Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ: ರಮ್ಯಾ ಹೀಗೆ ಹೇಳಿದ್ಯಾಕೆ?

ಬೆಂಗಳೂರು, ಏಪ್ರಿಲ್‌ 26: ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಿಂದಾಗಿ ಒಟ್ಟು 26 ಜನ ಅಮಾಯಕರು ಬಲಿಯಾಗಿದ್ದಾರೆ. ಈ ದಾಳಿಯಿಂದ ಅವರ ಕುಟುಂಬಸ್ಥರು ಮನೆಗೆ ಆಧಾರಸ್ತಂಭಗಳಾಗಿದ್ದವರನ್ನು ಕಳೆದುಕೊಂಡು ಗೋಳಾಡ್ತಿದ್ದಾರೆ. ಈ ಉಗ್ರದ ದಾಳಿಯಿಂದಾಗಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಮೊದಲ ಬಾರಿಗೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಈ ಉಗ್ರದ ದಾಳಿಯಲ್ಲಿ ಕನ್ನಡಿಗರು ಸಹ ಬಲಿಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಅಮಾಯಕರನ್ನು ಬಲಿ ತೆಗೆದುಕೊಂಡು ಅವರ ಕುಟುಂಬವನ್ನು ಅನಾಥರನ್ನಾಗಿ ಮಾಡಿದೆ. ಈ ಘಟನೆಯನ್ನ ಇಡೀ ಭಾರತವೇ ಖಂಡಿಸಿದ್ದು, ಈ ಬಗ್ಗೆ ಸ್ಯಾಂಡಲ್‌‌ವುಡ್‌ ನಟಿ ರಮ್ಯಾ ಮಾತನಾಡಿದ್ದಾರೆ. ಉಗ್ರರಿಗೆ ಧರ್ಮ ಇಲ್ಲ ಎಂದು ಕೇಂದ್ರದತ್ತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಬೊಟ್ಟು ಮಾಡಿದ್ದಾರೆ. ಉಗ್ರರಿಗೆ ಧರ್ಮ,ಮನುಷ್ಯತ್ವ ಏನೂ ಇರಲ್ಲ. ಮೋದಿ ಸರ್ಕಾರವು ಈ ಬಗ್ಗೆ ಸ್ಟ್ರೀಕ್ಟ್‌‌ ಆ್ಯಕ್ಷನ್‌ ತೆಗೋಬೇಕು. ಯಾವ ಸಮಯದಲ್ಲಿ ಹೀಗೆ ಆಗುತ್ತೆ ಅಂತ ಊಹಿಸಲು ಅಸಾಧ್ಯ ಎಂದು ಹೇಳಿದ್ದಾರೆ.

Sandalwood Actress Ramya Says Terrorists Have No Religion

ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಭರವಸೆ ಇದೆ ಎಂದು ಕೂಡ ರಮ್ಯಾ ಹೇಳಿದ್ದಾರೆ. ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ. ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ ನೋಡಲು ಹೋದರೆ ಅಲ್ಲಿ ಎಲ್ಲರಿಗೆ ಸಹಾಯ ಮಾಡಿರುವುದು ಮುಸಲ್ಮಾನರೇ ಅಲ್ವಾ ಎಂದು ಪ್ರಶ್ನೆ ಮಾಡಿರುವ ರಮ್ಯಾ ಎಲ್ಲಾ ಮುಸ್ಲಿಮ್‌ರನ್ನು ನಾವು ಕೆಟ್ಟವರು ಅಂತ ಹೇಳುವುದಕ್ಕೆ ಸಾಧ್ಯ ಇಲ್ಲ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.

ಇನ್ನು, ಸದ್ಯ ಚಿತ್ರರಂಗದಿಂದ ದೂರ ಸರಿದು ಆ ನಂತರ ರಾಜಕೀಯದ ಚದುರಂಗವಾಡಲು ಹೋದ ರಮ್ಯಾ ಅವರ ಸದ್ಯ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆರರಿಸಂಗೆ ಯಾವ ಧರ್ಮನೂ ಬರಲ್ಲ, ಮನುಷ್ಯತ್ವನೂ ಇರಲ್ಲ ಎಂದಿರುವ ರಮ್ಯಾ ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಎಲ್ಲ ದೇಶಗಳಲ್ಲಿಯೂ ಈ ತರಹದ ಘಟನೆಗಳು ನಡೆಯುತ್ತವೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದಿರುವ ರಮ್ಯಾ ಈ ತರಹದ ಘಟನೆಗಳಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ನೋವು ಹಂಚಿಕೊಂಡಿದ್ದಾರೆ.

ಪ್ರವಾಸಿ ತಾಣದಲ್ಲಿನ ಭದ್ರತಾ ವೈಫಲ್ಯನ ನಾವು ಪ್ರಶ್ನೆ ಮಾಡಬೇಕಾಗುತ್ತೆ ಎಂದು ಹೇಳಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧ ನಮ್ಮ ದೇಶ ಯಾವಾಗಲೂ ಕಠಿಣ ಕ್ರಮ ಕೈಗೊಳ್ಳಲೇಬೇಕು. ಇಂತಹ ಪೈಶಾಚಿಕ ಕೃತ್ಯಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ. ಗಡಿಭಾಗಗಳಲ್ಲಿ ಇನ್ನಷ್ಟು ಸೆಕ್ಯೂರಿಟಿ ಹೆಚ್ಚಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ನಟಿ ರಮ್ಯಾ ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಭದ್ರತಾ ವ್ಯವಸ್ಥೆ ಯಾಕೆ ಇರಲಿಲ್ಲ ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಯನ್ನು ಕೂಡ ಕಾರುತ್ತಿದ್ದಾರೆ ಕೇಂದ್ರ ಸರ್ಕಾರದ ವೈಫಲ್ಯನಾ ಎನ್ನುವ ಪ್ರಶ್ನೆಗೆ ಇದು ಯಾರ ಕೈಯಲ್ಲಿ ಕೂಡ ಇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ಸಮಯದಲ್ಲಿ ಇದು ಇಂಟೆಲಿಜೆನ್ಸ್ ಫೇಲ್ಯೂರ್ ಹೌದು ಎಂದು ಒಪ್ಪಿಕೊಂಡಿರುವ ರಮ್ಯಾ ಸೆಕ್ಯೂರಿಟಿ ಲ್ಯಾಪ್ಸ್ ಆಗಬಾರದು. ಆದರೆ ಯಾರೂ 100 % ಕಂಟ್ರೋಲ್ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+