ಶಿವರಾಜ್‌ಕುಮಾರ್ ಸಿನಿಮಾ ಕ್ಷೇತ್ರ ಬಿಟ್ಟು ಹೋಗ್ತಾರಾ? ಏನ್ ಹೇಳಿದ್ರು ನಟ ಶಿವಣ್ಣ?
1986ರಲ್ಲಿ ಆನಂದ್ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟು, ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿದ್ದ ನಟ ಶಿವಣ್ಣ ಇವತ್ತಿಗೂ ಸ್ಟ್ರಾಂಗ್. ಅದರಲ್ಲೂ ಈ ದಿನದಲ್ಲೂ ಶಿವರಾಜ್‌ಕುಮಾರ್ ಅವರ ಸಿನಿಮಾಗಳು ಸುಲಭವಾಗಿ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರುತ್ತವೆ. ಅದೇ ರೀತಿ ಇದೀಗ ಶಿವಣ್ಣ ಅಭಿನಯದ ತಮಿಳು ಸಿನಿಮಾ ಕೂಡ, ಭಾರಿ ದೊಡ್ಡ ಅಬ್ಬರ ತೋರುತ್ತಿದೆ. ಆದರೆ ಈ ಸಮಯದಲ್ಲಿ ನಟ ಶಿವಣ್ಣ ಸಿನಿಮಾ ಕ್ಷೇತ್ರ ಬಿಟ್ಟು ಹೋಗ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಅಂದಹಾಗೆ ನಟ ಶಿವಣ್ಣ ಹತ್ತಿರ ಹತ್ತಿರ ಸುಮಾರು 40 ವರ್ಷದಿಂದ ಸಿನಿಮಾ ಜಗತ್ತಿಗೆ ದೊಡ್ಡ ಕಲಾ ಸೇವೆ ಒದಗಿಸಿದ್ದಾರೆ. ಅದ್ರಲ್ಲೂ ಬಾಲ ನಟನಾಗಿ, ತಮ್ಮ ತಂದೆಯಾದ ವರನಟ ಡಾ.ರಾಜ್‌ಕುಮಾರ್ ಅವರ ಜೊತೆಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು ಹ್ಯಾಟ್ರಿಕ್ ಹೀರೋ. ಮುಂದೆ ಸ್ವತಂತ್ರ ನಟನಾಗಿ, ಶಿವಣ್ಣ ಹೀರೋ ಆಗಿ ಮಿಂಚಿದ್ರು. ಆಗಿನ ಹೊಸ ತಲೆಮಾರಿನಿಂದ ಹಿಡಿದು, ಈಗಿನ ಹೈಟೆಕ್ ಹುಡುಗರ ತನಕ ಶಿವಣ್ಣನ ಸಿನಿಮಾಗೆ ತಲೆಬಾಗದೆ ಇರುವವರು ಇಲ್ಲ. ಹೀಗಿದ್ದಾಗ ನಟ ಶಿವಣ್ಣ ಸಿನಿಮಾ ಲೋಕ ಬಿಟ್ಟು, ನಿವೃತ್ತಿ ಪಡೆಯುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಶಿವಣ್ಣ ಉತ್ತರ ಕೂಡ ನೀಡಿದ್ದಾರೆ.

ಸಿನಿಮಾ ಕ್ಷೇತ್ರ ಬಿಡ್ತಾರಾ ಶಿವಣ್ಣ?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 60 ಕ್ರಾಸ್ ಆಗಿದ್ದರೂ ಇಂದಿಗೂ 16 ವರ್ಷದ ಚಿರ ಯುವಕರಂತೆ ನಟನೆ ಮಾಡ್ತಾರೆ. ನಟ ಶಿವಣ್ಣರ ಸಿನ್ಮಾ ನೋಡಲು ಅವರ ಫ್ಯಾನ್ಸ್ ಭಾರಿ, ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಇದು ಕರ್ನಾಟಕಕ್ಕೆ ಮಾತ್ರ, ಸೀಮಿತ ಆಗಿಲ್ಲ. ಈ ಕ್ರೇಜ್ ಈಗ ತಮಿಳುನಾಡಿಗೆ ಕೂಡ ಹಬ್ಬಿದೆ. ಶಿವರಾಜ್‌ಕುಮಾರ್ ಅವರ 2ನೇ ತಮಿಳು ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫಿಸ್ ಶೇಕ್ ಆಗಿದೆ. ಇದರ ಜೊತೆಗೆ, ಥಿಯೇಟ್ ಒಳಗೆ & ಹೊರಗೆ ಬರೀ ಶಿವರಾಜ್‌ಕುಮಾರ್ ಹೆಸರು ಅಬ್ಬರಿಸಿದೆ. ಹೀಗಿದ್ದಾಗ ನಟ ಶಿವಣ್ಣ ಅವರ ಸಿನಿಮಾ ನಿವೃತ್ತಿ ಮಾತು ಸಂಚಲನ ಸೃಷ್ಟಿ ಮಾಡಿದೆ! ಹಾಗಾದರೆ ಶಿವಣ್ಣ ಏನಂದ್ರು? ಮುಂದೆ ಓದಿ.
ಸಿನಿಮಾ ಬಿಟ್ಟು ಹೋಗ್ತಾರಾ ಶಿವಣ್ಣ?
ಅಷ್ಟಕ್ಕೂ ಶಿವರಾಜ್‌ಕುಮಾರ್ ಅವರ 2ನೇ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆಗಿರುವ 'ಕ್ಯಾಪ್ಟನ್ ಮಿಲ್ಲರ್'ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗುವಾಗ ತಮಿಳು ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ, ನಟ ಶಿವಣ್ಣ ಅವರಿಗೆ ಭಾರಿ ಕಠಿಣ ಪ್ರಶ್ನೆ ಎದುರಾಗಿತ್ತು. ಅದು ಏನಂದ್ರೆ ನಟ ಶಿವಣ್ಣ ಅವರಿಗೆ ಸಿನಿಮಾ ಬೇಜಾರ್ ಆಗಿ ಯಾವತ್ತಾದರೂ ಸಿನಿಮಾದ ಸಹವಾಸವೇ ಸಾಕು ಅಂತಾ ಅನಿಸಿದೆಯಾ? ಅಂತಾ ಸಂದರ್ಶಕ ಪ್ರಶ್ನೆ ಕೇಳಿದ್ರು. ಅದಕ್ಕೆ ಹ್ಯಾಟ್ರಿಕ್ ಹೀರೋ ಹೇಳಿದ್ದೇನು ಗೊತ್ತೆ?
ಸಿನಿಮಾ ನನ್ನ ಉಸಿರು ಎಂದ ಶಿವಣ್ಣ
ಹೌದು, ನಟ ಶಿವಣ್ಣ ಅವರಿಗೆ ಸಿನಿಮಾ ರಂಗ ಬಿಟ್ಟು ಹೋಗುವ ಪ್ರಶ್ನೆ ಎದುರಾಗಿದ್ದೇ ತಡ ಖಡಕ್ ಉತ್ತರ ನೀಡಿದ್ದಾರೆ. ನನಗೆ ಸಿನಿಮಾ ಕ್ಷೇತ್ರವನ್ನ ಬಿಟ್ಟು ಹೋಗುವ ಯಾವ ಚಿಂತನೆ ಕೂಡ ಇಲ್ಲ. ನನ್ನ ಉಸಿರು & ಕನಸು ಹಾಗೂ ಜೀವನ ಎಲ್ಲವೂ ಸಿನಿಮಾನೇ ಆಗಿದೆ ಎಂದಿದ್ದಾರೆ ನಟ ಶಿವಣ್ಣ. ಈ ಮೂಲಕ ಸಿನಿಮಾ ಕುರಿತು ತಮಗೆ ಇರುವಂತಹ, ಪ್ರೀತಿ & ಗೌರವ ತಿಳಿಸಿದ್ದಾರೆ ದೊಡ್ಮನೆ ದೊಡ್ಡ ಮಗ ನಟ ಶಿವರಾಜ್‌ಕುಮಾರ್.
ಒಟ್ನಲ್ಲಿ ನಟ ಶಿವರಾಜ್‌ಕುಮಾರ್ ತಮ್ಮ ಕಲಾ ಸೇವೆಯನ್ನು ಇನ್ನೂ ಹತ್ತಾರು ವರ್ಷ ಇದೇ ರೀತಿ ಮುಂದುವರಿಸಲಿದ್ದಾರೆ. ಹಾಗೇ ಅಭಿಮಾನಿಗಳಿಗೆ ಡಿಫರೆಂಟ್, ಡಿಫರೆಂಟ್ ಸಿನಿಮಾಗಳನ್ನು ನೀಡಲಿದ್ದಾರೆ ಅನ್ನೋದು ಪಕ್ಕಾ. ಅದರಲ್ಲೂ ಶಿವಣ್ಣ ಈಗ ನೆರೆಯ ರಾಜ್ಯ, ಅಂದ್ರೆ ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಅಬ್ಬರಿಸುತ್ತಿದ್ದಾರೆ. ಹೀಗಾಗಿ ಕನ್ನಡದ ಹ್ಯಾಟ್ರಿಕ್ ಹೀರೋ ಅಬ್ಬರ ಎಲ್ಲೆಲ್ಲೂ ಹಬ್ಬಿದೆ ಹಾಗೂ ಜೋರಾಗಿದೆ.












Click it and Unblock the Notifications