ಶಿವರಾಜ್‌ಕುಮಾರ್ ಅಭಿನಯದ ಧನುಷ್ ತಮಿಳು ಸಿನಿಮಾ ಟ್ರೇಲರ್ ಬಗ್ಗೆ ಜನರು ಹೇಳಿದ್ದೇನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರಜನಿಕಾಂತ್ ಅಳಿಯ ಧನುಷ್ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಸೆಂಚ್ಯುರಿ ಸ್ಟಾರ್ ಶಿವಣ್ಣ ಅವರು, ಜಗತ್ತಿನಾದ್ಯಂತ ತಮ್ಮ ಅಬ್ಬರ ತೋರಿಸುತ್ತಿದ್ದಾರೆ. ಶಿವಣ್ಣ ಅವರ ಸಿನಿಮಾ ಕ್ರೇಜ್ ನೋಡಿದ ಭಾರತೀಯರು ಫಿದಾ ಆಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ನಟ ರಜನಿಕಾಂತ್ ಅವರ ತಮಿಳು ಸಿನಿಮಾ 'ಜೈಲರ್' ಮೂಲಕ ಶಿವಣ್ಣ ಮಿಂಚಿದ್ದರು, ಈಗ ರಜನಿಕಾಂತ್ ಅಳಿಯ ಧನುಷ್ ಸಿನಿಮಾದಲ್ಲೂ ಹೊಸ ಸಂಚಲನಕ್ಕೆ ಸಿದ್ಧರಾಗಿದ್ದಾರೆ.
ನಿನ್ನೆ ರಿಲೀಸ್ ಆಗಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಟ್ರೇಲರ್‌ನಲ್ಲಿ ನಟ ಶಿವಣ್ಣ ಕೂಡ ಕಮಾಲ್ ಮಾಡಿದ್ದಾರೆ. ಬಹುನಿರೀಕ್ಷಿತ ದಕ್ಷಿಣ ಭಾರತದ ಈ ಸಿನಿಮಾಗೆ ಇಡೀ ಭಾರತವೇ ಕಾಯುತ್ತಿದೆ. ಹೀಗಾಗಿ ಸಂಕ್ರಾಂತಿ ಹಬ್ಬಕ್ಕೆ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಮಾಡಲು ಸಿನಿಮಾ ತಂಡ ತಯಾರಿ ನಡೆಸಿದೆ. ಇದರ ಮುಂದುವರಿದ ಭಾಗವಾಗಿ, 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಟ್ರೇಲರ್ ರಿಲೀಸ್ ಮಾಡಿದೆ ಸಿನಿಮಾ ತಂಡ. ಇನ್ನ ಇದೀಗ ಟ್ರೇಲರ್ ರಿಲೀಸ್ ಮಾಡಿರುವ 'ಕ್ಯಾಪ್ಟನ್ ಮಿಲ್ಲರ್' ಟೀಂ ಕಮಾಲ್ ಮಾಡುತ್ತಿದೆ.

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ ಆಗಿದ್ದು ಕನ್ನಡ, ತಮಿಳು, ತೆಲುಗು & ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಅರುಣ್ ಮಾಥೇಶ್ವರನ್ ಸಿನಿಮಾ ನಿರ್ದೇಶಿಸಿದ್ದರೆ, ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಥೆ ಆಗಿದೆ ಈ 'ಕ್ಯಾಪ್ಟನ್ ಮಿಲ್ಲರ್'. ಹೀಗೆ ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ. ಟ್ರೇಲರ್ ಬಗ್ಗೆ ಕೂಡ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಸಮಯದಲ್ಲಿ ನಟ ಶಿವಣ್ಣ ಅವರ ಎಂಟ್ರಿ ಸೀನ್ ಕಮ್ಮಿ ಆಯ್ತು ಅನ್ನೋ ಮಾತು, ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಹೀಗಿದ್ದರೂ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಹೇಗಿದೆ ಗೊತ್ತಾ ಮಿಲ್ಲರ್ ಟ್ರೇಲರ್?
ಬ್ರಿಟೀಷ್ ಕಾಲದಲ್ಲಿ ನಡೆಯುವ ಕಥೆ ಇದಾಗಿರುವ ಹಿನ್ನೆಲೆ, ವಿಭಿನ್ನವಾಗಿ ನಿರ್ಮಿಸಲಾಗಿದೆ. ತನ್ನ ಗ್ರಾಮ ಕಬಳಿಸಲು ಬರುವ ಬ್ರಿಟೀಷ್ ಆಡಳಿತದ ಸೈನಿಕರು & ಅಧಿಕಾರಿಗಳ ಸಂಹರಿಸುವ, ವಿಭಿನ್ನ ಲುಕ್‌ನಲ್ಲಿ ಧನುಷ್ ಕಾಣಿಸಿಕೊಂಡಿದ್ದು ಡೆವಿಲ್ ಲುಕ್‌ನಲ್ಲಿ ಅವ್ರು ಈಗ ಗನ್ ಹಿಡಿದು ಟ್ರೇಲರ್‌ನಲ್ಲಿ ಅಬ್ಬರಿಸಿದ್ದಾರೆ. ಇಡೀ ಟ್ರೇಲರ್ ನಲ್ಲಿ ಗ್ರಾಮಕ್ಕಾಗಿ ಹೋರಾಡುವ ಜನರು ಮತ್ತು ಅವರ ಅಸಹಾಯಕತೆ ತೋರಿಸಲಾಗಿದ್ದು, ತನ್ನ ತನ ಉಳಿಸಲು ಯಾವ ಹಂತಕ್ಕೂ ಹೋಗಿ ಹೋರಾಡಬಲ್ಲೆ ಎಂಬ ಅಂಶವನ್ನ ಸಿನಿಮಾ ಕಥೆ ತಿಳಿಸುತ್ತದೆ.
ಇನ್ನು ಈ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಧನುಷ್ ಪ್ರಿಯಾಂಕಾ ಅರುಲ್ ಮೋಹನ್, ನಟ & ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್, ಕಿಶನ್, ಜಾನ್ ಕೊಕ್ಕೆನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜ. 12 ರಂದು ಸಿನಿಮಾ ತೆರೆ ಕಾಣಲಿದ್ದು, ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸತ್ಯ ಜ್ಯೋತಿ ಫಿಲಮ್ಸ್ ಈ ಸಿನಿಮಾ ನಿರ್ಮಾಣ ಮಾಡಿದೆ.












Click it and Unblock the Notifications