್ನಡಿಗರು ಕೂಡ ಈ ಸಿನಿಮಾನ ಆತ್ಮೀಯವಾಗಿ ಒಪ್ಪಿಕೊಂಡರು. ದಿಢೀರ್ ಕೆ. ಶಿವರಾಮ್ ದೇಶಾದ್ಯಂತ ಹೆಸರು ಗಳಿಸಿದರು.
ಹೀಗೆ ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ, ಕೆ. ಶಿವರಾಮ್ ಅವರು ಮುಂದೆ ಹಿಂದಿರುಗಿ ನೋಡಲೇ ಇಲ್ಲ. ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದರು ಈ ನಟ. ಕನ್ನಡ ಸಿನಿಮಾ ರಂಗದಲ್ಲೂ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ ಶಿವರಾಮ್ ಅವರಿಗೆ ಸಾಲು ಸಾಲು ಅವಕಾಶ ಬಂದವು. ಆಗಿನ ಕಾಲದ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗೂ ಚಾಲೆಂಜ್ ಮಾಡುವಂತಹ ಸಿನಿಮಾಗಳನ್ನ ಆಯ್ಕೆ ಮಾಡಿಕೊಂಡರು. ಕೆಲವೇ ಸಿನಿಮಾ ಮಾಡಿದರೂ ಹಲವು ಸಿನಿಮಾಗೆ ಆಗುವಷ್ಟು ಜನಪ್ರಿಯತೆ ಗಳಿಸಿಬಿಟ್ಟರು. ಇನ್ನು, ಕೆ. ಶಿವರಾಮ್ ಅವರ ಸಿನಿಮಾಗಳ ಪಟ್ಟಿ ನೋಡಲು ಮುಂದೆ ಓದಿ.

'ಬಾ ನಲ್ಲೆ ಮಧುಚಂದ್ರಕೆ' ಅಬ್ಬರ!
ಹೀಗೆ ಸರ್ಕಾರಿ ಅಧಿಕಾರಿ ಒಬ್ಬರು 1993ರಲ್ಲಿ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು, ಮುಂದೆ ದೊಡ್ಡ ಹೆಸರನ್ನೂ ಗಳಿಸಿದರು. ಆದ್ರೆ 1996ರ ತನಕ ಬ್ರೇಕ್ ಪಡೆದ ಅವರು, 1996ರಲ್ಲಿ ವಸಂತ ಕಾವ್ಯ ಸಿನಿಮಾದಲ್ಲಿ ನಟಿಸಿದರು. ಆ ನಂತರ ಅವರು 1997ರಲ್ಲಿ ಸಾಂಗ್ಲಿಯಾನ-3, 1999ರಲ್ಲಿ ಪ್ರತಿಭಟನೆ, 1999ರಲ್ಲಿ ಖಳನಾಯಕ, 2001ರಲ್ಲಿ ಯಾರಿಗೆ ಬೇಡ ದುಡ್ಡು, 2003 ರಲ್ಲಿ ಗೇಮ್ ಫಾರ್ ಲವ್, 2006 ರಲ್ಲಿ ನಾಗ, 2007 ರಲ್ಲಿ ಓ ಪ್ರೇಮ ದೇವತೆ, 2017 ರಲ್ಲಿ ಟೈಗರ್ ಸಿನಿಮಾಗಳಲ್ಲಿ ನಟಿಸಿದ್ದರು.
90ರ ಕಾಲಘಟ್ಟದ ಸೂಪರ್ ಹೀರೋ
ಕೆ.ಶಿವರಾಮ್ ಅವ್ರು 90ರ ಕಾಲಘಟ್ಟದಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿನ ನೆಚ್ಚಿನ ಹೀರೋ ಆಗಿದ್ದರು. ಅದ್ರಲ್ಲೂ ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾ ನೀಡಿದ್ದ ನಟ, ಮಾಡಿದ್ದ ಕೆಲವೇ ಸಿನಿಮಾಗಳಲ್ಲಿ ನೂರಾರು ಸಿನಿಮಾಗೆ ಆಗುವಷ್ಟು ಹೆಸರು ಸಂಪಾದಿಸಿದರು. ಅದ್ರಲ್ಲೂ ಕೆ. ಶಿವರಾಮ್ ಅವರ 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯ, ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗಿತ್ತು. ಎವರ್ ಗ್ರೀನ್ ಆಗಿ 'ಬಾ ನಲ್ಲೆ ಮಧುಚಂದ್ರಕೆ' ಚಿತ್ರ ಮಿಂಚಿತ್ತು. ಇಂದಿಗೂ ಈ ಸಿನಿಮಾ ಸೂಪರ್ ಅನ್ನಿಸಿಕೊಳ್ಳುತ್ತೆ. ಹೀಗೆ ಕನ್ನಡಿಗರ ಮನಸ್ಸು ಗೆದ್ದಿದ್ದ ನಟ ಕಂ ಮಾಜಿ ಸರ್ಕಾರಿ ಅಧಿಕಾರಿ ಕೆ. ಶಿವರಾಮ್ ಇದೀಗ, ಬಾರದ ಲೋಕಕ್ಕೆ ತೆರಳಿದ್ದಾರೆ.
ಕೆ. ಶಿವರಾಮ್ ಅವರಿಗೆ ಏನಾಗಿತ್ತು?
ಅನಾರೋಗ್ಯದ ಕಾರಣ ಕೆ. ಶಿವರಾಮ್ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಿದ್ದಾಗಲೇ ದಿಢೀರ್, ಕೆ. ಶಿವರಾಮ್ (K Shivaram) ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿತ್ತು. ಶಿವರಾಮ್ ಅವರನ್ನ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಪರಿಸ್ಥಿತಿ ಚಿಂತಾಜನಕವಾದ ಕಾರಣ, ಕೆ. ಶಿವರಾಮ್ ಅವರ ಆರೋಗ್ಯ ಸುಧಾರಿಸಲೇ ಇಲ್ಲ. ಅವರ ಕುಟುಂಬ ಸದಸ್ಯರು, ಅಪಾರ ಅಭಿಮಾನಿಗಳು ಕೆ. ಶಿವರಾಮ್ ಅವರು ಗುಣಮುಖರಾಗಲಿ ಅಂತಾ ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸದೆ ಇಂದು ಕೆ. ಶಿವರಾಮ್ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.
ಸಿನಿಮಾ ಮಾತ್ರವಲ್ಲದೆ ಸಾರ್ವಜನಿಕ ಸೇವೆಯಲ್ಲೂ ಕೆ. ಶಿವರಾಮ್ ಸಖತ್ ಹೆಸರು ಗಳಿಸಿದ್ದರು. ಮತ್ತೊಂದು ವಿಶೇಷ ಎಂದರೆ ಕೆ. ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿ ಕೂಡ ಸೇವೆನ ಸಲ್ಲಿಸಿದ್ದರು. ನಿವೃತ್ತಿ ಪಡೆದ ಬಳಿಕ ರಾಜಕೀಯದಲ್ಲಿ ಸಕ್ರಿಯರಾದ ಕೆ. ಶಿವರಾಮ್, 2013ರಲ್ಲಿ ಜೆಡಿಎಸ್‌ಗೆ ಸೇರ್ಪಡೆ ಆದರು. ಆ ಬಳಿಕ, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. 2016ರ ನಂತರ ಬಿಜೆಪಿ ಸೇರಿದ್ದರು. ಕೆ. ಶಿವರಾಮ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅಭಿಮಾನಿಗಳ ಆತಂಕ ಕೂಡ ಹೆಚ್ಚಾಗಿತ್ತು, ಹಾಗೇ ಅವರು ಗುಣಮುಖರಾಗಲಿ ಅಂತಾ ಪ್ರಾರ್ಥಿಸಿದ್ದರು.












Click it and Unblock the Notifications