ಅಬ್ಬಬ್ಬಾ.. ಚಿಕ್ಕಣ್ಣಗೆ ಮೊದಲ ಸಿನಿಮಾದಲ್ಲೇ ಭರ್ಜರಿ ಲಾಟರಿ!

ಕನ್ನಡ ಸಿನಿಮಾ ಇಂಡಸ್ಟ್ರಿ ಹೊಸ ನಟ & ನಟಿಯರಿಗೆ ಬೆಟ್ಟದಷ್ಟು ಅವಕಾಶ ನೀಡುತ್ತದೆ. ಆದರೆ ಹೀಗೆ ಬರುವ ಹೊಸಬರಲ್ಲಿ, ಕೆಲವೇ ಕೆಲವರು ಅಖಾಡದಲ್ಲಿ ಉಳಿದುಕೊಳ್ಳುತ್ತಾರೆ. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು, ಕಾಮಿಡಿ ನಟನ ಸ್ಥಾನ ಪಡೆದು ಈಗ ಹೀರೋ ಆಗಿರುವ ನಟ ಚಿಕ್ಕಣ್ಣಗೆ ಕೂಡ ಭರ್ಜರಿ ಲಾಟರಿ ಹೊಡೆದಿದೆ!

ಅಂದಹಾಗೆ ಒಬ್ಬ ನಟನ ಮನಸ್ಸಿನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಇರುತ್ತದೆ. ಇದು ಕೆಲವರಿಗೆ ಸಾಧ್ಯವಾದರೆ ಇನ್ನೂ ಕೆಲವರ ಕನಸು ಕನಸಾಗಿ ಉಳಿದು ಬಿಡುತ್ತದೆ. ಅದರಲ್ಲೂ ಹಾಸ್ಯ ನಟನೊಬ್ಬ ಹೀರೋ ಆಗಿ ಎಂಟ್ರಿ ಕೊಡುವುದು ತುಂಬಾನೆ ಕಷ್ಟವಾಗಿರುತ್ತದೆ. ಆದರೆ ಈ ಕಷ್ಟವನ್ನು ಸುಲಭವಾಗಿ ಗೆದ್ದು ಬೀಗಿರುವುದು ನಟ ಚಿಕ್ಕಣ್ಣ ಎನ್ನಬಹುದು. ಯಾಕಂದ್ರೆ ಸುಮಾರು 1 ದಶಕಕ್ಕೂ ಹೆಚ್ಚು ಕಾಲ ಕನ್ನಡಿಗರಿಗೆ ಕಾಮಿಡಿಯ ಕಚಗುಳಿ ಇಡುತ್ತಿದ್ದ ಈ ನಟ ಇದೀಗ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅದು ಹೀರೋ ಆದ ಮೊದಲ ಸಿನಿಮಾದಲ್ಲೇ ಭರ್ಜರಿ ಗೆಲುವು ಕೂಡ ಸಾಧಿಸಿದ್ದಾರೆ.

Sandalwood Movie Upadhyaksha Is Getting Good Review From The Fans

'ಉಪಾಧ್ಯಕ್ಷ'ನ ಅವತಾರಕ್ಕೆ ಪ್ರೇಕ್ಷಕ ಫಿದಾ

ಕನ್ನಡ ಸಿನಿ ರಂಗಕ್ಕೆ 2011ರಲ್ಲಿ ನಟ ಚಿಕ್ಕಣ್ಣ ಎಂಟ್ರಿ ಕೊಟ್ಟಿದ್ದರು ಕಿರಾತಕ ಸಿನಿಮಾ ಮೂಲಕ ಕನ್ನಡಿಗರ ಬಣ್ಣದ ಲೋಕಕ್ಕೆ ಬಂದಿದ್ದರು ಚಿಕ್ಕಣ್ಣ. ಇದಾದ ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದಿದ್ದವು. ಹೀಗೆ ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿಮಾ ರಂಗದಲ್ಲಿ ಬಿಡುವೇ ಇಲ್ಲದ ನಟನಾಗಿ ಬೆಳೆದು ನಿಂತಿದ್ದಾರೆ ಚಿಕ್ಕಣ್ಣ. ಈ ನಟ ಮೊದಲನೆ ಬಾರಿಗೆ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಮಯದಲ್ಲೇ ಪ್ರೇಕ್ಷಕರು & ಕನ್ನಡಿಗರು 'ಉಪಾಧ್ಯಕ್ಷ'ನ ಅವತಾರಕ್ಕೆ ಫಿದಾ ಆಗಿದ್ದಾರೆ.

ನಕ್ಕು ನಕ್ಕು ಸಾಕಾಯ್ತು ಅಂದ್ರು ಜನ!

ಇನ್ನು 'ಉಪಾಧ್ಯಕ್ಷ' ಸಿನಿಮಾ ರಿವ್ಯೂ ವೇಳೆ ಪ್ರೇಕ್ಷಕರು ಕೂಡ ಸಿನಿಮಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಹಾಗೇ ಚಿಕ್ಕಣ್ಣ ಅವರು ಹೀರೋ ಆಗಿ ಎಂಟ್ರಿ ಕೊಟ್ಟಿರುವ ಬಗ್ಗೆ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಚಿಕ್ಕಣ್ಣ ಅವರು ಹೀರೋ ಆಗಿದ್ದರು ಉಪಾಧ್ಯಕ್ಷದಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮರೆತಿಲ್ಲ. ಇದು ಕೂಡ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಈಗ, ಸಿಕ್ಕಾಪಟ್ಟೆ ಇಷ್ಟವಾಗಿದೆ. ಹಾಗೇ ಕುಟುಂಬ ಸಮೇತ ಸಿನಿಮಾ ನೋಡುತ್ತಿದ್ದಾರೆ.

ಚಿಕ್ಕಣ್ಣ ಪವರ್ ಮತ್ತಷ್ಟು ಜೋರು!

ನಟ ಚಿಕ್ಕಣ್ಣ ಕಾಮಿಡಿ ಮಾಡ್ತಾ.. ಮಾಡ್ತಾನೆ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅದರಲ್ಲೂ ಈ ನಟನ ಎಂಟ್ರಿ ಇಲ್ಲದೆ, ಬಹುತೇಕ ಸಿನಿಮಾಗಳು ಗೆಲ್ಲೋದಕ್ಕೆ ಸಾಧ್ಯವೇ ಆಗಿಲ್ಲ ಎನ್ನಬಹುದು. ಯಾಕಂದ್ರೆ ಕನ್ನಡ ಸಿನಿ ರಂಗಕ್ಕೆ ಚಿಕ್ಕಣ್ಣ ಅವರಂತಹ ಒಬ್ಬ ನಟರು ಬೇಕಿದ್ರು. ಆ ಸ್ಥಾನ ತುಂಬಿರುವ ಚಿಕ್ಕಣ್ಣ ಈಗ ಹೀರೋ ಆಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಹೀಗೆ, ಕನ್ನಡ ಸಿನಿಮಾ ಪ್ರೇಕ್ಷಕರು ಉಪಾಧ್ಯಕ್ಷ ಸಿನಿಮಾ ನೋಡಿ ಮೆಚ್ಚಿದ್ದಾರೆ.

Sandalwood Movie Upadhyaksha Is Getting Good Review From The Fans

ಒಟ್ನಲ್ಲಿ ಕನ್ನಡ ಸಿನಿಮಾ ರಂಗ ಈಗ ಎಲ್ಲೆಲ್ಲೂ ತನ್ನ ಪವರ್ ತೋರಿಸುತ್ತಿದೆ. ಇದೇ ವೇಳೆ ಕನ್ನಡ ನೆಲದ ಸಿನಿಮಾಗಳು ಕೂಡ ತಮ್ಮ ಖದರ್ ತೋರಿಸಿವೆ. ಅದರಲ್ಲೂ ಪ್ರೇಕ್ಷಕ ಪ್ರಭು ಕಾಮಿಡಿ ಕಂಟೆಂಟ್ ಇರುವ ಸಿನಿಮಾಗಳನ್ನು ಎಂದಿಗೂ ಸೋಲಿಸಿಲ್ಲ, ಈ ಹಿಂದೆ ಅಧ್ಯಕ್ಷ ಸಿನಿಮಾದಲ್ಲಿ ಕೂಡ ಚಿಕ್ಕಣ್ಣ & ಶರಣ್ ಅವರು ಮಿಂಚಿದ್ದರು. ಅಧ್ಯಕ್ಷ ಸಿನಿಮಾದಲ್ಲಿ ಇದೇ ಚಿಕ್ಕಣ್ಣ ಅವರು ಪೋಷಕ ನಟನಾಗಿ ಮಿಂಚಿದ್ದರು. ಇದೀಗ ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಕನ್ನಡ ಸಿನಿಮಾ ಪ್ರಿಯರ ಮನಸ್ಸಿಗೆ ಮತ್ತಷ್ಟು ಹತ್ತಿರ ಕೂಡ ಆಗಿದ್ದಾರೆ ನಟ ಚಿಕ್ಕಣ್ಣ.

ಅಧ್ಯಕ್ಷ + ಉಪಾಧ್ಯಕ್ಷ = ಎಂಟರ್ಟೈನ್‌ಮೆಂಟ್!

ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟಿರುವ ಬಗ್ಗೆ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಚಿಕ್ಕಣ್ಣ ಅವರು ಹೀರೋ ಆಗಿದ್ದರೂ, ಉಪಾಧ್ಯಕ್ಷದಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಮರೆತಿಲ್ಲ. ಇದು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಕುಟುಂಬ ಸಮೇತ ಈ ಸಿನಿಮಾ ನೋಡುತ್ತಿದ್ದಾರೆ. ಇದರ ಜೊತೆಗೆ ಶರಣ್ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಮೂಲಕ ಚಿಕ್ಕಣ್ಣ & ಶರಣ್ ಅವರ ಕಾಂಬಿನೇಷನ್ ಭರ್ಜರಿ ಸಕ್ಸಸ್ ಕೊಟ್ಟಿದ್ದು, ಹೊಸ ದಾಖಲೆಯ ಬರೆಯುವ ನಿರೀಕ್ಷೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+