ಕಿಚ್ಚ ಸುದೀಪ್ + ದೂದ್ ಪೇಡ ದಿಗಂತ್ ಸಿನಿಮಾ = ಭರ್ಜರಿ ಟೀಸರ್?
ನಟ ಕಿಚ್ಚ ಸುದೀಪ್ ಕನ್ನಡ ಸಿನಿಮಾ ರಂಗದಲ್ಲಿ ಹಲವರ ಸಿನಿಮಾಗಳಿಗೆ ಸಾಥ್ ನೀಡಿದ್ದು ಹೊಸಬರ ಬೆನ್ನಿಗೆ ನಿಲ್ಲುತ್ತಾರೆ. ಹೀಗೆ ಹಳಬರ ಸಿನಿಮಾಗೂ ನಟ ಕಿಚ್ಚ ಸುದೀಪ್ ಅವರು ಕೈಜೋಡಿಸುತ್ತಿದ್ದು, ಮುಂಗಾರು ಮಳೆ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತ ಎನಿಸಿಕೊಂಡಿದ್ದ, ದೂದ್ ಪೇಡ ದಿಗಂತ್ ಹೊಸ ಸಿನಿಮಾಗೆ ಸುದೀಪ್ ಜೊತೆಯಾಗಿದ್ದಾರೆ.
ಹೌದು ಎಡಗೈ ಬಳಸುವವರ ಕಥೆ ಆಧಾರಿಸಿರುವ ಸಿನಿಮಾ 'ಎಡಗೈಯೇ ಅಪಘಾತಕ್ಕೆ ಕಾರಣ' ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಟೀಸರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಗುರುವಾರ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಟೀಸರ್ ಅನ್ನು ಕಿಚ್ಚ ಸುದೀಪ್ ಅವರು ರಿಲೀಸ್ ಮಾಡಲಿದ್ದಾರೆ. ಈ ಮೂಲಕ ದಿಗಂತ್ ಸಿನಿಮಾಗೆ ನಟ ಕಿಚ್ಚ ಸುದೀಪ್ ಅವರು ಸಾಥ್ ಕೊಡಲಿದ್ದಾರೆ. ಹೀಗಾಗಿ ಅಭಿಮಾನಿಗಳ ಕುತೂಹಲ ಕೂಡ ಈಗ ಹೆಚ್ಚಾಗಿದೆ.

ಸಿನಿಮಾ ಟೀಂ ಹೇಗಿದೆ ಗೊತ್ತಾ?
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ & ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆ ಸುತ್ತ ಹೆಣೆದ ಚಿತ್ರ ಇದು. ದೂದ್ ಪೇಡ ದಿಗಂತ್ ಅವ್ರು ನಾಯಕನಾಗಿ ನಟಿಸಿದ್ದು, ದಿಗ್ಗಿಗೆ ಜೋಡಿಯಾಗಿ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹೊಸ ವರ್ಷಕ್ಕೆ ಸಿನಿಮಾ ರಿಲೀಸ್?
ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್‌ನ ಅಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್ ಇದ್ದರೆ ರಾಹುಲ್ ಪಾರ್ವತಿಕರ್ ಮತ್ತೆ ಶ್ರೀಪಾದ್ ಜೋಶಿ ಸಂಭಾಷಣೆ ಇದೆ. ಒಟ್ನಲ್ಲಿ ಇನ್ನೇನು ಹೊಸ ವರ್ಷಕ್ಕೆ ದಿಗಂತ್ ಅವರ ಹೊಸ ಸಿನಿಮಾವು ರಿಲೀಸ್ ಆಗಲಿದ್ದು ನಾಳೆ ಅವರ ಫ್ಯಾನ್ಸ್‌ಗೂ ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ. ಹೀಗಾಗಿ ಟೀಸರ್ ಕಣ್ತುಂಬಿಕೊಳ್ಳಲು ನಾಳೆ ತನಕ ಕಾದು ನೋಡಬೇಕಿದೆ.












Click it and Unblock the Notifications