ನಾವೇನು ಮಾಡ್ತೀವಿ ಅಂತಾ ಬಾಣಂತನ ಮಾಡಿಕೊಳ್ಳಬೇಕು- ನಟಿ ಅದಿತಿ ಪ್ರಭುದೇವ
ಬೆಂಗಳೂರು, ಸೆಪ್ಟೆಂಬರ್ 05: ಕನ್ನಡ ಚಿತ್ರರಂಗದ ಶಾನೆ ಟಾಪ್ ಚಲುವೆ ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ತಾಯ್ತನವನ್ನು ಎಂಜಾಯ್ ಮಾಡುತ್ತಾ ಜೊತೆಗೆ ಕೆಲಸದಲ್ಲಿ ಕೂಡ ಆ್ಯಕ್ಟಿವ್ ಆಗಿದ್ದಾರೆ. ಮಗು ಹುಟ್ಟಿದ ಕೇವಲ ಮೂರು ತಿಂಗಳ ಒಳಗೆ ಅದಿತಿ ಪ್ರಭುದೇವ ರಾಜ-ರಾಣಿ ಶೋ ಮೂಲಕ ಮತ್ತೆ ಕ್ಯಾಮರ ಮುಂದೆ ಕಂಬ್ಯಾಕ್ ಮಾಡಿದರು. ಮಗು ಹುಟ್ಟಿದ ಕೆಲವೇ ತಿಂಗಳಲ್ಲಿ ಕೆಲಸ ಮಾಡಲು ಶುರು ಮಾಡಿರುವುದು ಯಾಕೆ ಎನ್ನುವುದನ್ನು ಸ್ವತಃ ಅದಿತಿ ಪ್ರಭುದೇವ ಹೇಳಿಕೊಂಡಿದ್ದಾರೆ.
Rapid Rashmi ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ನಟಿ ಅದಿತಿ ಪ್ರಭುದೇವ, ಮೊದಲು ರಾಜ ರಾಣಿ ಕರೆ ಬಂದಾಗ ಬೇಡ ನನ್ನ ಕೈಯಲ್ಲಿ ಆಗುತ್ತೋ ಇಲ್ಲವೋ ಅನಿಸಿತು. ಆಗಿನ್ನು ಪಾಪುಗೆ ಎರಡು ತಿಂಗಳು ಆಗಿತ್ತು. ಆಗ ನನಗೆ ಅಷ್ಟು ಧೈರ್ಯ ಇರಲಿಲ್ಲ. ಮಾಡಬೇಕೋ ಬೇಡವೋ ಅಂತಾ ಗೊಂದಲದಲ್ಲೇ ಇದ್ದೆ. ನನ್ನ ಗಂಡನಿಗೆ ಆಗ ನಿಜವಾದ ಪ್ರೀತಿ ಶುರುವಾಯ್ತು ಅನಿಸುತ್ತದೆ. ಫಸ್ಟ್ ಟೈಂ ನಮ್ಮ ಯಜಮಾನರು ಮಾಡು ಇಷ್ಟು ದಿನ ಹೀಗೆ ಹೋಗಿದೆ ಅಂತಾ ಧೈರ್ಯ ತುಂಬಿದರು ಎಂದರು.

ವಾರದಲ್ಲಿ ಒಂದೇ ದಿನ ಶೂಟಿಂಗ್ ಗೊತ್ತೇ ಆಗದೇ ಹೋಗುತ್ತದೆ ಎಂದರು. ಜೊತೆಗೆ ಅವರೇ ಬಂದು ಆ ಟೀಂ ಜೊತೆ ಮಾತನಾಡಿದರು. ನಮ್ಮ ಕೆಲವು ಬೇಡಿಕೆಗಳಿಗೆ ಅವರು ಒಕೆ ಅಂದರು. ಹೀಗಾಗಿ ರಾಜ ರಾಣಿ ಶೋ ಒಪ್ಪಿಕೊಂಡೆ. ಮೊದಲ ಎರಡು ಸಂಚಿಕೆ ಬ್ಲ್ಯಾಂಕ್ ಆಗಿದ್ದೆ. ತಲೆಯಲ್ಲಿ ಮಗುವಿನ ಬಗ್ಗೆಯೇ ಆಲೋಚನೆ ಇತ್ತು. ಮೂರನೇ ಸಂಚಿಕೆಗೆ ಸರಿ ಹೋಯ್ತು ಎಂದು ಹೇಳಿದರು.
ಮಗು ಆದ ಮೇಲೆ ಎಲ್ಲಾ ಬಾಣಂತನ ಬಾಣಂತನ ಅಂತಾ ಹೇಳುತ್ತಾರೆ. ಏನು ಬಾಣಂತನ. ನಿಜ ಹೇಳಬೇಕು ಅಂದರೆ ಹಿಂದೆಲ್ಲಾ ಹೇಗಿತ್ತು ಅಂದರೆ ಕುಟ್ಟುವ ಕೆಲಸ, ಬೀಸುವ ಕೆಲಸ, ಬಗ್ಗೆ ನೆಲವರಿಸುವುದು ಈ ರೀತಿಯ ಕೆಲಸಗಳನ್ನು ಮಾಡಬೇಕಿತ್ತು. ಅದರಿಂದ ತಾಯಿ ಆದವಳಿಗೆ ತುಂಬಾ ಕಷ್ಟವಾಗುತ್ತಿತ್ತು. ಹೀಗಾಗಿ ಆ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ ಅಂತಾ ಹೇಳುತ್ತಿದ್ದರು.

ಆದರೆ ಈವಾಗ ಏನಿದೆ..? ನಾವೇನು ಮಾಡುತ್ತೇವೆ..? ಏನು ಕೆಲಸ ಮಾಡುತ್ತೇವೆ ನಾವು..? ಹಿಂಗಂದ್ರೆ ಮಿಕ್ಸ್ ಆನ್ ಆಗುತ್ತದೆ. ಹಿಂಗಂದ್ರೆ ಫ್ರಿಡ್ಜ್ ತೆಗೆಯುತ್ತದೆ. ಬಟ್ಟೆ ಒಗೆಯೋಕೆ ವಾಷಿಂಗ್ ಮಿಷಿನ್ ಇದೆ. ನಾವು ಮಾಡುವ ಕೆಲಸದಲ್ಲಿ ಏನು ರಿಸ್ಕ್ ಇದೆ ಅಂತಾ ನಾವು ಅಯ್ಯೋ ಅನ್ನುತ್ತಿರಬೇಕು. ಈಗಿನ ಡಾಕ್ಟರ್‌ಗಳೇ ಹೇಳುತ್ತಾರೆ ಆ್ಯಕ್ಟಿವ್ ಆಗಿದ್ದಷ್ಟು ಬೇಗ ಹುಷಾರಾಗುತ್ತೇವೆ ಅಂತಾ. ನನ್ನ ಮನೆ ಕಟ್ಟುವ ಸಮಯದಲ್ಲಿ ಒಂದು ಎರಡು ಮೂರು ತಿಂಗಳು ಮಗುವನ್ನು ಅಲ್ಲೇ ಜೋಲಿ ಕಟ್ಟಿ ಮಲಗಿಸಿ ಕಲ್ಲು ಹೊರುತ್ತಿರುತ್ತಾರೆ. ಅಂತಹ ತಾಯಂದಿರ ಮುಂದೆ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ನಾನೇನೋ ಮಾಡುತ್ತಿದ್ದೇನೆ ಅಂತಾ ನನಗೆ ಅನಿಸಲ್ಲ ಅಂತಾ ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.












Click it and Unblock the Notifications