ಚಿಕ್ಕಣ್ಣ ಅವರ ಅಪ್ಪ ಮಗನಿಗೆ ಏನೇ ಮಾಡಿದ್ರೂ ಹೊಡಿತಾ ಇದ್ರಂತೆ!

ಚಿಕ್ಕಣ್ಣ ಎಷ್ಟೆಲ್ಲಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಹೀಗೆ ಪ್ರತಿ ಹಂತದಲ್ಲೂ ನಟ ಚಿಕ್ಕಣ್ಣ ಕಷ್ಟಗಳನ್ನು ಎದುರಿಸಿದ್ದ ಕಾರಣಕ್ಕೆ ಇಂದು ಹೀರೋ ಆದರೂ ಅವರು ಒಂಚೂರು ಬದಲಾಗಿಲ್ಲ. ಇಂತಿಪ್ಪ ಚಿಕ್ಕಣ್ಣ ಅವರು ತಮ್ಮ ತಂದೆಯ ಬಗ್ಗೆ ಮತ್ತು ತಮ್ಮ ಮನೆಯ ಪರಿಸ್ಥಿತಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದರಲ್ಲೂ ಚಿಕ್ಕಣ್ಣ ಅವರ ಅಪ್ಪ ಮಗನಿಗೆ ಏನೇ ಮಾಡಿದ್ರೂ ಹೊಡಿತಾ ಇದ್ರಂತೆ! ಯಾಕೆ ಗೊತ್ತೆ?

ಚಿಕ್ಕಣ್ಣ ಅವರು ಸಿನಿಮಾ ಇಂಡಸ್ಟ್ರಿಗೆ ಬರೋದಕ್ಕೂ ಮೊದಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಅದ್ರಲ್ಲೂ ಅವರ ಬಾಲ್ಯದ ದಿನಗಳಲ್ಲಿ ಚಿಕ್ಕಣ್ಣ ಅವರ ಕುಟುಂಬದ ಸ್ಥಿತಿ ಕೂಡ ಸಮಸ್ಯೆಗಳ ಸಮುದ್ರವೇ ಆಗಿತ್ತು. ಹೀಗಾಗಿ ಚಿಕ್ಕಣ್ಣ ಓದುವ ವಯಸ್ಸಿನಲ್ಲಿ ಇದ್ದರೂ ಸಾಲು ಸಾಲು ಸಮಸ್ಯೆಗಳನ್ನ ಎದುರಿಸಿದ್ದರು. ಕೆಲಸ ಮಾಡುತ್ತಲೇ ತಮ್ಮ ಓದನ್ನು ಅವರು ಮುಂದುವರಿಸಿದ್ದರು. ಆದರೂ ಚಿಕ್ಕಣ್ಣ ಅವರ ತಂದೆ ಪದೇ ಪದೇ ಚಿಕ್ಕಣ್ಣ ಅವರ ಮೇಲೆ ಹಲ್ಲೆ ಮಾಡುತ್ತಿದ್ದರಂತೆ, ಕಾರಣ ಏನು ಗೊತ್ತೆ?

Sandalwood Star Chikkanna Explained About His Father

ಚಿಕ್ಕಣ್ಣ ಅವರ ತಂದೆ ಯಾವಾಗಲೂ...

ಅಂದಹಾಗೆ 'ಉಪಾಧ್ಯಕ್ಷ' ಸಿನಿಮಾ ಮೂಲಕ ಇದೀಗ ಚಿಕ್ಕಣ್ಣ ಮಿಂಚುತ್ತಿದ್ದಾರೆ. ಅದ್ರಲ್ಲೂ ಹೀರೋ ಆಗಿ ಮೊದಲ ಎಂಟ್ರಿಯಲ್ಲೇ ಚಿಕ್ಕಣ್ಣ ದೊಡ್ಡ ಹವಾ ಎಬ್ಬಿಸಿದ್ದಾರೆ. ಹೀಗಿದ್ದಾಗಲೇ ತಮ್ಮ ಮೇಲೆ ತಮ್ಮ ತಂದೆ ಕೈ ಎತ್ತುತ್ತಿದ್ದ ದಿನಗಳನ್ನೂ ಚಿಕ್ಕಣ್ಣ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ. ಅದ್ರಲ್ಲೂ ಚಿಕ್ಕಣ್ಣ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಏನೇ ಮಾಡಿ ಬಂದರೂ ಅವರ ಮೇಲೆ ಹಲ್ಲೆ ಮಾಡುತ್ತಿದ್ದರಂತೆ ಅವರ ತಂದೆ. ಹೀಗಾಗಿ ಅವರು ಪದೇ, ಪದೇ ತಂದೆಯಿಂದ ಏಟು ತಿಂದು ದುಖಃ ಪಡುತ್ತಿದ್ದರಂತೆ. ಹಾಗಾದರೆ ಯಾವ ಕಾರಣಕ್ಕೆ, ಚಿಕ್ಕಣ್ಣ ಅವರ ತಂದೆ ಏಟು ಕೊಡುತ್ತಿದ್ದರು ಗೊತ್ತಾ?

ಚಿಕ್ಕಣ್ಣ ಏನೇ ಮಾಡಿದರೂ ಏಟು ಗ್ಯಾರಂಟಿ!

ಹೌದು, ಚಿಕ್ಕಣ್ಣ ಅವರೇ ಹೇಳಿರುವಂತೆ. ಚಿಕ್ಕಣ್ಣ ಅವರ ತಂದೆ ಏನೇ ಮಾಡಿದರೂ ತನ್ನ ಮಗನ ಮೇಲೆ ಕೈ ಎತ್ತುತ್ತಿದ್ದರಂತೆ. ಚಿಕ್ಕಣ್ಣ ಆಟ ಆಡಲು ಹೋದರೂ ಒದೆ, ಶಾಲೆಯಿಂದ ತಡವಾಗಿ ಬಂದರೂ ಒದೆ, ಗೋಲಿ ಆಡಲು ಹೋದರೂ ಒದೆ, ಬುಗುರಿ ಆಡಲು ಹೊರಗೆ ಹೋದರೂ ಒದೆ... ಹೀಗೆ ಚಿಕ್ಕಣ್ಣ ಏನೇ ಮಾಡಿದರೂ ಅವರಿಗೆ ಅವರ ತಂದೆ ಭರ್ಜರಿಯಾಗಿ ಏಟು ಕೊಡುತ್ತಿದ್ದರಂತೆ. ಈ ರೀತಿ ತಂದೆಯಿಂದ ಏಟು ತಿಂದು, ತಿಂದು ಚಿಕ್ಕಣ್ಣ ಕೂಡ ಆ ವಾತಾವರಣಕ್ಕೆ ಹೊಂದಿಕೊಂಡು ಹೋಗಿದ್ದರಂತೆ.

ಕೋಟಿ ಕೋಟಿ ಗಳಿಸಿದ 'ಉಪಾಧ್ಯಕ್ಷ'

ಚಿಕ್ಕಣ್ಣ ಹೀರೋ ಆಗಿ ಅಭಿನಯಿಸಿದ 'ಉಪಾಧ್ಯಕ್ಷ' ಇತ್ತೀಚೆಗೆ ರಿಲೀಸ್ ಆಗಿ, ಅದ್ಧೂರಿಯಾಗಿ ಕೋಟಿ ಕೋಟಿ ಗಳಿಕೆ ಮಾಡಿದೆ. ಈ ಸಮಯದಲ್ಲಿ ಚಿಕ್ಕಣ್ಣ ಅವರ ಬಾಲ್ಯದ ದಿನಗಳು & ಅವರು ಕಷ್ಟಪಟ್ಟು ಮೇಲೆ ಬಂದ ರೀತಿ ಕೂಡ ಕನ್ನಡಿಗರನ್ನ ಸೆಳೆಯುತ್ತಿದೆ ತಮ್ಮ ಮನೆಯ ಕಷ್ಟಗಳನ್ನ ಎದುರಿಸಲು ನಟ ಚಿಕ್ಕಣ್ಣ ಅವರು ತಮ್ಮ ಶಾಲಾ ಶಿಕ್ಷಣ ಮುಗಿಸಿದ ತಕ್ಷಣವೇ, ಗಾರೆ ಕೆಲಸಕ್ಕೂ ಸೇರಿದ್ದರಂತೆ. ಹೀಗೆ ಇಷ್ಟೆಲ್ಲಾ ಕಷ್ಟಪಟ್ಟು ಮೇಲೆ ಬಂದಿರುವ ಚಿಕ್ಕಣ್ಣಗೆ ಇಂದು, ದೊಡ್ಡ ಗೆಲುವು ಕೂಡ ಸಿಕ್ಕಿದೆ. ಹೀರೋ ಆಗಿ ಚಿಕ್ಕಣ್ಣ ಇದೀಗ ಮಿಂಚುತ್ತಿದ್ದಾರೆ.

Sandalwood Star Chikkanna Explained About His Father

ಹೀಗೆ ಚಿಕ್ಕಣ್ಣ ಅವರು ತಮ್ಮ ತಂದೆಯ ಬಗ್ಗೆ ಮತ್ತು ತಮ್ಮ ತಾಯಿಯ ಮಮತೆ ಕುರಿತು, ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ತಮ್ಮ ತಂದೆ ತಮ್ಮನ್ನು ಅಗಲಿ ಹೋದ ಸಂದರ್ಭ ನೆನೆದು ನಟ ಚಿಕ್ಕಣ್ಣ ಭಾವುಕರಾಗಿದ್ದಾರೆ. ಎಷ್ಟೇ ಮಾಡಿದರೂ ತಂದೆ ತಂದೆಯೇ ಅಂತಾ ಅವರು ಹೇಳಿದ್ದಾರೆ. ಅಲ್ಲದೆ ತಾವು ಸಿನಿಮಾದಲ್ಲಿ ಗೆದ್ದು ಬೀಗುವ ಸಮಯಕ್ಕೆ, ತಂದೆಗಾಗಿ ಹೊಸ ಎತ್ತುಗಳನ್ನ ಕೊಂಡು ಕೊಡುವ ಯೋಜನೆಯಲ್ಲಿ ಕೂಡ ನಟ ಚಿಕ್ಕಣ್ಣ ಇದ್ದರಂತೆ. ಆದ್ರೆ ಅಷ್ಟರಲ್ಲಿ ಅವರ ತಂದೆ ವಿಧಿವಶರಾಗಿದ್ದರು ಎಂಬುದು ಚಿಕ್ಕಣ್ಣ ಅವರಿಗೆ ನೋವನ್ನ ತಂದಿತ್ತು.

ಬೆಂಗಳೂರಿನಲ್ಲಿ ಪರದಾಡಿದ್ದ ಚಿಕ್ಕಣ್ಣ

ಹೀಗೆ ಚಿಕ್ಕಣ್ಣ ಆರಂಭದಲ್ಲಿ ಬೆಂಗಳೂರಿಗೆ ಬಂದಾಗ, ಅವರ ಜೀವನದಲ್ಲಿ ಬದಲಾವಣೆಗಳು ಆಗಲೇ ಇಲ್ಲ. ಬೆಂಗಳೂರಿನಲ್ಲಿ 100 & 200 ರೂಪಾಯಿಗೆ ಗಾರೆ ಕೆಲಸ ಮಾಡುತ್ತಾ, ನಟ ಚಿಕ್ಕಣ್ಣ ಪರದಾಡಿದ್ದರು. ಇದನ್ನೆಲ್ಲಾ ತಡೆಯಲು ಆಗದೆ ಮರಳಿ ತಮ್ಮ ಊರಿಗೆ ಹೋಗಿ, ಅಲ್ಲೇ ವಾಸ ಮಾಡಿದ್ದರಂತೆ. ಆದರೆ ಬೆಂಗಳೂರಿನಲ್ಲಿ ಅವರಿಗೆ ಆದ ಅನುಭವದ ಪರಿಣಾಮ ಮುಂದೆ ನಟನಾ ಕ್ಷೇತ್ರಕ್ಕೆ ಅವರು ಹೆಜ್ಜೆ ಇಟ್ಟರು. ಚಿಕ್ಕಂದಿನಲ್ಲೂ ಅವರು ನಾಟಕಗಳಲ್ಲಿ & ಸ್ಟೇಜ್ ಪ್ರೋಗ್ರಾಮ್ ಮೂಲಕವೂ ನಟನೆ ಕಲಿತಿದ್ದರಂತೆ. ಮುಂದೆ ಏನಾಯ್ತು ಗೊತ್ತಾ?

ರಾಕಿಭಾಯ್ ಯಶ್ ದೊಡ್ಡ ಸಹಾಯ!

ಇನ್ನು ಚಿಕ್ಕಣ್ಣ ಅವರ ಟ್ಯಾಲೆಂಟ್ ಗುರುತಿಸಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಅವರು, ಈ ನಟ ಅಂದ್ರೆ ಚಿಕ್ಕಣ್ಣನ ಜೊತೆಗೆ ಸಿನಿಮಾ ಮಾಡೋದಕ್ಕೆ ನಿರ್ಧರಿಸಿದ್ದರಂತೆ. ಯಶ್ ಅವರ ಈ ನಿರ್ಧಾರವೇ ನಟ ಚಿಕ್ಕಣ್ಣ ಅವರಿಗೆ ಹೊಸ ಬದುಕು ನೀಡುತ್ತದೆ. ನಟ ಚಿಕ್ಕಣ್ಣ ಅವರಿಗೆ ಯಶ್ ಅವರು ಕಿರಾತಕ ಸಿನಿಮಾದಲ್ಲಿ ಅವಕಾಶ ಕೊಡಿಸಿದ್ದರು. ಮುಂದೆ ಕಿರಾತಕ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಚಿಕ್ಕಣ್ಣ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+