ಅಬ್ಬಬ್ಬಾ.. ಶಿವಣ್ಣ.. ಶಿವಣ್ಣ.. ಶಿವಣ್ಣ.. ಇದು ನಾವ್ ಹೇಳ್ತಿರೋದಲ್ಲ ತಮಿಳು ಸಿನಿಮಾ ಪ್ರೇಕ್ಷಕರು ಹೇಳಿದ್ದು!
ಹ್ಯಾಟ್ರಿಕ್ ಹೀರೋ ಹಾಗೂ ಸೆಂಚ್ಯುರಿ ಸ್ಟಾರ್ ಅಂತಾ ಕನ್ನಡಿಗರಿಂದ ಬಿರುದು ಪಡೆದಿರುವ ನಟ ಶಿವರಾಜ್‌ಕುಮಾರ್ ಈಗ, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಅದರಲ್ಲೂ ಸೂಪರ್ ಸ್ಟಾರ್ ರಜನಿಕಾಂತ್‌ರ ಜೈಲರ್ ಸಿನಿಮಾದಲ್ಲಿ ಶಿವಣ್ಣನ ನಟನೆ ಕಂಡಿದ್ದ ಇಡೀ ಸಿನಿಮಾ ರಂಗ ಎದ್ದು ನಿಂತು ಚಪ್ಪಾಳೆ ತಟ್ಟಿತ್ತು. ಇದೀಗ ಮತ್ತೊಂದು ತಮಿಳು ಸಿನಿಮಾ ಮೂಲಕ ಶಿವಣ್ಣ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.
ಹೌದು, ನಟ ಶಿವಣ್ಣ ಅಬ್ಬರ ಬಲು ಜೋರಾಗಿದೆ. ಇಷ್ಟು ದಿನಗಳ ಕಾಲ ಕನ್ನಡಿಗರಿಗೆ ಈ ನಟ ಮನರಂಜನೆಯ ರಸದೌತಣ ಉಣಬಡಿಸಿದ್ದರು. ಇದೀಗ ಹೊರ ರಾಜ್ಯಗಳ ಬೇರೆ ಬೇರೆ ಭಾಷೆಯಲ್ಲಿ ಕೂಡ ನಟ ಶಿವಣ್ಣ ಅವರ ಹವಾ ಜೋರಾಗಿದೆ. ಅದರಲ್ಲೂ ರಜನಿಕಾಂತ್‌ರ ಅಳಿಯನ ಸಿನಿಮಾದಲ್ಲಿ ಇದೀಗ ನಟ ಶಿವಣ್ಣ ಅಬ್ಬರಿಸಿದ್ದಾರೆ. ಈ ಮೂಲಕ ತಮಿಳುನಾಡು ಸಿನಿಮಾ ಪ್ರೇಕ್ಷಕ ನಟ ಶಿವಣ್ಣ ಅವರ ನಟನೆಗೆ ಫಿದಾ ಆಗಿದ್ದಾರೆ. ಹಾಗಾದರೆ ದೇಶಾದ್ಯಂತ ರಿಲೀಸ್ ಆಗಿರುವ 'ಕ್ಯಾಪ್ಟನ್ ಮಿಲ್ಲರ್'ಗೆ ಹೇಗಿದೆ ಗೊತ್ತಾ ರೆಸ್ಪಾನ್ಸ್?

ಶಿವಣ್ಣ.. ಶಿವಣ್ಣ.. ಶಿವಣ್ಣ..
ಯೆಸ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ & ರಜನಿಕಾಂತ್ ಅಳಿಯ ಧನುಷ್‌ರ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಸೆಂಚ್ಯುರಿ ಸ್ಟಾರ್ ಶಿವಣ್ಣ ಅವರು, ಜಗತ್ತಿನಾದ್ಯಂತ ತಮ್ಮ ಅಬ್ಬರ ತೋರಿಸುತ್ತಿದ್ದಾರೆ. ಶಿವಣ್ಣ ಅವರ ಸಿನಿಮಾ ಕ್ರೇಜ್ ನೋಡಿದ ಭಾರತೀಯರು ಫಿದಾ ಆಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ನಟ ರಜನಿಕಾಂತ್ ಅವರ ತಮಿಳು ಸಿನಿಮಾ 'ಜೈಲರ್' ಮೂಲಕ ಶಿವಣ್ಣ ಮಿಂಚಿದ್ದರು, ಈಗ ರಜನಿಕಾಂತ್ ಅಳಿಯ ಧನುಷ್ ಸಿನಿಮಾದಲ್ಲೂ ಹೊಸ ಸಂಚಲನಕ್ಕೆ ಸಾಕ್ಷಿಯಾಗಿದ್ದಾರೆ. ಇಂದು ಸಿನಿಮಾ ನೋಡಿ ಹೊರಗೆ ಬಂದ ಪ್ರೇಕ್ಷಕರು ಬರೀ ಶಿವಣ್ಣ ಅವರ ಹೆಸರನ್ನೇ ಹೇಳುತ್ತಿದ್ದಾರೆ. ಹಾಗೇ ಅವರ ನಟನೆಗೆ ಫಿದಾ ಆಗಿದ್ದಾರೆ.
ಒನ್ & ಓನ್ಲಿ ಹ್ಯಾಟ್ರಿಕ್ ಹೀರೋ
ಬ್ರಿಟೀಷರ ಕಾಲದಲ್ಲಿ ನಡೆಯುವ ಕಥೆ ಇದಾದ ಹಿನ್ನೆಲೆ ವಿಭಿನ್ನವಾಗಿ ನಿರ್ಮಿಸಲಾಗಿದೆ. ತನ್ನ ಗ್ರಾಮ ಕಬಳಿಸಲು ಬರುವ ಬ್ರಿಟೀಷ್ ಆಡಳಿತದ ಸೈನಿಕರು-ಅಧಿಕಾರಿಗಳ ಸಂಹರಿಸುವ ವಿಭಿನ್ನ ಲುಕ್‌ನಲ್ಲಿ ಧನುಷ್ ಕಾಣಿಸಿಕೊಂಡಿದ್ದು, ಡೆವಿಲ್ ಲುಕ್‌ನಲ್ಲಿ ಗನ್ ಹಿಡಿದು ಮಿಂಚಿದ್ದಾರೆ. ಈ ನಡುವೆ ಗ್ರಾಮಕ್ಕಾಗಿ ಹೋರಾಡುವ ಜನರು ಮತ್ತು ಅವರ ಅಸಹಾಯಕತೆ ತೋರಿಸಲಾಗಿದ್ದು, ತಮ್ಮ ತನ ಉಳಿಸಲು ಯಾವ ಹಂತಕ್ಕೂ ಹೋಗಿ ಹೋರಾಡಬಲ್ಲೆ ಎಂಬ ಅಂಶವನ್ನ ಸಿನಿಮಾ ಕಥೆ ತಿಳಿಸುತ್ತದೆ. ಅದರಲ್ಲೂ ನಟ ಶಿವಣ್ಣ ಅವರ ನಟನೆಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಅಬ್ಬರ
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ ಆಗಿದ್ದು ಕನ್ನಡ, ತಮಿಳು, ತೆಲುಗು & ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗಿದೆ. ಇನ್ನು ಈ ಸಿನಿಮಾಗೆ ಅರುಣ್ ಮಾಥೇಶ್ವರನ್ ಅವರು ಡೈರೆಕ್ಷನ್ ಮಾಡಿದ್ದಾರೆ. ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ. ಈ ಹಿಂದೆ ಟ್ರೇಲರ್ ಬಗ್ಗೆ ಕೂಡ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಸಿನಿಮಾ ನೋಡಿ ಹೊರಗಡೆ ಬಂದ ಅಭಿಮಾನಿಗಳು ಫಿದಾ ಆಗಿ ಮಾತನಾಡಿದ್ದಾರೆ.

ಒಟ್ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಸಿನಿಮಾ ಸೂಪರ್ ಹಿಟ್ ಆಗಿದೆ. ಮತ್ತೊಂದು ತಮಿಳು ಸಿನಿಮಾ ಮೂಲಕ ದಕ್ಷಿಣ ಭಾರತದಲ್ಲಿ ನಟ ಶಿವಣ್ಣ ಅವರು ಹವಾ ಎಬ್ಬಿಸಿದ್ದು ಸಂಚಲನ ಸೃಷ್ಟಿ ಮಾಡಿದ್ದಾರೆ. ಹಾಗೇ ಈ ಹವಾ ಬಾಲಿವುಡ್‌ಗೆ ಕೂಡ ಎಂಟ್ರಿ ಕೊಡುತ್ತೆ ಅಂತಾ ಅಭಿಮಾನಿಗಳು ಹೇಳುತ್ತಿದ್ದು, 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಶಿವಣ್ಣ ಮಯವೇ ಆಗಿ ಹೋಗಿದೆ. ಜೈಲರ್ ಬಳಿಕ ಮತ್ತೊಮ್ಮೆ ಶಿವಣ್ಣ ಭರ್ಜರಿ ಸಿನಿಮಾ ನೀಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 60 ಕ್ರಾಸ್ ಆಗಿದ್ರೂ, ಇಂದಿಗೂ 16 ವರ್ಷದ ಚಿರ ಯುವಕರಂತೆ ನಟನೆ ಮಾಡ್ತಿದ್ದಾರೆ. ಅದರಲ್ಲೂ ನಟ ಶಿವಣ್ಣ ಅವರ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಈಗ ಶಿವರಾಜ್‌ಕುಮಾರ್ ಅವರ 2ನೇ ತಮಿಳು ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸ್ ಆಫಿಸ್‌ನಲ್ಲಿ ಕೂಡ ಅಬ್ಬರಿಸಿದೆ.












Click it and Unblock the Notifications