ಶಿವರಾಜ್‌ಕುಮಾರ್ ಕಾವೇರಿ ಹೋರಾಟದ ಬಗ್ಗೆ ಹೇಳಿದ್ಧೇನು ಗೊತ್ತೆ?
ಕಾವೇರಿ ವಿಚಾರ ಬಂತು ಅಂದ್ರೆ ಸಾಕು ಕರ್ನಾಟಕ & ತಮಿಳುನಾಡು ನಡುವೆ ಘೋರ ಕಿತ್ತಾಟ ಶುರುವಾಗುತ್ತೆ. ದಕ್ಷಿಣ ಭಾರತದ 2 ನೆರೆಯ ರಾಜ್ಯಗಳ ನಡುವೆ ಈ ವಿಚಾರಕ್ಕೆ ಫೈಟಿಂಗ್ ಶುರುವಾಗಿ, ಬೆಂಕಿಯೇ ಹೊತ್ತಿಕೊಳ್ಳುತ್ತದೆ. ಆದರೆ ಪದೇ ಪದೇ ಸಿನಿಮಾದ ನಟರು & ನಟಿಯರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲ್ಲ ಎಂಬ ಆರೋಪವನ್ನ ಕನ್ನಡಪರ ಸಂಘಟನೆಗಳು ಮಾಡ್ತವೆ. ಇದೀಗ ಹ್ಯಾಟ್ರಿಕ್ ಹೀರೋ ಶಿವಣ್ಣ, ಕಾವೇರಿ ನೀರು ಹೋರಾಟದ ಬಗ್ಗೆ ತಮಿಳುನಾಡಿನಲ್ಲಿ ನಿಂತು ಮಾತನಾಡಿದ್ದಾರೆ!
ಹೌದು, ಕಾವೇರಿ ನದಿಯ ನೀರು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಪಾಲಿಗೆ ಅಮೃತ ಸಮಾನ. ಹೀಗಾಗಿಯೇ ಕಾವೇರಿ ನೀರಿಗಾಗಿ ಎರಡೂ ರಾಜ್ಯಗಳ ನಡುವೆ ಭಾರಿ ದೊಡ್ಡ ಕದನ ಶುರುವಾಗುತ್ತೆ. ದೇಶದಲ್ಲೂ ಕಾವೇರಿ ಹೋರಾಟ ಪದೇ ಪದೇ ದೊಡ್ಡ ಬಿರುಗಾಳಿ ಎಬ್ಬಿಸುತ್ತದೆ. ಇಷ್ಟೆಲ್ಲಾ ಗಲಾಟೆಗೆ ಕಾವೇರಿ ನದಿ ನೀರು ಕಾರಣವಾಗುತ್ತಿರುವ ಸಮಯದಲ್ಲೇ, ನಟ ಶಿವರಾಜ್‌ಕುಮಾರ್ ಇದೀಗ ಕಾವೇರಿ ನದಿ ನೀರು ಕಿತ್ತಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದು ತಮಿಳು ಭಾಷೆಯಲ್ಲೇ!

ರಾಜಕೀಯ ಮಾಡಬೇಡಿ ಪ್ಲೀಸ್!
ಅಂದಹಾಗೆ ನಟ ಶಿವಣ್ಣ ಹಲವು ಬಾರಿ ಕಾವೇರಿ ನೀರಿನ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು, ಪ್ರತಿಭಟನೆ ನಡೆಸಿದ್ದಾರೆ. ಹೀಗಿದ್ದಾಗ ನಟ ಶಿವಣ್ಣ ಪ್ರತಿ ಬಾರಿ ಕೂಡ ಕಾವೇರಿ ವಿಚಾರದಲ್ಲಿ ಶಾಂತಿ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಮತ್ತೊಮ್ಮೆ ಕಾವೇರಿ ವಿವಾದವನ್ನ ಪ್ರಸ್ತಾಪ ಮಾಡಿರುವ ಶಿವಣ್ಣ ಅವರು, ನಿಸರ್ಗ ಎಲ್ಲರ ಸ್ವತ್ತು ಭೂಮಿ ಎಲ್ಲಾ ಮನುಷ್ಯರಿಗೂ ಸಮಾನ. ಹೀಗಿದ್ದಾಗ ಅದನ್ನು ನಾವು ಅನುಸರಿಸಬೇಕು. ಕಾವೇರಿ ವಿಚಾರದಲ್ಲಿ ಹೊಂದಾಣಿಕೆ ಅಗತ್ಯ ಇದೆ, ಆದರೆ ರಾಜಕೀಯ ಅನಗತ್ಯ ಎಂದಿದ್ದಾರೆ ನಟ ಶಿವರಾಜ್‌ಕುಮಾರ್.
ತಮಿಳು ಭಾಷೆಯಲ್ಲೇ ಕಾವೇರಿ ಮಾತು!
ನಟ ಶಿವಣ್ಣ ಅವರ, 2ನೇ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್‌ಗೆ ಸಿದ್ಧವಾಗಿ ನಿಂತಿದೆ. ಹೀಗಿದ್ದಾಗ ತಮಿಳು ಖಾಸಗಿ ಸಂದರ್ಶನದ ವೇಳೆ ನಟ ಶಿವಣ್ಣ ಕಾವೇರಿ ನದಿ ನೀರಿನ ವಿಚಾರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಮೂಲಕ ನದಿ ನೀರಿನ ಸಂಕಷ್ಟ ಎದುರಾದರೆ, ಹೊಂದಾಣಿಕೆ ಅಗತ್ಯ ಎಂದಿದ್ದಾರೆ. ಹಾಗೇ ಕನ್ನಡ ನಾಡಿನ ಪರವಾಗಿ, ಶಿವಣ್ಣ ಅವರು ತಮಿಳು ಭಾಷೆಯಲ್ಲೇ ಉತ್ತರ ನೀಡಿದ್ದಾರೆ. ಇದೀಗ ಶಿವಣ್ಣ ಅವರ ಈ ಹೇಳಿಕೆ ಎಲ್ಲೆಲ್ಲೂ ವೈರಲ್ ಆಗುತ್ತಿದೆ.

ಶಿವಣ್ಣ ಅವರ 2ನೇ ತಮಿಳು ಸಿನಿಮಾ
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ. ಕನ್ನಡ, ತಮಿಳು, ತೆಲುಗು ಮತ್ತೆ ಹಿಂದಿ ಹೀಗೆ ಎಲ್ಲ ಭಾಷೆಯಲ್ಲೂ ರಿಲೀಸ್ ಆಗ್ತಿದೆ. ಅರುಣ್ ಮಾಥೇಶ್ವರನ್ ಸಿನಿಮಾ ಡೈರೆಕ್ಷನ್‌ನ ಮಾಡಿದ್ರೆ ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಥೆ ಆಗಿದೆ 'ಕ್ಯಾಪ್ಟನ್ ಮಿಲ್ಲರ್'. ಹೀಗೆ ಇದೇ ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ. ಹಾಗೇ ಇದೇ ಸಮಯದಲ್ಲಿ ನಟ ಶಿವಣ್ಣ ಅವರು ಕಾವೇರಿ ವಿವಾದದ ಬಗ್ಗೆಯೂ ಮಾತನಾಡಿದ್ದಾರೆ.
ಒಟ್ನಲ್ಲಿ ನಟ ಶಿವಣ್ಣ ಈಗ ತಮಿಳು ಚಿತ್ರರಂಗದಲ್ಲಿ ಹೊಸ ಬಿರುಗಾಳಿ ಎಬ್ಬಿಸ್ತಿದ್ದಾರೆ. ತಮ್ಮ ಅತ್ಯದ್ಭುತ ನಟನೆ ಮೂಲಕ ತಮಿಳು ಪ್ರೇಕ್ಷಕರನ್ನ ಸೆಳೆಯುತ್ತಿದ್ದಾರೆ. ಹೀಗಾಗಿ, ನಟ ಶಿವಣ್ಣ ಅವರಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ತಮಿಳು, ತೆಲುಗು ಸೇರಿ ವಿವಿಧ ಭಾಷೆಗಳಲ್ಲಿ ನಟಿಸಲು ಆಫರ್ ಬರುತ್ತಿವೆ. ಹೀಗಾಗಿ ನಟ ಶಿವಣ್ಣ ಕನ್ನಡಿಗರ & ಕನ್ನಡ ನೆಲದ ಕಂಪನ್ನ ಹೊರ ರಾಜ್ಯದಲ್ಲೂ ಹರಡುತ್ತಿದ್ದಾರೆ. ಜೈಲರ್ ಸಿನಿಮಾದಲ್ಲಿ ಕೂಡ ನಟ ಶಿವಣ್ಣ ಕನ್ನಡದಲ್ಲೇ ಮಾತನಾಡಿದ್ದರು. ಈ ಮೂಲಕ ತಮಿಳು ಚಿತ್ರದಲ್ಲಿ ಕೂಡ ಕನ್ನಡ ಭಾಷೆಯ ಕಂಪನ್ನು ಸಾರಿದ್ದರು.












Click it and Unblock the Notifications